ಪಾರಂಪರಿಕ ಹಾಸು ಆಟಗಳ ಅನಾವರಣ

ಮೈಸೂರು: ರಣ ತಂತ್ರದ ಚದುರಂಗದಾಟ… ಬದುಕಿನ ಪಾಠ ಹೇಳುವ ಪಗಡೆಯಾಟ… ಸಂಘಟನಾ ಶಕ್ತಿಯ ಮಹತ್ವ ಸಾರುವ ಹುಲಿಕಟ್ಟಿ ನಾಟ… ವಿವೇಚನಾಶಕ್ತಿ ಬೆಳೆಸುವ ಸಾಲು ಮನೆಯಾಟ… ಹೀಗೆ 100ಕ್ಕೂ ಹೆಚ್ಚು ಮೈಸೂರು ಪರಂಪರೆ ಮಾತ್ರವಲ್ಲದೆ, ಇಡೀ ಭಾರತದ ಪರಂಪರೆಯಲ್ಲಿ ಹಾಸು ಹೊಕ್ಕ ಹಾಸು ಆಟಗಳ ಸಾಮ್ರಾಜ್ಯವೇ ಅಲ್ಲಿ ತಲೆ ಎತ್ತಿದೆ.

ನೀತಿ ಪಾಠ ಬೋಧಿಸಿ ಬದುಕುವ ಕಲೆ ಕಲಿಸುವ ಹಾಗೂ ಬೌದ್ಧಿಕ ಸಾಮಥ್ರ್ಯ ವೃದ್ಧಿಸುವ ಈ ಜನಪದ ಕಲೆಗಳು ಆಧು ನಿಕತೆಯ ಭರಾಟೆಯಲ್ಲಿ ಕಣ್ಮರೆಯಾಗುವ ಈ ಸಂದರ್ಭದಲ್ಲಿ ಅವುಗಳಿಗೆ ಆಧುನಿಕ ಸ್ಪರ್ಶ ನೀಡಿ ಯುವ ತಲೆಮಾರನ್ನು ಆಕ ರ್ಷಿಸುವ ಹಾಗೂ ಹಿರಿಯರಿಗೆ ಈ ಆಟ ಗಳ ಗತವೈಭವ ನೆನಪಿಸುವ ಪ್ರಯತ್ನಕ್ಕೆ ರಾಮ್‍ಸನ್ಸ್ ಕಲಾ ಪ್ರತಿಷ್ಠಾನ ಮುಂದಾಗಿದೆ.

ಹೌದು, `ಕ್ರೀಡಾ ಕೌಶಲ್ಯ’ ಶೀರ್ಷಿಕೆ ಯಡಿ ರಾಮ್‍ಸನ್ಸ್ ಕಲಾ ಪ್ರತಿಷ್ಠಾನ ಭಾರತೀಯ ಪಾರಂಪರಿಕ ಹಾಸು ಆಟಗಳ 8ನೇ ದ್ವೈವಾರ್ಷಿಕ ಪ್ರದರ್ಶನ ಹಾಗೂ ಮಾರಾಟ ಏರ್ಪಡಿಸಿ, ನಮ್ಮ ಜನಪದರ ವೈವಿಧ್ಯಮಯ ಹಾಸು ಆಟಗಳನ್ನು ಪರಿ ಚಯಿಸಿ ಆಟವಾಡಲು ಉತ್ತೇಜನ ನೀಡು ತ್ತಿದೆ. ಈ ಆಟಗಳಲ್ಲಿ ಬಳಕೆಯಾಗುವ ಮಣೆಗಳು, ಕಾಯಿಗಳು ಹಾಗೂ ದಾಳಗಳ ವಿನ್ಯಾಸದಲ್ಲಿ ಕರಕುಶಲ ಕಲೆ ಪ್ರತಿಬಿಂಬಿಸಿ ರುವುದು ನಮ್ಮ ಜನಪದ ಆಟಗಳ ವೈಶಿಷ್ಟ್ಯ.

ಮೈಸೂರಿನ ಮೃಗಾಲಯದ ಎದುರಿ ನಲ್ಲಿರುವ ಪ್ರತಿಷ್ಠಾನದ ಹ್ಯಾಂಡಿಕ್ರಾಫ್ಟ್ಸ್ ಸೇಲ್ಸ್ ಎಂಪೋರಿಯಂನಲ್ಲಿ ಈ ಪ್ರದ ರ್ಶನ ಮತ್ತು ಮಾರಾಟ ಹಮ್ಮಿ ಕೊಂಡಿದ್ದು, ಅಲ್ಲಿನ ಪ್ರತಿಯೊಂದು ಆಟಿ ಗಳ ಸಾಮಗ್ರಿಗಳಲ್ಲಿ ಕಲಾ ಕೌಶಲ್ಯ ಅನಾ ವರಣಗೊಂಡಿದೆ. ಪ್ರದರ್ಶನದಲ್ಲಿ ಭಾರತದ ವಿವಿಧ ರಾಜ್ಯಗಳ ಕರಕುಶಲ ಕಲಾವಿದರು ನಿರ್ಮಿಸಿರುವ ಸ್ಥಳೀಯ ಆಟದ ಹಾಸುಗಳು, ಮಣೆಗಳು, ಕಾಯಿಗಳು ಮತ್ತು ದಾಳಗಳು ಇವೆ.

ಹಾಸು ಆಟಗಳಿಗೆ ಸಂಬಂಧಿಸಿದಂತೆ ಸೃಜನಶೀಲ ಮೌಲಿಕ ಚಿತ್ರಗಳು ಇಲ್ಲಿನ ಮತ್ತೊಂದು ಆಕರ್ಷಣೆ. ಖ್ಯಾತ ಕಲಾ ವಿದ ರಘುಪತಿ ಭಟ್, ಜಿ.ಎಲ್.ಎನ್. ಸಿಂಹ, ಮಂಜುನಾಥ ಮಾನೆ, ಶ್ರೀಹರಿ ಮೊದಲಾದವರಿಂದ ಈ ಚಿತ್ರಕಲಾ ಸೊಗಸು ಮೂಡಿ ಬಂದಿದೆ. ಜೈಪುರದ ಪ್ರಾಚೀನ ಚಿಕಣೀ ಚಿತ್ರಗಳು, ಕೇರಳದ ಭಿತ್ತಿಚಿತ್ರ ಶೈಲಿಯ ಚಿತ್ರಗಳು, ಮೈಸೂರು ಶೈಲಿಯ ಪೌರಾಣಿಕ ಚಿತ್ರಗಳು ಪ್ರದರ್ಶನದ ಅಂದಕ್ಕೆ ಮತ್ತಷ್ಟು ಮೆರಗು ನೀಡಿವೆ.

ಭಾನುವಾರ ಈ ಪ್ರದರ್ಶನಕ್ಕೆ ಚಾಲನೆ ನೀಡಿದ ಪೊಲೀಸ್ ಪ್ರಶಿಕ್ಷಣ ವಿದ್ಯಾ ಲಯದ ಪ್ರಾಂಶುಪಾಲರಾದ ಡಾ.ಧರಣಿ ದೇವಿ ಮಾಲಗತ್ತಿ, ಇಲ್ಲಿ ಮೈಸೂರಿನ ಶ್ರೀಮಂತ ಸಾಂಸ್ಕøತಿಕ ಪರಂಪರೆ ಮಾತ್ರ ವಲ್ಲದೆ, ದೇಶದ ವೈವಿಧ್ಯಮಯ ಸಂಸ್ಕøತಿ ಯನ್ನು ಒಂದೇ ವೇದಿಕೆಗೆ ತರುವ ಅದ್ಭುತ ಪ್ರಯತ್ನ ಮಾಡಿದ್ದಾರೆ. ಇಲ್ಲಿರುವ ಆಟದ ಪರಿಕರಗಳನ್ನು ನೋಡಿದರೆ ಪ್ರತಿಷ್ಠಾನದ ಪರಿಶ್ರಮ ಅರಿವಾಗುತ್ತದೆ.

ಜೊತೆಗೆ ನಮ್ಮ ಸಂಪ್ರದಾಯಿಕ ಕಲೆಗಳಿಗೆ ಆಧುನಿಕ ಸ್ಪರ್ಶ ನೀಡಿರುವುದು ಮುಂದಿನ ತಲೆಮಾರಿಗೆ ಆಕರ್ಷಣೆ ಆಗಲಿದೆ. ಜನಪದ ಆಟಿಕೆಗಳ ಪ್ರದ ರ್ಶನದ ಮೂಲಕ ಸಮಾಜಕ್ಕೆ ಸಂದೇಶ ಹಾಗೂ ಶಿಕ್ಷಣ ನೀಡುತ್ತಿರುವುದು ಸ್ವಾಗ ತಾರ್ಹ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ಇಂದಿನಿಂದ ಮೇ 5ರವರೆಗೆ ಪ್ರದರ್ಶನ ಮತ್ತು ಮಾರಾಟ ಇರಲಿದ್ದು, ಪ್ರತಿ ದಿನ ಬೆಳಿಗ್ಗೆ 10ರಿಂದ ಸಂಜೆ 7ರವರೆಗೆ ಭೇಟಿ ನೀಡಬಹುದು. ರಾಮ್‍ಸನ್ಸ್ ಕಲಾ ಪ್ರತಿಷ್ಠಾನದ ಅಧ್ಯಕ್ಷ ಡಿ.ರಾಮ್ ಸಿಂಗ್, ಕಾರ್ಯದರ್ಶಿ ಆರ್.ಜ್ಞಾನೇಶ್ವರ್ ಸಿಂಗ್, ಪ್ರದರ್ಶನದ ವಿನ್ಯಾಸಕಾರ ಹೆಚ್.ಎಸ್. ಧರ್ಮೇಂದ್ರ (ರಘು) ಮತ್ತಿತರರು ಹಾಜರಿದ್ದರು.

ಪ್ರದರ್ಶನದಲ್ಲಿ ಮುಮ್ಮಡಿ ಕೃಷ್ಣರಾಜ ಒಡೆಯರ್ ಪಗಡೆಯಾಟ!
ಮುಮ್ಮಡಿ ಕೃಷ್ಣರಾಜ ಒಡೆಯರ್ ಪಗಡೆ ಯಾಟ ಆಡುತ್ತಿರುವುದನ್ನೂ ಇಲ್ಲಿ ನೋಡ ಬಹುದು! ಹೌದು, ಮುಮ್ಮಡಿ ಕೃಷ್ಣರಾಜ ಒಡೆಯರ್ ಅವರನ್ನು ವೈವಿಧ್ಯಮಯ ಚದುರಂಗದಾಟಗಳ ಸೃಷ್ಟಿಕರ್ತ ಎಂದೇ ಕರೆಯಲಾಗಿದೆ. ಅವರು ಮೈಸೂರು ಅರಮನೆ ಯಲ್ಲಿ ಪಗಡೆಯಾಟ ಆಡುತ್ತಿರುವ ಕಲಾ ಕೃತಿಯೂ ಇಲ್ಲಿನ ಪ್ರಮುಖ ಆಕರ್ಷಣೆ.

ಮುಮ್ಮಡಿ ಕೃಷ್ಣರಾಜ ಒಡೆಯರ್ ಅರ ಮನೆಯ ರಾಣೀವಾಸದಲ್ಲಿ ಹಾಸು ಆಟ ವನ್ನು ಆಡುತ್ತಿರುವ ಸನ್ನಿವೇಶ ಮೈಸೂರು ಸಾಂಪ್ರದಾಯಿಕ ಚಿತ್ರಶೈಲಿಯಲ್ಲಿ ಮೂಡಿಸಿದ್ದಾರೆ ಕಲಾವಿದ ಕೆ.ಎಸ್. ಶ್ರೀಹರಿ. ಈ ಚಿತ್ರಕಲೆಗೆ ಮತ್ತೊಬ್ಬ ಕಲಾವಿದ ಆರ್.ಪುಟ್ಟರಾಜು ವಿವಿಧ ವರ್ಣಗಳ ಮರಗಳ ಜೋಡಣೆ ಮಾಡಿ ಮರದ ಉಬ್ಬು ಕಲಾಕೃತಿ ನಿರ್ಮಿಸಿ ಮತ್ತಷ್ಟು ಆಕರ್ಷಣೆಗೆ ನಾಂದಿ ಹಾಡಿದ್ದಾರೆ.

ಇದರಲ್ಲಿ ಮುಮ್ಮಡಿಯವರು ತಮ್ಮ ಮಡದಿಯೊಡನೆ ತಮ್ಮದೇ ಸೃಷ್ಟಿಯಾದ ನವಗ್ರಹ ಪಗಡೆಯಾಟ ಆಡುವುದರಲ್ಲಿ ತಲ್ಲೀನರಾಗಿದ್ದಾರೆ. ಚಾಮುಂಡಿಬೆಟ್ಟ ಹಾಗೂ ನೀರು ತುಂಬಿ ನಳನಳಿಸುತ್ತಿರುವ ದೇವರಾಯ ಸಾಗರ (ಈಗಿನ ದೊಡ್ಡಕೆರೆ) ಈ ಕಲಾಕೃತಿಯಲ್ಲಿ ಮೂಡಿಬಂದಿರು ವುದು ಮತ್ತೊಂದು ವೈಶಿಷ್ಟ್ಯ.