ಕಾಗದದಲ್ಲೇ ಮುಗಿದ ನವೀಕರಣ ಕಾಮಗಾರಿ

  • ಜಿಪಂ ಆಡಳಿತಾತ್ಮಕ ಮಂಜೂರಾತಿಯೂ ಇಲ್ಲ. ಇಓ ಕಚೇರಿ ನವೀಕರಣವೂ ಇಲ್ಲ, ಆದರೂ 2.26ಲಕ್ಷ ಹಣ ಪಾವತಿ
  • ತಪ್ಪಿತಸ್ಥ ಅಧಿಕಾರಿಗಳ ವಿರುದ್ಧ ಕಾನೂನು ಕ್ರಮ, ಗುತ್ತಿಗೆದಾರನನ್ನು ಕಪ್ಪು ಪಟ್ಟಿಗೆ ಸೇರಿಸಲು ಆಗ್ರಹ

ಕೊಳ್ಳೇಗಾಲ: ಬೇಲಿಯೇ ಎದ್ದು ಹೂಲ ಮೇಯ್ದಿ ಹಾಗೇ ಕೊಳ್ಳೇಗಾಲ ವಿಧಾನ ಸಭಾ ಕ್ಷೇತ್ರ ವ್ಯಾಪ್ತಿಯ ಯಳಂದೂರು ತಾಲೂಕು ಪಂಚಾಯಿತಿ ಕಾರ್ಯನಿರ್ವಹಣಾಧಿ ಕಾರಿಗಳ ಕಚೇರಿ ನವೀಕರಣ ಕಾಮಗಾರಿ ಮಾಡದೆ ಗುತ್ತಿಗೆದಾರನಿಗೆ 2,26,375 ರೂ. ಬಿಲ್ ಪಾವತಿ ಮಾಡಿರುವ ಘಟನೆ ತಡವಾಗಿ ಬೆಳಕಿಗೆ ಬಂದಿದೆ.

2017-18ನೇ ಸಾಲಿನ ಮಾರ್ಚ್ ತಿಂಗಳಲ್ಲಿ ಕೃಷ್ಣಪುರ ಗ್ರಾಮ ಗುತ್ತಿಗೆದಾರ ಎಂ.ದೇವರಾಜು ಎಂಬುವರ ಹೆಸರಿಗೆ ನವೀಕರಣ ಕಾಮಗಾರಿ ಮಾಡಿಸಿದ್ದಾರೆ ಎಂದು ನಕಲಿ ಬಿಲ್ ಪಡೆದು 2,26,375 ಹಣ ಪಾವತಿ ಮಾಡಿರುವುದು ಹಲವು ಸಂಶಯಗಳಿಗೆ ಎಡೆ ಮಾಡಿಕೂಟ್ಟಿದೆ.

ತಾಲೂಕು ಪಂಚಾಯಿತಿ ಕಾರ್ಯನಿರ್ವ ಹಣಾಧಿಕಾರಿಗಳ ಕಚೇರಿಯಲ್ಲಿ ಯಾವುದೇ ಕೆಲಸ ಮಾಡಿಲ್ಲ. ಆದರೂ, ಪಂಚಾಯಿತಿ ಅನುದಾನದಲ್ಲಿ ಕಾಮಗಾರಿ ಮಾಡಿರುವ ನೆಪದಲ್ಲಿ ಲಕ್ಷಾಂತರ ರೂಪಾಯಿ ಬಿಲ್ ಪಾವತಿ ಮಾಡಿದ್ದಾರೆ.

ಯಾವಾಗ ನಡೆದಿದೆ?: ನಂಜುಂಡಯ್ಯ ತಾ.ಪಂ. ಅಧ್ಯಕ್ಷರಾಗಿದ್ದ ಸಂದರ್ಭದಲ್ಲಿ 2017-18ನೇ ಸಾಲಿನ ಮಾರ್ಚ್ ತಿಂಗ ಳಲ್ಲಿ ಪಂಚಾಯಿತಿ ಕಾರ್ಯನಿರ್ವಹಣಾಧಿ ಕಾರಿಯಾಗಿದ್ದ ಶಶಿಧರ್ ಮತ್ತು ಎಂಜಿ ನಿಯರ್ ಸೇರಿದಂತೆ ಕಚೇರಿ ಲೆಕ್ಕಾ ಧಿಕಾರಿಗಳು ಭಾಗಿಯಾಗಿ ಕಾಮಗಾರಿ ಮಾಡದೆ ಬಿಲ್ ಪಾಸ್ ಮಾಡಿ ಭ್ರಷ್ಟಾ ಚಾರವೆಸಗಿದ್ದಾರೆ ಎಂಬ ಗಂಭೀರ ಆರೋಪ ಕೇಳಿ ಬಂದಿದೆ.

ಅಭಿವೃದ್ಧಿ ಹಣ ಅನಗತ್ಯ ಪೋಲು: ಪ್ರತಿ ವರ್ಷವೂ ತಾಲೂಕು ಪಂಚಾಯಿತಿಗೆ ಗ್ರಾಮೀಣ ಪ್ರದೇಶದ ಕುಡಿಯುವ ನೀರು, ರಸ್ತೆ, ಚರಂಡಿ ಸೇರಿದಂತೆ ಇತರೆ ಮೂಲ ಸೌಲಭ್ಯ ಕಲ್ಪಿಸಲು ಸÀರ್ಕಾರ ಇಂತಿಷ್ಟೋ ಅನುದಾನವೆಂದು ನಿಗದಿಪಡಿಸಿ ನೀಡು ತ್ತದೆ. ಅಂತಹ ಅನುದಾನಗಳನ್ನು ಸ್ಥಳೀಯ ಜನಪ್ರತಿನಿಧಿಗಳ ಕಚೇರಿ ನವೀ ಕರಣ ಸೇರಿದಂತೆ ಜನಪ್ರತಿನಿಧಿಗಳಿಗೆ ಅನು ಕೂಲವಾಗುವ ರೀತಿ ಬಳಸಿಕೊಳ್ಳದೆ. ಗುತ್ತಿಗೆ ದಾರರ ಹೆಸರಿನಲ್ಲಿ ಅಧಿಕಾರಿಗಳು ಶಾಮೀ ಲಾಗಿ ಅನುದಾನ ದುರ್ಬಳಕೆ ಮಾಡಿ ಕೊಂಡಿರುವುದು ಕಂಡು ಬಂದಿದೆ.

ಜಿಪಂಆಡಳಿತ್ಮಾಕ ಮಂಜೂರಾತಿ ಇಲ್ಲ: ತಾಪಂ ಇಓ ಕಚೇರಿ ನವೀಕರಣ ಕಾಮ ಗಾರಿಗೆ ಜಿಪಂನಿಂದ ಆಡಳಿತ್ಮಾಕ ಮಂಜೂ ರಾತಿ ಪಡೆಯದೆ ಸಾದೀಲ್‍ವಾರ್ ಲೆಕ್ಕ ಶಿರ್ಷಿಕೆಯಲ್ಲಿ (ಡಿಸಿ ಬಿಲ್) ಮೂಲಕ 2.50ಲಕ್ಷ ಅಂದಾಜು ಪಟ್ಟಿ ತಯಾರಿಸಿ 2018 ಮಾರ್ಚ್ 28ರಂದು ಅಂದಿನ ಇಒ ಮತ್ತು ವಿಷಯ ನಿರ್ವಾಹಕ ಅವರು ಗುತ್ತಿಗೆದಾರನಿಗೆ ಕಾಮಗಾರಿ ವೆಚ್ಚ ಎಂದು 2,26,375 ಹಣ ಪಾವತಿ ಮಾಡಿದ್ದಾರೆ.

ಜಿಲ್ಲಾ ಪಂಚಾಯಿತಿ ಕಚೇರಿಯಲ್ಲಿ ಆಡ ಳಿತ್ಮಾಕ ಮಂಜೂರಾತಿಯಾದ ಬಳಿಕವೇ ತಾಪಂ ಒಂದು ಸಣ್ಣ ಟೀ, ಕಾಫಿ ಪೇಪರ್ ಬಿಲ್ ಪಾವತಿ ಮಾಡಬೇಕು. ಆದರೆ, ಇಷ್ಟೋಂದು ಹಣವನ್ನು ಮೇಲಧಿಕಾ ರಿಗಳ ಅನುಮತಿಯನ್ನು ಪಡೆಯದೆ ಹೇಗೆ ಗುತ್ತಿಗೆದಾರನ ಹೆಸರಿಗೆ ನೀಡಲಾಯಿತು ಎನ್ನುವುದು ಪ್ರಶ್ನೆಯಾಗಿದೆ.

ತಾಪಂನಲ್ಲಿ ಅನುದಾನ ದುರ್ಬಳಕೆಯಾಗಿರುವ ಬಗ್ಗೆ ಸೂಕ್ತ ಮಾಹಿತಿ ನನ್ನ ಗಮನಕ್ಕೆ ಬಂದಿಲ್ಲ. ಈ ಬಗ್ಗೆ ಇಲಾಖೆ ಅಧಿಕಾರಿಗಳಿಂದ ಮಾಹಿತಿ ಪಡೆದು ತನಿಖೆ ನಡೆಸಲಾಗುಚವುದು. ಭ್ರಷ್ಟಾಚಾರದಲ್ಲಿ ಭಾಗಿಯಾಗಿರುವ ಅಧಿಕಾರಿಗಳ ವಿರುದ್ಧ ಕಾನೂನು ಕ್ರಮ ಜರಿಗಿಸಲಾಗುವುದು. – ಡಾ.ಕೆ.ಹರೀಶಕುಮಾರ್, ಜಿಪಂ ಸಿಇಓ ಚಾಮರಾಜನಗರ

 

ಗ್ರಾಮೀಣ ಪ್ರದೇಶಗಳ ಅಭಿವೃದ್ಧಿಗೆ ಬಂದ ಅನುದಾನವನ್ನು ಅಧಿಕಾರಿಗಳು ಕಾಮಗಾರಿ ಹೆಸರಿನಲ್ಲಿ ಕಾಗದ ಪತ್ರದಲ್ಲೆ ಲೆಕ್ಕ ತೋರಿಸಿ ರ್ದುಬಳಕೆ ಮಾಡಿಕೊಂಡಿ ರುವ ಬಗ್ಗೆ ಜಿ.ಪಂ.ಸಿಇಓ ತನಿಖೆ ನಡೆಸಬೇಕು. ತಪ್ಪಿಸ್ಥರ ವಿರುದ್ಧ ಕಾನೂನು ಕ್ರಮ ಜರಿಗಿಸಬೇಕು ಇಲ್ಲವಾದರೆ ತಾ.ಪಂ.ಕಚೇರಿ ಮುಂದೆ ಧರಣ ನಡೆಸಲಾಗುವುದು. – ಪ್ರಕಾಶ್, ಜಿಲ್ಲಾಧ್ಯಕ್ಷರು, ಕರ್ನಾಟಕ ರಾಜ್ಯ ರೈತ ಸಂಘ