ಗ್ರಾಮೀಣ ಮಹಿಳೆಯರು ಸಬಲರಾಗಲು ಕರೆ

ಚಾಮರಾಜನಗರ: ಗ್ರಾಮೀಣ ಪ್ರದೇಶದ ಮಹಿಳೆಯರು ಸ್ವಾವಲಂಬಿಗಳಾಗಿ ಆರ್ಥಿಕವಾಗಿ ಸಬಲರಾಗಬೇಕು ಎಂದು ನಗರದ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಪ್ರಾಂಶುಪಾಲೆ ಹೇಮಲತಾ ಕರೆ ನೀಡಿದರು.

ಗುರುವಾರ ಐಡಿಎಫ್‍ಸಿ ಭಾರತ್ ಸಂಸ್ಥೆ ವತಿಯಿಂದ ಏರ್ಪಡಿಸಿದ್ದ ಮಹಿಳಾ ಒಕ್ಕೂ ಟದ ಸಭೆ ಉದ್ಘಾಟಿಸಿ ಅವರು ಮಾತನಾ ಡಿದರು. ಗ್ರಾಮೀಣ ಪ್ರದೇಶದ ಮಹಿಳೆಯ ರಿಗೆ ಶಿಕ್ಷಣದ ಕೊರತೆಯಿಂದ ಉದ್ಯೋ ಗದ ಅಭದ್ರತೆ ಕಾಡುತ್ತಿದೆ. ಇದರಿಂದ ಅವರ ಸ್ವಾವಲಂಭಿಗಳಾಗದೆ ಪುರುಷ ರನ್ನು ಅವಲಂಬಿಸುವ ಪರಿಸ್ಥಿತಿ ನಿರ್ಮಾಣವಾಗಿದೆ. ಮಹಿಳೆ ಎಂದರೆ ಹಿಂದಿನಿಂದಲೂ ಗಂಡನ ಸೇವೆ ಮತ್ತು ಅಡಿಗೆ ಮಾಡುವುದು ಮಕ್ಕಳನ್ನು ನೋಡಿಕೊಳ್ಳು ವುದು ಎಂಬುದಾಗಿದೆ. ಇದರಿಂದ ಮಹಿಳೆ ಯರು ತಮ್ಮ ಹೆಣ್ಣು ಮಕ್ಕಳನ್ನು ಶಾಲೆಗೆ ಕಳುಹಿಸಿ ಅವರಿಗೆ ಉನ್ನತ ಶಿಕ್ಷಣ ನೀಡುವ ಮೂಲಕ ಅವರನ್ನು ಸ್ವಾಲಂಬಿಗ ಳನ್ನಾಗಿ ಮಾಡಬೇಕು. ಇದೀಗ ಐಡಿಎಫ್‍ಸಿ ಭಾರತ್ ಸಂಸ್ಥೆ ಮಹಿಳಾ ಸ್ವಸಹಾಯ ಸಂಘಗಳನ್ನು ರಚಿಸುವ ಮೂಲಕ ಅವರಿಗೆ ಸಾಲಸೌಲಭ್ಯಗಳನ್ನು ನೀಡಿ ಅವ ರನ್ನು ಸಹ ಆರ್ಥಿಕವಾಗಿ ಸ್ವಾವಲಂಭಿಗಳ ನ್ನಾಗಿ ಮಾಡುತ್ತಿರುವುದು ಶ್ಲಾಘನೀಯ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ಸಮಾಜದಲ್ಲಿ ಹೆಣ್ಣು ಗಂಡು ಎಂಬ ಬೇಧ ಭಾವ ಬಿಟ್ಟು ಇಬ್ಬರು ಸಮಾನರು ಎಂಬ ಭಾವನೆಯಿಂದ ಜೀವನ ನಡೆಸಬೇಕು ಎಂದು ಸಲಹೆ ನೀಡಿದರು.ವಕೀಲೆ ಮಮತಾ ಮಾತನಾಡಿ, ಮಹಿಳೆ ಯರು ಶಿಕ್ಷಣವನ್ನು ಪಡೆಯುವ ಮೂಲಕ ತಮ್ಮ ಹಕ್ಕುಗಳನ್ನು ಚಲಾಯಿಸಬೇಕು ಎಂದು ಕರೆ ನೀಡಿದ ಅವರು, ಶಿಕ್ಷಣದ ಕೊರತೆಯಿಂದ ಗ್ರಾಮೀಣ ಪ್ರದೇಶದ ಹೆಣ್ಣು ಮಕ್ಕಳು ಸಂಕಷ್ಟವನ್ನು ಎದುರುವಂತಾ ಗಿದೆ. ಇದರಿಂದ ತಮ್ಮ ಮಕ್ಕಳನ್ನು ಬಾಲ್ಯ ವಿವಾಹಕ್ಕೆ ದೂಡುತ್ತಿದ್ದಾರೆ ಎಂದು ಆತಂಕ ವ್ಯಕ್ತಪಡಿಸಿದರು. ತಮ್ಮ ಮಕ್ಕಳ ವಿದ್ಯಾ ಭ್ಯಾಸವನ್ನು ಅರ್ಧಕ್ಕೆ ಮೊಟಕುಗೊಳಿಸದೆ ಉನ್ನತ ವ್ಯಾಸಂಗ ಮಾಡಿಸಿ ಅವರು ಸಹ ಪಟ್ಟಣದ ಮಹಿಳೆಯಂತೆ ಸ್ವಾವಲಂಭಿಗಳಾ ಗಬೇಕು ಎಂದು ಕಿವಿಮಾತು ಹೇಳಿದರು.

ಮಹಿಳೆಯರು ತಮ್ಮ ಮಕ್ಕಳನ್ನು ಬಾಲ್ಯ ವಿವಾಹ ಮಾಡಬಾರದು. ಇದು ಅಪ ರಾಧ ಎಂದ ಅವರು, ವರದಕ್ಷಿಣೆಯನ್ನು ಸಹ ಕೊಡುವುದು ಮತ್ತು ತೆಗೆದುಕೊಳ್ಳು ವುದು ಸಹ ಅಪರಾಧ ಆದ್ದರಿಂದ ಈ ಬಗ್ಗೆ ಮಹಿಳೆಯರಲ್ಲಿ ಜಾಗೃತಿ ಮೂಡಿ ಸಬೇಕು ಎಂದು ಕರೆ ನೀಡಿದರು.

ಐಡಿಎಫ್‍ಸಿ ಭಾರತ್ ಸಂಸ್ಥೆಯ ಪ್ರಾದೇ ಶಿಕ ವ್ಯವಸ್ಥಾಪಕ ರಮೇಶ್ ಕುಮಾರ್ ಮಾತನಾಡಿ, ನಮ್ಮ ಸಂಸ್ಥೆಯು ಗ್ರಾಮೀಣ ಪ್ರದೇಶ ಮಹಿಳೆಯರನ್ನು ಆರ್ಥಿಕವಾಗಿ ಸ್ವಾವಲಂಬಿಗಳನ್ನಾಗಿ ಮಾಡಲು ಸ್ವಸಾಹಾಯ ಸಂಘಗಳನ್ನು ರಚಿಸಿ ಆ ಮೂಲಕ ಉಳಿತಾಯ ಯೋಜನೆಯನ್ನು ಪ್ರಾರಂಭಿಸಿ ಅವರಿಗೆ ಸಾಲಸೌಲಭ್ಯಗಳನ್ನು ನೀಡಿ ಅವರನ್ನು ಸಹ ಪಟಣ್ಣದ ಮಹಿಳೆಯರಂತೆ ಸ್ವಾವಲಂಬಿಗಳನ್ನಾಗಿ ಮಾಡುವ ಗುರಿ ಹೊಂದಲಾಗಿದೆ. ಮಹಿಳೆಯರು ದುಂದುವೆಚ್ಚ ಮಾಡುವುದಿಲ್ಲ ಮತ್ತು ಹಣವನ್ನು ಸರಿಯಾಗಿ ಸದ್ಬಳಕೆ ಮಾಡಿ ಕೊಂಡು ಕುಟುಂಬದ ಜೀವನ ಮಟ್ಟ ಸುಧಾರಿಸಿ ಆರ್ಥಿಕ ಸಬಲತೆಯಾಗುತ್ತದೆ ಇದರಿಂದಲೇ ನಾವು ಮಹಿಳೆಯರ ಸಾಲ ಸೌಲಭ್ಯಗಳನ್ನು ನೀಡುವುದು ಎಂದರು.

ಸಂಸ್ಥೆಯ ಜಿಲ್ಲಾ ವ್ಯವಸ್ಥಾಪಕ ನವೀನ್ ಕುಮಾರ್ ಮಾತನಾಡಿ, ಸ್ವಸಹಾಯ ಸಂಘ ಗಳ ಮೂಲಕ ಪಡೆದ ಸಾಲವನ್ನು ಸರಿ ಯಾಗಿ ಸದ್ಬಳಕೆ ಮಾಡಿಕೊಂಡು, ಅದ ರಿಂದ ಹೈನುಗಾರಿಕೆ, ಗೃಹ ಕೈಗಾರಿಕೆ ಮತ್ತು ಸಣ್ಣ ಸಣ್ಣ ವ್ಯಾಪಾರಗಳಿಗೆ ಬಂಡವಾಳ ವನ್ನು ಹಾಕಿದಾಗ ತಾವು ಆರ್ಥಿಕವಾಗಿ ಮುಂದೆ ಬರಲು ಸಾಧ್ಯವಾಗುತ್ತದೆ ಎಂದು ಕಿವಿಮಾತು ಹೇಳಿದರು.