ನಿವೃತ್ತ ಕಾರ್ಮಿಕರ ಪಿಂಚಣಿ ಕನಿಷ್ಠ 7,500 ರೂ.ಗೆ ಹೆಚ್ಚಿಸಲು ಆಗ್ರಹ

ಜೂ.29ಕ್ಕೆ ಸಂಸದರಿಗೆ ಮನವಿ ಸಲ್ಲಿಸಲು ನಿರ್ಧಾರ
ಮೈಸೂರು,ಜೂ.27(ಪಿಎಂ)-ಕಾರ್ಖಾನೆ ಗಳ ನಿವೃತ್ತ ಕಾರ್ಮಿಕರ ಪಿಂಚಣಿಯನ್ನು ಕನಿಷ್ಠ 7,500 ರೂ.ಗೆ ಹೆಚ್ಚಳ ಮಾಡ ಬೇಕೆಂದು ಒತ್ತಾಯಿಸಿರುವ ಕರ್ನಾಟಕ ರಾಜ್ಯ ಇಪಿಎಫ್ ನಿವೃತ್ತ ನೌಕರರ ಒಕ್ಕೂಟ, ಈ ಸಂಬಂಧ ಜೂ.29ರಂದು ಹಮ್ಮಿಕೊಂಡಿ ರುವ ಒಕ್ಕೂಟದ ಮಹಾಸಭೆಯಲ್ಲಿ ಸಂಸದ ರಿಗೆ ಮನವಿ ಸಲ್ಲಿಸಲು ತೀರ್ಮಾನಿಸಿದೆ.

ಮೈಸೂರು ಜಿಲ್ಲಾ ಪತ್ರಕರ್ತರ ಭವನ ದಲ್ಲಿ ಗುರುವಾರ ಪತ್ರಿಕಾಗೋಷ್ಠಿಯಲ್ಲಿ ಮಾತ ನಾಡಿದ ಒಕ್ಕೂಟದ ಅಧ್ಯಕ್ಷ ಎಸ್.ಪಿ.ನಿಂಗೇ ಗೌಡ, ಅಂದು ಬೆಳಿಗ್ಗೆ 10.30ಕ್ಕೆ ಮೈಸೂ ರಿನ ಪುರಭವನದಲ್ಲಿ ಮಹಾಸಭೆ ಏರ್ಪಡಿ ಸಿದ್ದು, ಮಂಡ್ಯ, ಮೈಸೂರು ಹಾಗೂ ಚಾಮ ರಾಜನಗರದ ಸಂಸದರನ್ನು ಸಭೆಗೆ ಆಹ್ವಾನಿ ಸಲಾಗಿದೆ. ಈ ಸಂದರ್ಭದಲ್ಲಿ ಪಿಂಚಣಿ ಸಂಬಂಧದ ನಮ್ಮ ಬೇಡಿಕೆಗಳನ್ನು ಸಂಸ ದರಿಗೆ ಸಲ್ಲಿಸಲಾಗುವುದು ಎಂದರು.

ನಿವೃತ್ತ ನೌಕರರು ಕನಿಷ್ಠ ಜೀವನ ನಡೆ ಸಲು ಅನುವಾಗುವಂತೆ ಪಿಂಚಣಿ ನೀಡ ಬೇಕೆಂದು ಕೇಂದ್ರ ಸರ್ಕಾರಕ್ಕೆ ಮನವಿ ಮಾಡಿ ದ್ದರೂ ಪ್ರಯೋಜನವಾಗಿಲ್ಲ. ಪಿಂಚಣಿದಾರ ರಿಗೆ 500 ರೂ.ನಿಂದ 2,500 ರೂ.ವರೆಗೆ ಪಿಂಚಣಿ ಬರುತ್ತಿದ್ದು, ಕಷ್ಟಕರ ಜೀವನ ನಡೆಸುವಂತಾಗಿದೆ. ಕಾರ್ಖಾನೆಗಳಲ್ಲಿ ಸೇವೆ ಸಲ್ಲಿಸುವಾಗ ಪ್ರತಿ ತಿಂಗಳು ಪಿಂಚಣಿ ಫಂಡ್‍ಗೆ ವಂತಿಗೆಯಾಗಿ 200 ರೂ. ನಿಂದ 1,250 ರೂ.ವರೆಗೆ ಕಡಿತ ಮಾಡಿ ಕೊಳ್ಳಲಾಗಿದೆ. ಹೀಗಿದ್ದರೂ ಕನಿಷ್ಠ ಪಿಂಚಣಿ ಇಲ್ಲದೆ ಪರಿತಪಿಸುವಂತಾಗಿದೆ ಎಂದರು.

ತುಟ್ಟಿ ಭತ್ಯೆ ಸೇರಿದಂತೆ ಕನಿಷ್ಠ 7,500 ರೂ. ಪಿಂಚಣಿ ನೀಡಲು ಕೇಂದ್ರ ಸರ್ಕಾರ ಮುಂದಿನ ಬಜೆಟ್‍ನಲ್ಲಿ ಕ್ರಮ ವಹಿಸಬೇಕು. 2017ರ ಮಾರ್ಚ್‍ನಲ್ಲಿ ಸುಪ್ರಿಂಕೋರ್ಟ್ ಹೊರಡಿಸಿರುವ ಸಂಪೂರ್ಣ ಪಿಂಚಣಿ ನೀಡಿಕೆ ಆದೇಶ ಜಾರಿಯಾಗಬೇಕು ಎಂದು ಆಗ್ರಹಿಸಿದರು. ಒಕ್ಕೂಟದ ಉಪಾಧ್ಯಕ್ಷ ಬಸವರಾಜು, ಪ್ರಧಾನ ಕಾರ್ಯದರ್ಶಿ ಆರ್.ಜಿ.ಮೋಹನ್‍ಕೃಷ್ಣ, ಖಜಾಂಚಿ ಸಿ.ರಾಜು ಮತ್ತಿತರರು ಗೋಷ್ಠಿಯಲ್ಲಿದ್ದರು.