ರೈಲ್-ರೋಡ್ ಹೆರಿಟೇಜ್ ಗ್ಯಾಲರಿಗೆ ಉಚಿತ ಪ್ರವೇಶ ಕಲ್ಪಿಸಲು ಆಗ್ರಹ

ಮೈಸೂರು,ಆ.2(ಎಂಟಿವೈ)- ಮೈಸೂರಿನ ರೈಲು ನಿಲ್ದಾಣದಲ್ಲಿ ನಿರ್ಮಿಸಲಾಗಿರುವ ‘ರೈಲ್-ರೋಡ್ ಹೆರಿಟೇಜ್ ಗ್ಯಾಲರಿ’ ವೀಕ್ಷಣೆಗೆ ಪ್ಲಾಟ್‍ಫಾರಂ ಟಿಕೆಟ್ ಪಡೆಯಲೇಬೇಕೆಂಬ ನಿಯಮದಿಂದ ತೊಂದರೆ ಆಗುತ್ತಿದೆ. ಹಾಗಾಗಿ, ಉಚಿತ ಪ್ರವೇಶ ಮತ್ತು ಪ್ರತ್ಯೇಕ ದ್ವಾರದ ವ್ಯವಸ್ಥೆ ಮಾಡುವಂತೆ ಸಾರ್ವಜನಿಕರು ಒತ್ತಾಯಿಸಿದ್ದಾರೆ.

ರೈಲು ನಿಲ್ದಾಣದ ಫ್ಲಾಟ್‍ಫಾರಂ 1ರಲ್ಲಿ ‘ರೈಲ್-ರೋಡ್ ಹೆರಿಟೇಜ್ ಗ್ಯಾಲರಿ’ ಅತ್ಯದ್ಭುತ ರೀತಿ ಮೂಡಿ ಬಂದಿದೆ. ರೈಲು ಪ್ರಯಾಣಿಕರ ವೀಕ್ಷಣೆಗಾಗಿಯೇ ಗ್ಯಾಲರಿ ಸ್ಥಾಪಿಸಲಾಗಿದೆಯಾದರೂ ಪ್ರವಾಸಿಗರು ಹಾಗೂ ಮೈಸೂರಿನ ನಿವಾಸಿಗಳು ನೋಡಲು ಯೋಗ್ಯವಾಗಿದೆ.

ರೈಲು ನಿಯಮಗಳ ಪ್ರಕಾರ ಪ್ಲಾಟ್‍ಫಾರಂ ಪ್ರವೇ ಶಿಸಲು ಟಿಕೆಟ್ ಕಡ್ಡಾಯ. ಈ ನಿಯಮವೇ ರೈಲ್-ರೋಡ್ ಹೆರಿಟೇಜ್ ಗ್ಯಾಲರಿ ವೀಕ್ಷಣೆಗೆ ತೊಡಕಾಗಿದೆ. ರೈಲು ಪ್ರಯಾಣದ ಟಿಕೆಟ್ ಪಡೆಯಲು ಸರತಿ ಸಾಲಿನಲ್ಲಿ ನಿಲ್ಲುವ ಪ್ರಯಾಣಿಕರೊಂದಿಗೆ ಗ್ಯಾಲರಿ ವೀಕ್ಷಣೆಗೆ ಬರುವ ಪ್ರವಾಸಿಗರು ನಿಂತು ಪ್ಲಾಟ್‍ಫಾರಂ ಟಿಕೆಟ್ ಪಡೆಯ ಬೇಕಿದೆ. ರೈಲು ಇನ್ನೇನು ಹೊರಡಬಹುದೆಂಬ ಆತಂಕ ದಲ್ಲಿ ಟಿಕೆಟ್ ಪಡೆಯಲು ಪ್ರಯಾಣಿಕರು ಒತ್ತಡದಲ್ಲಿರು ವಾಗ ಗ್ಯಾಲರಿ ವೀಕ್ಷಕರೂ ಅದೇ ಸಾಲಿನಲ್ಲಿ ನಿಲ್ಲುವುದ ರಿಂದ ಇಬ್ಬರಿಗೂ ತೊಂದರೆ ಆಗುತ್ತಿದೆ. ಈ ಹಿನ್ನೆಲೆಯಲ್ಲಿ ಗ್ಯಾಲರಿ ವೀಕ್ಷಣೆ ಟಿಕೆಟ್ ರದ್ದುಪಡಿಸಬೇಕು ಎಂಬ ಒತ್ತಾಯ ಸಾರ್ವಜನಿಕರು ಮತ್ತು ಪ್ರವಾಸಿಗರದ್ದಾಗಿದೆ.

ಪ್ರತ್ಯೇಕ ಸಾಲು ಏರ್ಪಡಿಸಿ: ಸೊಗಸಾಗಿ ನಿರ್ಮಿಸಿರುವ ರೈಲ್-ರೋಡ್ ಹೆರಿಟೇಜ್ ಗ್ಯಾಲರಿಯನ್ನು ಪ್ರವಾ ಸಿಗರು ಹಾಗೂ ಸಾರ್ವಜನಿಕರ ಸುಲಭ ವೀಕ್ಷಣೆಗೆ ಅನುವು ಮಾಡಿಕೊಡುವ ನಿಟ್ಟಿನಲ್ಲಿ ಪ್ರತ್ಯೇಕ ದ್ವಾರ ಅಳವಡಿಸಬೇಕು. ರೈಲ್ವೆ ಇಲಾಖೆ ಲಕ್ಷಾಂತರ ರೂ. ವೆಚ್ಚ ಮಾಡಿ ನಿರ್ಮಿಸಿರುವ ಗ್ಯಾಲರಿಯ ಸೊಬಗನ್ನು ಹೆಚ್ಚಿನ ಜನರು ವೀಕ್ಷಿಸಲು ಇದರಿಂದ ಅನುಕೂಲವಾಗ ಲಿದೆ ಎಂದು ಸಾರ್ವಜನಿಕರ ಮನವಿ ಮಾಡಿದ್ದಾರೆ.

ರೈಲ್ವೆ ಪ್ರಯಾಣಿಕರಿಗಾಗಿ: ರೈಲುಗಳು ತಡವಾದಾಗ ಕಾಯುತ್ತಾ ಕುಳಿತ ಪ್ರಯಾಣಿಕರಿಗೆ ಹಾಗೂ ಬೇಗನೆ ನಿಲ್ದಾಣಕ್ಕೆ ಬರುವ ಪ್ರಯಾಣಿಕರಿಗೆ ಟೈಂ ಪಾಸ್ ಮಾಡಲು ಸಹಕಾರಿಯಾಗಲಿ ಎಂದೇ ಗ್ಯಾಲರಿ ನಿರ್ಮಿ ಸಲಾಗಿದೆ. ರೈಲು ಪ್ರಯಾಣಿಕರಿಗೆ ಗ್ಯಾಲರಿ ವೀಕ್ಷಣೆಗೆ ಪ್ರವೇಶ ಶುಲ್ಕ ಇರುವುದಿಲ್ಲ. ಆದರೆ ರೈಲು ನಿಲ್ದಾಣಕ್ಕೆ ಪ್ರವೇಶಿಸಬೇಕಾದರೆ ಪ್ಲಾಟ್‍ಫಾರಂ ಟಿಕೆಟ್ ಪಡೆದು ಕೊಳ್ಳುವುದು ಕಡ್ಡಾಯ ಎಂದು ರೈಲ್ವೆ ಇಲಾಖೆ ಅಧಿಕಾರಿಗಳು ಸ್ಪಷ್ಟಪಡಿಸಿದ್ದಾರೆ.

ಉದ್ದನೆಯ ಸಾಲಿನಲ್ಲಿ ನಿಲ್ಲಲು ಒಪ್ಪಲಾರರು: ಪ್ರವಾಸಿ ಏಜೆಂಟರೊಬ್ಬರು `ಮೈಸೂರು ಮಿತ್ರ’ನೊಂದಿಗೆ ಮಾತ ನಾಡಿ, ಮೈಸೂರಿಗೆ ಬರುವ ಪ್ರವಾಸಿಗರು ಅರಮನೆ ಸೇರಿ ದಂತೆ ವಿವಿಧ ಪ್ರವಾಸಿ ತಾಣಗಳಲ್ಲಿ ಟಿಕೆಟ್ ಪಡೆಯಲು ಉದ್ದನೆಯ ಸಾಲಿನಲ್ಲಿ ನಿಲ್ಲಲು ಹಿಂದೇಟು ಹಾಕುತ್ತಾರೆ. ಕೆಲವರು ದೂರದಿಂದಲೇ ನೋಡಿ ವಾಪಸ್ಸಾಗುತ್ತಾರೆ. ಈ ಎಲ್ಲಾ ಅಂಶಗಳನ್ನು ಮನದಲ್ಲಿಟ್ಟುಕೊಂಡು ರೈಲ್ವೆ ಅಧಿಕಾರಿಗಳು ಹೆರಿಟೇಜ್ ಗ್ಯಾಲರಿ ಸುಲಭ ವೀಕ್ಷಣೆಗೆ ಅವಕಾಶ ಮಾಡಿಕೊಡಬೇಕು. ಸಾರ್ವಜನಿಕ ಸ್ನೇಹಿ ಧೋರಣೆ ಬೇಕು. ಇದರಿಂದ ರೈಲ್ವೆ ಇಲಾಖೆ ಶ್ರಮ ಪಟ್ಟು ನಿರ್ಮಿಸಿರುವ ಗ್ಯಾಲರಿಯನ್ನು ಹೆಚ್ಚಿನ ಜನರು ವೀಕ್ಷಿಸುತ್ತಾರೆ. ಇಲಾಖೆಯ ಉದ್ದೇಶವೂ ಈಡೇರು ತ್ತದೆ ಎಂದು ಅಭಿಪ್ರಾಯಪಟ್ಟರು.