ಸಂಸ್ಕøತ ಕಲಿತವರು ನಿರುದ್ಯೋಗಿಗಳಲ್ಲ

ಮೈಸೂರು: ಸಂಸ್ಕøತ ಕಲಿತವರು ಯಾರೂ ನಿರು ದ್ಯೋಗಿಗಳಲ್ಲ. ಅವರಿಗೆ ಉತ್ತಮ ಭವಿಷ್ಯ ವಿದೆ ಎಂದು ಕರ್ನಾಟಕ ಸಂಸ್ಕøತ ವಿಶ್ವ ವಿದ್ಯಾನಿಲಯದ ಕುಲಪತಿ ಡಾ. ಪದ್ಮಾ ಶೇಖರ್ ಅಭಿಪ್ರಾಯಪಟ್ಟರು.

ಮೈಸೂರಿನ ಬಿಜಿಎಸ್ ವಿದ್ಯಾಪೀಠದ ಆದಿಚುಂಚನಗಿರಿ ಸಂಸ್ಕøತ ಪಾಠಶಾಲೆ ಯಲ್ಲಿ ಮೈಸೂರು ವಿಭಾಗ ಸಂಸ್ಕøತ ಪಾಠ ಶಾಲಾ ಶಿಕ್ಷಕರ ವತಿಯಿಂದ ಏರ್ಪಡಿಸಿದ್ದ `ಸಂಸ್ಕøತೋತ್ಸವ ಹಾಗೂ ಅಭಿನಂದನಾ’ ಕಾರ್ಯಕ್ರಮದಲ್ಲಿ ತಮಗೆ ನೀಡಿದ ಸನ್ಮಾನ ಸ್ವೀಕರಿಸಿ ಅವರು ಮಾತನಾಡಿದರು.

ಸಂಸ್ಕøತ ಶಿಕ್ಷಕರೇ ಭಾಷೆಯನ್ನು ಬೆಳೆ ಸುವ ವಾರಸುದಾರರು. ಶಿಕ್ಷಕರು ಹೆಚ್ಚೆಚ್ಚು ಸಂಸ್ಕøತ ಸಂಭಾಷಣಾ ಶಿಬಿರಗಳನ್ನು ನಡೆಸ ಬೇಕು. ಸಂಸ್ಕøತ ಭಾಷೆ ಇನ್ನಷ್ಟು ವಿಸ್ತಾರ ವಾಗಬೇಕು. ಎಲ್ಲರ ಬಾಯಲ್ಲೂ ಸಂಸ್ಕøತ ಪಠಿಸುವಂತಾಗಬೇಕು ಎಂದರು.
ಜೂ.15ರಂದು ತಾವು ಕುಲಪತಿ ಹುದ್ದೆ ಯಿಂದ ನಿರ್ಗಮಿಸುತ್ತಿದ್ದು, ನಿವೃತ್ತಿ ಬಗ್ಗೆ ನನಗೆ ಕೊಂಚವೂ ಬೇಸರವಿಲ್ಲ. ನಾಲ್ಕು ವರ್ಷದ ಅವಧಿಯಲ್ಲಿ ಸಂಸ್ಕøತ ಬೆಳೆಸುವ ಕೆಲಸ ಮಾಡಿದ್ದೇನೆಂಬ ತೃಪ್ತಿ ಇದೆ ಎಂದರು.

ಆದಿಚುಂಚನಗಿರಿ ಮೈಸೂರು ಶಾಖಾ ಮಠದ ಶ್ರೀ ಸೋಮನಾಥನಂದ ಸ್ವಾಮೀಜಿ ಮಾತನಾಡಿ, ನಶಿಸಿ ಹೋಗುತ್ತಿದ್ದ ಸಂಸ್ಕøತ ವನ್ನು ಉತ್ತುಂಗಕ್ಕೆ ಕೊಂಡೊಯ್ಯುವ ಕೆಲಸ ವನ್ನು ಡಾ.ಪದ್ಮಾ ಶೇಖರ್ ಮಾಡಿದ್ದಾರೆ. ನಾಲ್ಕು ಗೋಡೆಗಳ ಮಧ್ಯೆ ಇದ್ದ ಭಾಷೆ ಯನ್ನು ವಿಶಾಲ ಜಾಗಕ್ಕೆ ತಂದಿದ್ದಾರೆ. ಸಂಸ್ಕøತ ಅಧ್ಯಾಪಕರು ಪ್ರತಿಯೊಬ್ಬರೂ ತಲಾ 100 ವಿದ್ಯಾರ್ಥಿಗಳನ್ನು ಕರೆ ತಂದು ತಯಾರು ಮಾಡಬೇಕು. ಹಾಗಾದರೆ ಮಾತ್ರ ಸಂಸ್ಕøತಕ್ಕೆ ಉಳಿಗಾಲ. ಜೊತೆಗೆ ಭಾಷೆಯ ಅಭ್ಯು ದಯವಾಗುತ್ತದೆ ಎಂದು ಹೇಳಿದರು.
ಮೈಸೂರಿನ ಪ್ರಾಚ್ಯ ವಸ್ತು ಸಂಶೋಧ ನಾಲಯದ ನಿರ್ದೇಶಕ ಡಾ.ಎಸ್.ಶಿವ ರಾಜಪ್ಪ ಮಾತನಾಡಿ, ಸಂಸ್ಕøತ ಈ ನೆಲದ ಭಾಷೆ, ಅದರ ಏಳಿಗೆ ಎಲ್ಲರ ಜವಾಬ್ದಾರಿ ಯಾಗಿದೆ. ಇತರೆ ಭಾಷೆಗಳಿಗೆ ನೀಡುವಂತೆ ಸಂಸ್ಕøತ ಭಾಷೆಗೂ ಆದ್ಯತೆ ದೊರೆಯ ಬೇಕು. ಮಲತಾಯಿ ಧೋರಣೆ ಬೇಡ. ಸಂಸ್ಕøತ ಭಾಷೆಯನ್ನು ವಿರೋಧಿಸುವವರು ಮನುಷ್ಯತ್ವ ಇಲ್ಲದವರು. ರಾಕ್ಷಸ ಮನೋ ಪ್ರವೃತ್ತಿ ಉಳ್ಳವರು ಎಂದು ಹೇಳಿದರು.

ಐವರು ಸಂಸ್ಕøತ ಶಿಕ್ಷಕರಿಗೆ ಸನ್ಮಾನ: ಇದೇ ಸಂದರ್ಭದಲ್ಲಿ ಐವರು ಸಂಸ್ಕøತ ಶಿಕ್ಷಕರಿಗೆ ಕರ್ನಾಟಕ ಸಂಸ್ಕøತ ವಿಶ್ವ ವಿದ್ಯಾನಿಲಯದ ಕುಲಪತಿ ಡಾ.ಪದ್ಮಾ ಶೇಖರ್ ಸನ್ಮಾನಿಸಿ ದರು. ಕಡೂರಿನ ಲಕ್ಷ್ಮೀಶ ಸಂಸ್ಕøತ ಪಾಠ ಶಾಲೆಯ ವಿದ್ವಾನ್ ಕೆ.ಮಧುಸೂದನ್, ಮೈಸೂರಿನ ಶಂಕರ ವಿಲಾಸ ಸಂಸ್ಕøತ ಪಾಠ ಶಾಲೆಯ ಮಧುಮತಿ, ಮಲೈ ಮಹದೇ ಶ್ವರ ಬೆಟ್ಟದ ಸಂಸ್ಕøತ ಪಾಠಶಾಲೆಯ ಟಿ.ಪಿ. ಚನ್ನಬಸಪ್ಪ, ಕೊಳ್ಳೇಗಾಲದ ಮಲೈ ಮಹದೇ ಶ್ವರ ಸಂಸ್ಕøತ ಪಾಠಶಾಲೆಯ ಸೀತಾರಾಮ ಭಟ್ಟ, ತಿ.ನರಸೀಪುರ ತಾಲೂಕಿನ ಕುರು ಬೂರು ಫಲಹಾರ ಪ್ರಭುದೇವಸ್ವಾಮಿ ಸಂಸ್ಕøತ ಪಾಠಶಾಲೆಯ ವಿದ್ವಾನ್ ಎಂ.ನಂದೀಶ್ ಅವರನ್ನು ಸನ್ಮಾನಿಸಲಾಯಿತು. ಈ ಸಂದರ್ಭ ದಲ್ಲಿ ಪ್ರೊ.ಸೋಮಶೇಖರಗೌಡ, ಮೈಸೂರು ವಿಭಾಗ ವಿಷಯ ಪರಿವೀಕ್ಷಕ ಪರಶಿವ ಮೂರ್ತಿ, ವಲಯ ಸಂಯೋಜಕ ಇಂದಿ ರೇಶಪ್ಪ ಇನ್ನಿತರರು ಉಪಸ್ಥಿತರಿದ್ದರು.