ಸ್ಕೂಲ್ ಆಟೊ, ಕ್ಯಾಬ್ ಚಾಲಕರಿಂದ ಡಿಸಿಗೆ ಮನವಿ

ಹಾಸನ, ಜೂ.26- ಪೊಲೀಸರು ಶಾಲಾ ಮಕ್ಕಳ ವಾಹನ ತಡೆದು ದಂಡ ವಿಧಿಸುತ್ತಿರುವುದು ದೊಡ್ಡ ಸಮಸ್ಯೆಯಾಗಿದ್ದು, ಕೂಡಲೇ ಬಗೆಹರಿಸುವಂತೆ ಒತ್ತಾಯಿಸಿ ಆಟೋ ಚಾಲಕರು, ವ್ಯಾನ್‍ಗಳ ಮಾಲೀಕರು ಜಿಲ್ಲಾಡಳಿತಕ್ಕೆ ಬುಧವಾರ ಮನವಿ ಸಲ್ಲಿಸಿದರು.

ಶಾಲಾ ಮಕ್ಕಳನ್ನು ಮನೆಯಿಂದ ಶಾಲೆಗೆ, ಮತ್ತೆ ಶಾಲೆಯಿಂದ ಮನೆಗೆ ಕರೆದೊಯ್ಯುವ ಕೆಲಸವನ್ನು ಹಲವು ವರ್ಷಗಳಿಂದ ಕಡಿಮೆ ಧರ ಪಡೆದು ನಿರ್ವಹಿಸಲಾಗುತ್ತಿದೆ. ಆದರೆ ಇತ್ತೀಚೆಗೆ ಸಂಚಾರ ಠಾಣೆ ಪೊಲೀಸರು ನಮ್ಮ ವಾಹನ ಕಂಡರೆ ಸಾಕು ತಡೆದು ದಂಢ ವಿಧಿಸುತ್ತಿದ್ದಾರೆ. ಎಲ್ಲಾ ತರಹದ ದಾಖಲಾತಿಗಳು ಸರಿಯಾಗಿದ್ದರೂ ಭಾರೀ ಪ್ರಮಾಣದಲ್ಲಿ ದಂಡ ವಿಧಿಸುತ್ತಿದ್ದಾರೆ ಎಂದು ದೂರಿದರು.

ಶಾಲಾ ವಾಹನ ಹೋಗದ ಕಡೆಗಳಿಂದ ಹಾಗೂ ಶಾಲಾ ವಾಹನ ಇಲ್ಲದಿರುವ ಶಾಲೆಗಳಿಗೆ ಮಕ್ಕಳನ್ನು ಕರೆದುಕೊಂಡು ಹೋಗುವ ಕೆಲಸ ಮಾಡುತ್ತಿದ್ದೇವೆ. ಮಕ್ಕಳನ್ನು ಶಾಲೆಗೆ ಬಿಡಲು ಪ್ರತಿ ಮಗುವಿಗೆ ತಿಂಗಳಿಗೆ ಪೋಷಕರು ಕೇವಲ 500 ರೂ. ನೀಡುತ್ತಿದ್ದಾರೆ. ಇಷ್ಟರಿಂದಲೇ ನಾವು ಜೀವನ ನಡೆಸುತ್ತಿದ್ದೇವೆ. ಈ ಬಗ್ಗೆ ಪರಿಶೀಲಿಸಿ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಜಿಲ್ಲಾ ಉಸ್ತವಾರಿ ಸಚಿವ ಹೆಚ್.ಡಿ.ರೇವಣ್ಣ ಹಾಗೂ ಜಿಲ್ಲಾಡಳಿತಕ್ಕೆ ಮನವಿ ಮಾಡಿದರು.

ಈ ಸಂದರ್ಭ ವಾಹನ ಮಾಲೀಕರಾದ ಸಮೀರ್ ಅಹಮದ್, ಆಟೋ ಚಾಲಕರ ಸಂಘದ ಅಬ್ಬಾಸ್ ಮತ್ತಿತರರಿದ್ದರು.