ಮಕ್ಕಳ ಅಂಕಪಟ್ಟಿ ಮನೆಗೆ ಕಳುಹಿಸುವ ಪದ್ಧತಿಗೆ ತಿಲಾಂಜಲಿ ಹೇಳಬೇಕಿದೆ

ಮೈಸೂರು: ಮಕ್ಕಳ ಅಂಕಪಟ್ಟಿಯನ್ನು ಮನೆಗೆ ಕಳುಹಿಸುವು ದರಿಂದ ಮಕ್ಕಳು ಅನ ಗತ್ಯ ಗೊಂದಲಕ್ಕೆ ಸಿಲುಕಿ ಬಾಲ್ಯವನ್ನೇ ಕಳೆದುಕೊಳ್ಳುವ ಸಂಭವ ಹೆಚ್ಚಿರುತ್ತದೆ. ಹಾಗಾಗಿ ಅಂಕ ಪಟ್ಟಿಯನ್ನು ಮನೆಗೆ ಕಳುಹಿಸುವ ಪದ್ದತಿಗೆ ತಿಲಾಂಜಲಿ ಹೇಳಬೇಕಿದೆ ಎಂದು ಈಶಾ ಫೌಂಡೇಷನ್ ಸಂಸ್ಥಾಪಕ ಸದ್ಗುರು ಜಗ್ಗಿ ವಾಸುದೇವ್ ಅಭಿಪ್ರಾಯಪಟ್ಟರು.

ಮಾನಸಗಂಗೋತ್ರಿಯ ಪ್ರಾದೇಶಿಕ ಶಿಕ್ಷಣ ಸಂಸ್ಥೆ(ಆರ್‍ಐಇ) ಮೈದಾನದಲ್ಲಿ ಶನಿವಾರ ಆಯೋಜಿಸಿದ್ದ `ಯೂತ್ ಅಂಡ್ ಟ್ರೂತ್’ ಅಭಿಯಾನ ಕಾರ್ಯ ಕ್ರಮದಲ್ಲಿ ಮಾತನಾಡಿದ ಅವರು, ಮಕ್ಕಳ ಶಾಲಾ ಅಂಕಪಟ್ಟಿಯನ್ನು ಮನೆಗೆ ಕಳುಹಿಸುವುದರಿಂದ ಮನೆ ವಾತಾವರಣ ಹಾಳಾಗುತ್ತದೆ. ಪೋಷಕರು ಅದನ್ನು ನೋಡಿ ಒತ್ತಡಕ್ಕೆ ಒಳಗಾಗುವುದಲ್ಲದೆ, ಕಡಿಮೆ ಅಂಕ ಗಳಿಸಿದ ಮಕ್ಕಳನ್ನು ಬೈದು, ಅವರ ಮೇಲೆ ಒತ್ತಡ ಹೇರುತ್ತಾರೆ. ಇದರಿಂದ ಮಕ್ಕಳು ವಿಚಲಿತರಾಗಿ ತಮ್ಮ ಬಾಲ್ಯವನ್ನೇ ಕಳೆದು ಕೊಳ್ಳುವ ಸಂಭವ ಹೆಚ್ಚಿರುತ್ತದೆ ಎಂದರು.

ಎಲ್ಲರೂ ವೈದ್ಯರಾದರೆ ಕ್ಲರ್ಕ್ ಆಗುವವ ರ್ಯಾರು: ಪ್ರತಿ ಪೋಷಕರು ತಮ್ಮ ಮಗ ವೈದ್ಯ ಅಥವಾ ಇಂಜಿನಿಯರ್ ಆಗಬೇಕೆಂದು ಕನಸು ಕಟ್ಟಿಕೊಂಡಿರುತ್ತಾರೆ. ಹಾಗೆಯೇ ನಮ್ಮ ತಂದೆಗೆ ನಾನು ವೈದ್ಯ ನಾಗಬೇಕೆಂಬ ಆಸೆಯಿತ್ತು. ಆದರೆ ನನಗೆ ಅದರಲ್ಲಿ ಆಸಕ್ತಿ ಇರಲಿಲ್ಲ ಎಂದೆಲ್ಲಾ ಹೇಳುವ ಮಾತಿದೆ. ಎಲ್ಲರೂ ವೈದ್ಯರು, ಇಂಜಿನಿಯರ್‌ಗಳಾದರೆ ಕ್ಲರ್ಕ್ ಆಗುವವರು ಯಾರು? ನಾವು ಎಲ್ಲ ವೃತ್ತಿಗಳನ್ನು ಸಮಾನವೆಂದು ಭಾವಿಸುವ ಮನೋಭಾವ ಬೆಳೆಸಿಕೊಳ್ಳಬೇಕು ಎಂದರು.

ಶಾಲೆಯಷ್ಟೇ ಅಲ್ಲ. ಅದರಾಚೆಗೂ ಕಲಿಕೆಯಿದೆ: ಶಾಲೆಯಲ್ಲಿ ಕಲಿಯುವುದಷ್ಟೇ ಅಲ್ಲ. ಅದರಾಚೆಗೂ ಕಲಿಕೆಯಿದೆ. ಪ್ರಕೃತಿ, ಆಟ, ವಿವಿಧ ಚಟುವಟಿಕೆಗಳಿರಬಹುದು. ಅದನ್ನು ಗುರುತಿಸಲು ಮಕ್ಕಳು ಸೋತಿಲ್ಲ. ಬದಲಾಗಿ ಮಕ್ಕಳ ಪ್ರತಿಭೆಯನ್ನು ಗುರುತಿಸುವಲ್ಲಿ ಪಾಲ ಕರು ಸೋತಿದ್ದಾರೆ. ಪ್ರಕೃತಿ ಮತ್ತು ಮನು ಷ್ಯನ ನಡುವಿನ ಒಡನಾಟವೇ ದೊಡ್ಡ ಕಲಿಕೆ. ಅದನ್ನು ಅಂಕಗಳಲ್ಲಿ ಬೆಲೆ ಕಟ್ಟಲಾಗುವು ದಿಲ್ಲ. ಕಡಿಮೆ ಅಂಕ ಪಡೆದ ಮಾತ್ರಕ್ಕೆ ಯಾರೂ ದಡ್ಡರಲ್ಲ ಎಂದರು. ಇಂದಿಗೂ ಕೆಲವು ಸಮುದಾಯಗಳಿಗೆ ದೇವಸ್ಥಾನಕ್ಕೆ ಪ್ರವೇಶವಿಲ್ಲ. ಶವ ಸಂಸ್ಕಾರವನ್ನು ಗ್ರಾಮದಲ್ಲಿ ಮಾಡಲು ಬಿಡದ ಸ್ಥಿತಿ ಇದೆ. ಹಾಗಾಗಿ ಪ್ರಸ್ತುತ ಸಮಾನ ನಾಗರಿಕ ಕಾಯಿದೆ ತುರ್ತು ಅಗತ್ಯವಾಗಿದ್ದು, ಭಾರ ತೀಯರು ಎನ್ನುವ ಭಾವನೆ ಮೂಡಿಸುವ ನಿಟ್ಟಿನಲ್ಲಿ ಸಮಾನ ನಾಗರಿಕ ಕಾಯಿದೆ ಬೇಕಿದೆ ಎಂದು ಹೇಳಿದರು.

ಬಾಲ್ಯದ ನೆನಪಿಗೆ ಜಾರಿದ ಸದ್ಗುರು: ನಾನು ಹುಟ್ಟಿದ್ದು ಮೈಸೂರಿನಲ್ಲಿ. ನಾನು ಡೆಮಾನ್ ಸ್ಟ್ರೇಷನ್ ಸ್ಕೂಲ್ ಗೆ ಸೇರಿದಾಗ ಮನೆ ಬೋಗಾದಿಯಲ್ಲಿತ್ತು. ಈ ವೇಳೆ ಬೋಗಾದಿ ಕೆರೆ, ಅದರಲ್ಲಿನ ಮೀನುಗಳು ನನ್ನನ್ನು ಹೆಚ್ಚು ಅಕರ್ಷಿಸಿದ್ದವು. ಹಾಗಾಗಿ ಶಾಲೆಗಿಂತ ಹೊರಗೆ ಹೆಚ್ಚು ಕಾಲ ಕಳೆದೆ ಎಂದು ಬಾಲ್ಯದ ನೆನಪಿಗೆ ಜಾರಿದರು. ಆರ್‍ಐಇನ ಶಿಕ್ಷಕರು, ವಿದ್ಯಾರ್ಥಿಗಳು, ಸಾರ್ವಜನಿಕರು ಜಗ್ಗಿ ವಾಸು ದೇವ್ ಅವರೊಂದಿಗೆ ಸಂವಾದ ನಡೆಸಿದರು.