ಮತದಾನದ ಹಕ್ಕಿಗಾಗಿ ಸಂತೇಬಾಚಹಳ್ಳಿ ಡೈರಿ ಷೇರುದಾರರ ಪ್ರತಿಭಟನೆ

ಕೆ.ಆರ್.ಪೇಟೆ, ಡಿ.30- ತಾಲೂಕಿನ ಸಂತೇಬಾಚಹಳ್ಳಿ ಹಾಲು ಉತ್ಪಾದಕರ ಸಹಕಾರ ಸಂಘದಲ್ಲಿ 300ಕ್ಕೂ ಹೆಚ್ಚು ಷೇರುದಾರರಿದ್ದರೂ, ಕೇವಲ 47 ಮಂದಿಗೆ ಮಾತ್ರ ಮತದಾನದ ಹಕ್ಕು ನೀಡಿರುವುದನ್ನು ಖಂಡಿಸಿ ಹಾಗೂ ಎಲ್ಲಾ ಷೇರುದಾರರಿಗೂ ಮತದಾನದ ಹಕ್ಕು ನೀಡಬೇಕೆಂದು ಒತ್ತಾಯಿಸಿ ಸಂಘದ ಷೇರುದಾರರು ಹಾಗೂ ಹಾಲು ಉತ್ಪಾದಕರು ಸೋಮವಾರ ಪ್ರತಿಭಟನೆ ನಡೆಸಿದರು.

ಸಂತೇಬಾಚಹಳ್ಳಿ ಹಾಲು ಉತ್ಪಾದಕರ ಸಹಕಾರ ಸಂಘದ ಬಿಎಂಸಿ ಕೇಂದ್ರದ ಎದುರು ಜಮಾಯಿಸಿದ ಪ್ರತಿಭಟನಾಕಾರರು, ಹಾಲಿನ ಟ್ಯಾಂಕರ್ ತಡೆದು ಪ್ರತಿಭಟನೆ ನಡೆಸಿದರು.

ಸಂಘದಲ್ಲಿ 324 ಷೇರುದಾರರಿದ್ದಾರೆ. ಆದರೆ ಕಾರ್ಯದರ್ಶಿಗಳು ವಾರ್ಷಿಕ ಮಹಾಸಭೆ ಹಾಜರಾತಿ ಹಾಗೂ 2018-19ನೇ ಸಾಲಿನಲ್ಲಿ ಕನಿಷ್ಠ 180 ದಿನ ಹಾಲು ಪೂರೈಕೆ ಮಾಡಿ ರುವ ದಾಖಲೆ ಮೇರೆಗೆ ಕೇವಲ 47 ಮಂದಿಗೆ ಮಾತ್ರÀ್ರ ಮತದಾನದ ಹಕ್ಕು ನೀಡಲಾಗಿದೆ ಎಂದು ನೊಟೀಸ್ ಬೋರ್ಡಿನಲ್ಲಿ ಹಾಕಿದ್ದಾರೆ. ನಾವು ಎಲ್ಲಾ ವಾರ್ಷಿಕ ಮಹಾಸಭೆಗಳಿಗೂ ಹೋಗಿದ್ದೇವೆ. ವರ್ಷ ಪೂರ್ತಿ ಹಾಲನ್ನು ಪೂರೈಕೆ ಮಾಡಿರುತ್ತೇವೆ. ಆದರೂ ಮತ ದಾನದ ಹಕ್ಕು ಕಸಿದಿರುವುದು ಸರಿಯಲ್ಲ. ಹಾಗಾಗಿ ಕೂಡಲೇ ಜ.12ರಂದು ನಿಗದಿಯಾಗಿ ರುವ ಸಂಘದ ಚುನಾವಣೆ ಮುಂದೂಡಬೇಕು ಎಂದು ಪ್ರತಿಭಟನಾಕಾರರು ಒತ್ತಾಯಿಸಿದರು.

ಪ್ರತಿಭಟನೆಯಲ್ಲಿ ಗ್ರಾಪಂ ಉಪಾಧ್ಯಕ್ಷ ದೇವರಾಜು, ಡೈರಿ ಮಾಜಿ ಅಧ್ಯಕ್ಷ ಎಸ್.ಆರ್. ಮಂಜುನಾಥ್, ರವಿಕುಮಾರ್, ಕಾಂತರಾಜು, ಎನ್.ಸೋಮಶೇಖರ್, ನಿವೃತ್ತ ಶಿಕ್ಷಕ ಕೆಂಪೇಗೌಡ, ಸಂತೇಬಾಚಹಳ್ಳಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಬ್ಯಾಂಕ್ ಅಧ್ಯಕ್ಷ ಹರೀಶ್, ಕಾಂತರಾಜ್ ಇನ್ನಿತರರಿದ್ದರು.