ಹುಲಿತಾಳದಲ್ಲಿ ಬಲಿದಾನ ದಿವಸ್; ದೇಶಪ್ರೇಮಿಗಳಿಗೆ ನುಡಿನಮನ

ಮಡಿಕೇರಿ: ತಾಲೂಕಿನ ಹುಲಿ ತಾಳದ ಭಗತ್ ಯುವಕ ಸಂಘ, ನೆಹರೂ ಯುವ ಕೇಂದ್ರ, ಯುವ ಸಬಲೀಕರಣ ಕ್ರೀಡಾ ಇಲಾಖೆ,ಜಿಲ್ಲಾ ಮತ್ತು ತಾಲೂಕು ಯುವ ಒಕ್ಕೂಟಗಳ ಆಶ್ರಯದಲ್ಲಿ ಹುಲಿ ತಾಳದ ಸಮುದಾಯ ಭವನದಲ್ಲಿ ಬಲಿ ದಾನ ದಿವಸವನ್ನು ಆಚರಿಸಲಾಯಿತು. ಸ್ಥಳೀಯ ಪ್ರಗತಿಪರ ಕೃಷಿಕರಾದ ಬಿ.ಎಸ್. ಸಂಜೀವ ದೀಪ ಬೆಳಗುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.

ಮರಗೋಡು ಭಾರತಿ ಸಂಯುಕ್ತ ಪದವಿ ಪೂರ್ವ ಕಾಲೇಜಿನ ಶಿಕ್ಷಕ ಪಿ.ಎಸ್. ರವಿಕೃಷ್ಣ ದಿನದ ಮಹತ್ವದ ಕುರಿತು ಉಪ ನ್ಯಾಸವನ್ನು ನೀಡುತ್ತಾ, 1931ರ ಮಾ.23 ರಂದು ಭಗತ್ ಸಿಂಗ್, ರಾಜಗುರು, ಸುಖ್ ದೇವ್ ಅವರನ್ನು ಬಿಟೀಷರು ಲಾಹೋರ್ ನಲ್ಲಿ ನೇಣಿಗೇರಿಸಿದರು.ಅವರ ಹಾಗೂ ದೇಶಕ್ಕಾಗಿ ಪ್ರಾಣ ತ್ಯಾಗ ಮಾಡಿದ ಮಹ ನೀಯರನ್ನು ಸ್ಮರಿಸುವುದೇ ಬಲಿದಾನ ದಿವ ಸದ ಉದ್ದೇಶವಾಗಿದೆ. ಕೇವಲ ಅಹಿಂಸೆ ಯಿಂದ ಮಾತ್ರ ನಮಗೆ ಸ್ವಾತಂತ್ರ್ಯ ಪ್ರಾಪ್ತಿ ಯಾಯಿತು ಎಂದರೆ ಅದು ಮೂರ್ಖ ತನವಾಗುತ್ತದೆ. ಸ್ವಾತಂತ್ರ್ಯ ನಮಗೆ ಪುಕ್ಕ ಟೆಯಾಗಿ ಸಿಕ್ಕಿದ್ದಲ್ಲ. ಸಹಸ್ರಾರು ಜನರ ತ್ಯಾಗದ ಫಲ ಅದು. ಇವತ್ತಿನ ದಿವಸ ನಮಗೆ ಭಗತ್ ಸಿಂಗ್ ಗೊತ್ತಿಲ್ಲ. ರಾಜ್ ಗುರು-ಸುಖ್‍ದೇವ್ ಗೊತ್ತಿಲ್ಲ. ಆದರೆ ಸಿನಿಮಾ ನಟರ ಬಗ್ಗೆ ಗೊತ್ತಿದೆ. ಹೀಗೆಯೇ ಮುಂದುವರೆದರೆ ಮುಂದೆ ನಾವುಗಳು ಇನ್ಯಾರದ್ದೋ ಕಪಿ ಮುಷ್ಟಿಗೆ ಸಿಲುಕುವು ದರಲ್ಲಿ ಅನುಮಾನವಿಲ್ಲ. ನಾವು ನಮ್ಮ ಯುವ ಜನತೆಯನ್ನು ಕ್ರಾಂತಿಕಾರಿಗಳ ನ್ನಾಗಿ ಮಾಡದಿದ್ದರೂ ಚಿಂತೆಯಿಲ್ಲ. ಆದರೆ ದೇಶಕ್ಕಾಗಿ ಪ್ರಾಣಬಿಟ್ಟ ಅಮೂಲ್ಯ ರತ್ನಗಳನ್ನು ಸ್ಮರಿಸುತ್ತಾ ದೇಶದ ಬಗ್ಗೆ ಚಿಂತಿಸುವಂತೆ ಮಾಡಬೇಕಾಗಿದೆ ಯೆಂದು ಹೇಳಿದರು.

ವೇದಿಕೆಯಲ್ಲಿ ಭಗತ್ ಯುವಕ ಸಂಘದ ಅಧ್ಯಕ್ಷ ಹೆಚ್.ಎಂ.ವಿನೋದ್, ಉಪಾ ಧ್ಯಕ್ಷ ಪಿ.ಗೌತಮ್, ಕಾರ್ಯದರ್ಶಿ ಹೆಚ್.ಎಸ್. ನಂದಕುಮಾರ್ ಉಪಸ್ಥಿತರಿದ್ದರು.