ಕೆಲವು ಸಂಸ್ಕೃತ ಗ್ರಂಥಗಳಲ್ಲಿ ವೈಜ್ಞಾನಿಕ ಗ್ರಂಥಗಳಲ್ಲಿ ವೈಜ್ಞಾನಿಕ ರಹಸ್ಯಗಳಿರುವ ಬಗ್ಗೆ ವಿದೇಶಿಯರಿಂದ ಸಂಶೋಧನೆ

ಹಿರಿಯ ವಿದ್ವಾಂಸ ಡಾ.ಹೆಚ್.ವಿ.ನಾಗರಾಜರಾವ್ ಅಭಿಮತ

ಮೈಸೂರು,ಡಿ.27(ಎಸ್‍ಪಿಎನ್)-ಸಂಸ್ಕೃತ ಪದಗಳು ಎಲ್ಲಾ ದೇಶಿ ಭಾಷೆಗಳ ಮೂಲ ಪದ ಗಳಲ್ಲಿ ಸೇರಿಕೊಂಡಿವೆ. ಇದನ್ನು ಬೇರ್ಪ ಡಿಸಲು ಎಂದಿಗೂ ಸಾಧ್ಯವಿಲ್ಲ ಎಂದು ಮೈಸೂರು ವಿವಿ ಪ್ರಾಚ್ಯವಿದ್ಯಾ ಸಂಶೋಧನಾಲಯದ ನಿವೃತ್ತ ಹಿರಿಯ ಸಂಶೋಧಕರೂ ಆದ ಸಂಸ್ಕೃತ ವಿದ್ವಾಂಸ ಡಾ. ಹೆಚ್.ವಿ.ನಾಗರಾಜರಾವ್ ಅಭಿಪ್ರಾಯಪಟ್ಟರು.

ಮೈಸೂರು ಮಹಾರಾಣಿ ಮಹಿಳಾ ವಿಜ್ಞಾನ ಕಾಲೇಜಿ(ಸ್ವಾಯತ್ತ)ನ ಪ್ರಥಮ ಬಿ.ಎಸ್ಸಿ ಹಾಗೂ ಬಿಸಿಎ ವಿಭಾಗದ ಸಂಸ್ಕೃತ ಪಠ್ಯಪುಸ್ತಕ `ಕಾವ್ಯ ಭೂಮಿಕಾ-1’ ಮತ್ತು `ಕಾವ್ಯ ಪ್ರಮೋದಃ-1’ ಕೃತಿಗಳನ್ನು ಡಾ. ಹೆಚ್.ವಿ.ನಾಗರಾಜರಾವ್ ಬಿಡುಗಡೆಗೊಳಿಸಿ, ಮಾತನಾಡಿದರು.

ಜಗತ್ತಿನ ಅಪರೂಪದ ಭಾಷೆಗಳಲ್ಲಿ ಸಂಸ್ಕೃತವೂ ಒಂದು. ಸಂಸ್ಕೃತವನ್ನು ಜಗತ್ತಿನ ವಿವಿಧ ವಿಶ್ವವಿದ್ಯಾ ಲಯಗಳಲ್ಲಿ ಅಧ್ಯಯನ ಪೀಠ ಸ್ಥಾಪಿಸಿ, ಅಲ್ಲಿನ ವಿದ್ಯಾರ್ಥಿಗಳು ಕಲಿಯಲು ಪ್ರಯತ್ನಗಳಾಗುತ್ತಿವೆ. ಇನ್ನು ಕೆಲವರು ಈ ಭಾಷೆಯನ್ನು ಸಂಶೋ ಧನೆಯಲ್ಲಿ ತೊಡಗಿಸಿಕೊಂಡಿದ್ದಾರೆ. ಏಕೆಂದರೆ, ಸಂಸ್ಕೃತ ಭಾಷೆಯಲ್ಲಿ ರಚಿತವಾಗಿರುವ ಅನೇಕ ಗ್ರಂಥಗಳು ಕೆಲವು ವೈಜ್ಞಾನಿಕ ರಹಸ್ಯಗಳನ್ನು ಅಡಗಿಟ್ಟಿಸಿಕೊಂಡಿವೆ ಎಂಬುದು ಸಂಶೋಧಕರ ಅನಿಸಿಕೆ. ಹಾಗಾಗಿ ಸಂಸ್ಕೃತ ಗ್ರಂಥಗಳ ಸಂಶೋ ಧನೆಗೆ ಜರ್ಮನಿ, ಫ್ರಾನ್ಸ್, ಅಮೆರಿಕ ವಿವಿಗಳು ಹೆಚ್ಚು ಆಸಕ್ತಿ ವಹಿಸಿ ಎಂದರು.

ಕನ್ನಡ ಭಾಷೆಯಲ್ಲಿ ಅನೇಕ ಸಂಸ್ಕೃತ ಪದಗಳು ಉಚ್ಛಾರಣೆಯಲ್ಲಿದ್ದರೂ ಅದು ಗುರುತಿಸಲು ಸಾಧ್ಯವಾಗುವುದಿಲ್ಲ. ಆದ್ದರಿಂದ ವಿದ್ಯಾರ್ಥಿಗಳು ಬೇರೆ ಭಾಷೆಗಳ ಜೊತೆ ಸಂಸ್ಕೃತವನ್ನು ಕಲಿಯುವಂತೆ ಸಲಹೆ ನೀಡಿದರಲ್ಲದೆ, ಹಿರಿಯ ವಿದ್ವಾಂಸ ಶತಾವಧಾನಿ ಗಣೇಶ ಅವರು ಸಂಸ್ಕೃತ, ಕನ್ನಡ, ಹಿಂದಿ ಸೇರಿದಂತೆ 16 ಭಾಷೆಗಳನ್ನು ಕಲಿತು, ಮಾತನಾಡುತ್ತಾರೆ. ಅವರು ಬೇರೆಬೇರೆ ಭಾಷೆಗಳ ಗ್ರಂಥಗಳನ್ನು ಅಧ್ಯಯನ ನಡೆಸಿ ಅಪಾರ ಜ್ಞಾನ ಸಂಪಾದಿಸಿದ್ದಾರೆ. ಆದ್ದರಿಂದ ಯುವ ಪೀಳಿಗೆ ಕನ್ನಡದ ಜೊತೆಗೆ ಬೇರೆ ಭಾಷೆಗಳನ್ನು ಕಲಿತುಕೊಳ್ಳಬೇಕು ಎಂದು ಸಲಹೆ ನೀಡಿದರು.

ವಿದ್ಯಾರ್ಥಿಗಳು ಕೇವಲ ಕನ್ನಡ ಭಾಷೆ ಕಲಿಕೆಗೆ ಸೀಮಿತವಾದರೆ, ಈ ನಿಲುವು ವಿದ್ಯಾರ್ಥಿಗಳಿಗೆ ನಷ್ಟ. ಬೇರೆ ಭಾಷೆಯನ್ನು ಕಲಿತರೆ ಆ ಭಾಷೆಯಲ್ಲಿನ ಉತ್ತಮ ಸಾಹಿತ್ಯ, ಸಂಶೋಧನೆಗಳು ನಮಗೆ ಪರಿ ಚಯವಾಗುತ್ತವೆ. ಪ್ರಾದೇಶಿಕ ಭಾಷೆಗಳ ಬೆಳವಣಿ ಗೆಗೆ ಸಂಸ್ಕೃತವೇ ಮೂಲ ಬೇರು ಎಂದರೆ ತಪ್ಪಾಗ ಲಾರದು ಎಂದರು. ಸುಧರ್ಮಾ ಸಂಸ್ಕೃತ ಪತ್ರಿಕೆಯ ಸಂಪಾದಕ ಕೆ.ವಿ.ಸಂಪತ್‍ಕುಮಾರ್ ಮಾತನಾಡಿ, ಸಂಸ್ಕೃತ ಭಾಷೆಯಲ್ಲಿ ದಿನಪತ್ರಿಕೆ ಹೊರತರುತ್ತಿರು ವುದು ಮೈಸೂರಿನಲ್ಲಿ ಮಾತ್ರ. ಆದ್ದರಿಂದ ವಿದ್ಯಾರ್ಥಿ ಗಳು ಸಂಸ್ಕೃತ ಭಾಷೆಯನ್ನು ಕಲಿತುಕೊಳ್ಳುವುದರ ಜೊತೆಗೆ, ಹೆಚ್ಚು ಹೆಚ್ಚು ಬಳಸುವುದನ್ನು ರೂಢಿಸಿ ಕೊಳ್ಳಬೇಕು ಎಂದರು. ವೇದಿಕೆಯಲ್ಲಿ ಮಹಾರಾಣಿ ಮಹಿಳಾ ವಿಜ್ಞಾನ ಕಾಲೇಜಿನ ಪ್ರಾಂಶುಪಾಲ ಪ್ರೊ. ಎಸ್.ಬಿ.ಶಾಂತಪ್ಪನವರ್, ಸಂಸ್ಕೃತ ವಿಭಾಗದ ಮುಖ್ಯಸ್ಥೆ ಡಾ.ಡಿ. ಶೀಲಾಕುಮಾರಿ, ಹಿರಿಯ ಸಂಶೋ ಧಕ ಡಾ.ಟಿ.ಎಂ. ಸತ್ಯನಾರಾಯಣ್ ಉಪಸ್ಥಿತರಿದ್ದರು.