ನಾಲ್ಕುನಾಡು ಅರಮನೆ ಸಂರಕ್ಷಣೆಗೆ ಮನವಿ

ಮಡಿಕೇರಿ:  ನಾಲ್ಕು ನಾಡು ಅರಮನೆ ಸಂರಕ್ಷಣೆಗೆ ವಿಧಾನ ಪರಿಷತ್ ಸದಸ್ಯ ಎಂ.ಪಿ.ಸುನೀಲ್ ಸುಬ್ರಮಣಿ ಮನವಿ ಮಾಡಿದ್ದಾರೆ. ಅವರು ವಿಧಾನಪರಿಷತ್‍ನಲ್ಲಿ ಹಲವು ಪ್ರಶ್ನೆಗಳನ್ನು ಕೇಳಿ ಗಮನ ಸೆಳೆದು ಈ ಮನವಿ ಮಾಡಿದರು.

ಕೊಡಗು ಜಿಲ್ಲೆಯಲ್ಲಿರುವ ಮಡಿಕೇರಿ ತಾಲೂಕಿನ ನಾಲ್ಕುನಾಡು ಅರಮನೆ ಪ್ರಸ್ತುತ ರಾಜ್ಯ ಸರ್ಕಾರದ ಸುಪರ್ದಿಯಲ್ಲಿದೆಯೇ? ಎಂಬ ಸುನೀಲ್ ಸುಬ್ರಮಣಿ ಅವರ ಪ್ರಶ್ನೆಗೆ ಕನ್ನಡ ಮತ್ತು ಸಂಸ್ಕೃತಿ ಸಚಿವರು ಹೌದು ಎಂದು ಉತ್ತರಿಸಿದರು.

ಇದ್ದಲ್ಲಿ ಈ ನಾಲ್ಕುನಾಡು ಅರಮನೆಯನ್ನು ಸುಸ್ಥಿತಿಯಲ್ಲಿ ಕಾಪಾಡಲು ಯಾವ ಕ್ರಮ ವಹಿಸಲಾಗಿದೆ? ಎಂಬ ಪ್ರಶ್ನೆಗೆ ನಾಲ್ಕುನಾಡು ಅರಮನೆಯ ಪ್ರದೇಶದಲ್ಲಿ ಒತ್ತುವರಿಯಾಗಿದ್ದ ಪ್ರದೇಶವನ್ನು ಜಿಲ್ಲಾಡಳಿತ ಸಹಕಾರದೊಂದಿಗೆ ದಿನಾಂಕ 17-05-2012 ರಂದು ತೆರವುಗೊಳಿಸಿ ಈ ಭಾಗದಲ್ಲಿ 167.20ಮೀ. ಚೈನ್‍ಲಿಂಕ್ ಫೆನ್ಸಿಂಗ್‍ನ್ನು ಅಳವಡಿಸಲಾಗಿದೆ. ಸೋಲಾರ್ ಲ್ಶೆಟಿಂಗ್ ವ್ಯವಸ್ಥೆ, ಅರಮನೆಗೆ ಪಕ್ಷಿಗಳು ಒಳ ನುಸುಳದಂತೆ ರಕ್ಷಣೆಗೆ ನೈಲಾನ್ ನೆಟ್ ಅನ್ನು ಅಳವಡಿಸಲಾಗಿದೆ. ಹಾಳಾಗಿದ್ದ ಕಿಟಕಿಗಳನ್ನು ರಿಪೇರಿ ಮಾಡಿ ಮಸ್ಕಿಟೊಮೆಷ್ ಅನ್ನು ಅಳವಡಿಸಲಾಗಿದೆ. ಒಟ್ಟಾರೆ ಈ ಕಾಮಗಾರಿಗಳಿಗೆ ರೂ.10.79 ಲಕ್ಷಗಳನ್ನು ವೆಚ್ಚ ಮಾಡಲಾಗಿದೆ. ಅರಮನೆಯ ರಕ್ಷಣೆಗಾಗಿ 24×7 ವೇಳಾ ಅವಧಿಗೆ ಭದ್ರತಾ ಸಿಬ್ಬಂದಿ ಯನ್ನು ನೇಮಿಸಲಾಗಿದೆ ಎಂದು ತಿಳಿಸಿದರು.

ಪ್ರಸ್ತುತ ಸಾಲಿನಲ್ಲಿ ನಿರ್ವಹಣೆಗೆ ಬಿಡುಗಡೆ ಮಾಡಲಾದ ಅನುದಾನವೆಷ್ಟು? ಎಂಬ ಪ್ರಶ್ನೆಗೆ ಪ್ರಸಕ್ತ ಆರ್ಥಿಕ ಸಾಲಿನಲ್ಲಿ ಯಾವುದೇ ಅನುದಾನವನ್ನು ನಿಗದಿ ಪಡಿಸಿಕೊಂಡಿರುವು ದಿಲ್ಲ ಎಂದು ಸಚಿವರು ತಿಳಿಸಿದ್ದಾರೆ. ಒಂದು ವೇಳೆ ರಾಜ್ಯ ಸರ್ಕಾರದ ಸುಪರ್ದಿಯಲ್ಲಿಲ್ಲದಿದ್ದರೆ, ಕೇಂದ್ರ ಸರ್ಕಾರಕ್ಕೆ ನಿರ್ವ ಹಣೆಗಾಗಿ ಪ್ರಸ್ತಾವನೆ ಸಲ್ಲಿಸಲಾಗಿದೆಯೇ? ಎಂಬ ಪ್ರಶ್ನೆಗೆ ಸರ್ಕಾ ರದ ಆದೇಶ ಸಂಖ್ಯೆ ಐಟಿವೈ 143 ಕೆಎಂಯು 84 ದಿನಾಂಕ 13-04-1987 ರಲ್ಲಿ ರಾಜ್ಯ ಸಂರಕ್ಷಿತ ಸ್ಮಾರಕವೆಂದು ಘೋಷಣೆ ಯಾಗಿರುವುದರಿಂದ ಕೇಂದ್ರ ಸರ್ಕಾರಕ್ಕೆ ನಿರ್ವಹಣೆಗೆ ಪ್ರಸ್ತಾವನೆ ಯನ್ನು ಸಲ್ಲಿಸುವ ಅಗತ್ಯವಿರುವುದಿಲ್ಲ ಸಚಿವರು ತಿಳಿಸಿದರು.