ಮೈಸೂರು: ಯುವ ಜನಾಂಗದಲ್ಲಿ ತೃಪ್ತಿ ಮತ್ತು ಮಾನವೀಯತೆ ಅಂಶಗಳನ್ನು ಮೈಗೂಡಿಸಿ ಸಮಾಜದಲ್ಲಿ ಶಾಂತಿ-ಸೌಹಾರ್ದ ಮೂಡಿಸಿ ಎಂದು ಕರ್ನಾಟಕ ಲೋಕಾಯುಕ್ತ ನಿವೃತ್ತ ನ್ಯಾಯಮೂರ್ತಿ ಎನ್.ಸಂತೋಷ್ ಹೆಗ್ಡೆ ಅವರು ಇಂದಿಲ್ಲಿ ಸಲಹೆ ನೀಡಿದರು.
ಮೈಸೂರಿನ ಹುಣಸೂರು ರಸ್ತೆಯ ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾನಿಲ ಯದ ಘಟಿಕೋತ್ಸವ ಭವನದಲ್ಲಿ ಏರ್ಪ ಡಿಸಿದ್ದ ಲಯನ್ಸ್ ಕ್ಲಬ್ಸ್ ಇಂಟರ್ ನ್ಯಾಷನಲ್ (ಡಿಸ್ಟ್ರಿಕ್ಟ್ 317ಂ)ನ 43ನೇ ವಾರ್ಷಿಕ ಜಿಲ್ಲಾ ಸಮಾವೇಶವನ್ನು ದೀಪ ಬೆಳಗಿಸುವ ಮೂಲಕ ಉದ್ಘಾಟಿಸಿ ಅವರು ಮಾತನಾಡುತ್ತಿದ್ದರು.
ತಾವು ಹಲವು ಹುದ್ದೆಗಳನ್ನು ನಿರ್ವಹಿ ಸಿದ್ದರೂ, ಲೋಕಾಯುಕ್ತ ಸಂಸ್ಥೆ ಜವಾ ಬ್ದಾರಿ ನಿರ್ವಹಿಸುವ ಮುಂಚೆ ಅನ್ಯಾಯ, ಅಕ್ರಮ, ಲಂಚದಂತಹ ಅಂಶಗಳು ನನ್ನ ಗಮನಕ್ಕೆ ಬಂದಿರಲಿಲ್ಲ. 5 ವರ್ಷ ಕಾಲ ಸಾಮಾಜಿಕ ಅನ್ಯಾಯ ನನ್ನ ಅನುಭವಕ್ಕೆ ಬಂತು. ಸಮಾಜ ಬದಲಿಸಲು ಶಕ್ತಿ ಮೀರಿ ಪ್ರಯತ್ನಿಸಿದೆ ಎಂದು ಅವರು ನುಡಿದರು.
ಜೈಲಿಗೆ ಹೋಗಿ ಬೇಲ್ ಮೇಲೆ ಹೊರಗೆ ಬಂದವರನ್ನು ಹಾರ, ತುರಾಯಿ ಹಾಕಿ ಸಂಭ್ರಮದಿಂದ ಮೆರವಣಿಗೆ ಮೂಲಕ ಬರಮಾಡಿಕೊಳ್ಳುತ್ತಾರೆ ಎಂದರೆ ಶ್ರೀಮಂತಿಕೆ ಮತ್ತು ಅಧಿಕಾರದ ಪೂಜೆ ನಡೆಯುತ್ತಿದೆ ಎನ್ನುವಲ್ಲಿ ಸಂಶಯವಿಲ್ಲ. ಪ್ರಾಮಾಣಿ ಕತೆಗೆ ಬೆಲೆಯೇ ಇಲ್ಲ. ಪರಿಸ್ಥಿತಿ ಹೀಗಿರು ವುದರಿಂದ ಸಮಾಜದಲ್ಲಿ ಶಾಂತಿ-ಸೌಹಾರ್ದ ಸಾಧ್ಯವಿಲ್ಲ ಎಂದು ನ್ಯಾ.ಸಂತೋಷ್ ಹೆಗ್ಡೆ ಅಸಮಾಧಾನ ವ್ಯಕ್ತಪಡಿಸಿದರು.
ಚುನಾವಣೆಗಳ ಸಂದರ್ಭ ನಾಯಕರ ಮಾತು, ನಡವಳಿಕೆಗಳನ್ನು ಗಮನಿಸಿದರೆ, ಅವರ ಮನಸ್ಸಿನಲ್ಲೇನಿದೆ ಎಂಬುದು ತಿಳಿ ಯುತ್ತದೆ. ಮೌಲ್ಯಗಳು ಕುಸಿದಿವೆ. ಮುಂದಿನ ಪೀಳಿಗೆಗಾದರೂ, ತೃಪ್ತಿ ಮತ್ತು ಮೌಲ್ಯಗಳನ್ನು ಹೇಳಿಕೊಟ್ಟು ಮೈಗೂಡಿಸ ದಿದ್ದಲ್ಲಿ ಭವಿಷ್ಯದಲ್ಲಿ ಸಂಕಷ್ಟ ಎದುರಾ ಗಲಿದೆ ಎಂದು ಕಳವಳ ವ್ಯಕ್ತಪಡಿಸಿದ ಅವರು, ಶ್ರೀಮಂತಿಕೆ ಮತ್ತು ಅಧಿಕಾರಕ್ಕೆ ಸಲಾಮು ಹೊಡೆಯುವ ವ್ಯವಸ್ಥೆ ದೂರ ಮಾಡುವ ಅನಿವಾರ್ಯವಿದೆ ಎಂದರು.
52 ಲಕ್ಷ ರೂ. ಜೀಪ್ ಹಗರಣ, 64 ಕೋಟಿ ರೂ. ಬೋಫರ್ಸ್ ಹಗರಣ, 70,000 ಕೋಟಿ ರೂ. ಕಾಮನ್ ವೆಲ್ತ್ ಹಗರಣ, 1,76,000 ಕೋಟಿ ರೂ. 2ಜಿ ಹಗರಣ, 1,86,000 ಕೋಟಿ ರೂ. ಕಲ್ಲಿದ್ದಲು ಹಗರಣ ಹೀಗೆ ನಮ್ಮ ಸಂಪ ನ್ಮೂಲ ಸೋರಿಕೆಯಾದರೆ ಅಭಿವೃದ್ಧಿ ಹೇಗೆ ಸಾಧ್ಯ? ಎಂದ ಅವರು, ವಿವಿಧ ಅಭಿವೃದ್ಧಿಗೆ ಮಂಜೂರಾದ ಅನುದಾನವು ಕಾಮಗಾರಿ ಅನುಷ್ಠಾನವಾಗುವಷ್ಟರಲ್ಲಿ ಒಂದು ರೂಪಾಯಿಗೆ ತಲುಪುವುದು ಕೇವಲ 15 ಪೈಸೆ, ಪರಿಸ್ಥಿತಿ ಹೀಗಿರುವಾಗ ಅಭಿವೃದ್ಧಿ ಸಾಧ್ಯವಾದೀತೆ ಎಂದು ಪ್ರಶ್ನಿ ಸಿದ ನ್ಯಾಯಮೂರ್ತಿಗಳು, ಕ್ರಾಂತಿ ಯಿಂದ ಬದಲಾವಣೆ ಸಾಧ್ಯವಿಲ್ಲ. ದುರಾಸೆ ಹೋಗಿ ತೃಪ್ತಿ, ಮಾನವೀಯತೆ ಮೈಗೂ ಡಬೇಕಾಗಿದೆ ಎಂದು ಅಭಿಪ್ರಾಯಪಟ್ಟರು.
ಸಂವಿಧಾನ ರಚನೆಯಾದಾಗ ಗಂಭೀರ ಚರ್ಚೆಯಾಗಿ ರಾಜನೀತಿ ಹೇಗಿರಬೇಕು ಎಂಬುದನ್ನು ನಿರ್ಧರಿಸಿ `ಜನರಿಂದ -ಜನರಿಗಾಗಿ-ಜನರ ಸರ್ಕಾರ’ ಎಂಬ ಧ್ಯೇಯದೊಂದಿಗೆ ಪ್ರಜಾಪ್ರಭುತ್ವ ವ್ಯವಸ್ಥೆ ಜಾರಿಯಲ್ಲಿದೆ ಎಂದ ಅವರು, ಆದರೆ ಶಾಸಕಾಂಗ ಏನಾಗುತ್ತಿದೆ? 2004ರಿಂದ 2009ರವರೆಗೆ ಲೋಕಸಭೆಗೆ 543 ಸದಸ್ಯರ ಪೈಕಿ ಕೇವಲ 174 ಮಂದಿ ಒಂದೇ ಒಂದು ಬಾರಿ ಮಾತ್ರ ಸಂಸತ್ ಕಾರ್ಯಕಲಾಪದಲ್ಲಿ ಪಾಲ್ಗೊಂಡಿದ್ದರು ಎಂದು ಆತಂಕ ವ್ಯಕ್ತಪಡಿಸಿದರು.
2012ರಲ್ಲಿ ಜಿಎಸ್‍ಟಿ ತರಲು ಹೊರಟ ಯುಪಿಎ ಸರ್ಕಾರಕ್ಕೆ ವಿರೋಧ ವ್ಯಕ್ತಪಡಿ ಸಿದ್ದ ಎನ್‍ಡಿಎ ಪಕ್ಷ ಅಧಿಕಾರಕ್ಕೆ ಬರುತ್ತಿ ದ್ದಂತೆಯೇ ಮಾಡಿದ್ದೇನು, ಒಂದು ದಿನದ ಲೋಕಸಭೆ ಕಲಾಪದ ಖರ್ಚು 10 ಕೋಟಿ ರೂ. ಆದರೆ ಅಲ್ಲಿ ನಡೆಯುವುದೇನು? ಎಂದ ಅವರು, ಸರ್ಕಾರಿ ಅಧಿಕಾರಿಗಳನ್ನು ನೇಮಿಸುವ ಪಬ್ಲಿಕ್ ಸರ್ವೀಸ್ ಕಮೀಷನ್ ಅಧಿಕಾರಿಗಳ ವಿರುದ್ಧ ಲಂಚದ ಆರೋಪ ದಡಿ ಚಾರ್ಜ್‍ಶೀಟ್ ಹಾಕುತ್ತದೆ. ಪ್ರಕರಣ ಇತ್ಯರ್ಥದಲ್ಲಿ ವಿಳಂಬ ಹಾಗೂ ಭ್ರಷ್ಟಾಚಾರ, ಹಣ ಪಡೆದು ಸುಳ್ಳು ಸುದ್ದಿ ಪ್ರಕಟಿಸುವ ಮಾಧ್ಯಮ, ಹೀಗೆ ಶಾಸಕಾಂಗ, ಕಾರ್ಯಾಂಗ, ನ್ಯಾಯಾಂಗ ಹಾಗೂ ಪತ್ರಿಕಾರಂಗ ಕೂಡ ಕಲುಷಿತಗೊಂಡರೆ ನಿಜವಾದ ಅಭಿವೃದ್ಧಿ ಕಾಣಲು ಹೇಗೆ ಸಾಧ್ಯ ಎಂದು ಪ್ರಶ್ನಿಸಿದರು.
ಲಯನ್ಸ್ ಕ್ಲಬ್ಸ್ ಇಂಟರ್ ನ್ಯಾಷನಲ್ ಜಿಲ್ಲಾ ಗವರ್ನರ್ ಲಯನ್ ವಿ.ರೇಣು ಕುಮಾರ್ ಅಧ್ಯಕ್ಷತೆ ವಹಿಸಿದ್ದ ಸಮಾವೇಶ ದಲ್ಲಿ ಲ.ವಿ.ವಿ.ಕೃಷ್ಣಾರೆಡ್ಡಿ, ಲ. ಡಾ. ನಾಗ ರಾಜ್ ವಿ.ಬೈರಿ, ಲ. ಡಾ. ಜಿ.ಎ.ರಮೇಶ, ಲ.ಕೆ.ಎಸ್.ದ್ವಾರಕಾನಾಥ್, ಲ.ಕೆ.ಈಶ್ವ ರನ್, ಲ.ಕೆ.ದೇವೇಗೌಡ, ಲ.ಎನ್.ಜಯ ರಾಮು, ಲ.ವಿ.ವೆಂಕಟೇಶ, ಲ.ಸುರೇಶ, ರಾಮು, ಲ.ಎಸ್.ಮೂರ್ತಿ, ಲ.ಅಶ್ವತ್ಥ್ ಹೆಚ್.ನಾರಾಯಣ್, ಲ.ಜಯ ಕುಮಾರ್, ಲ.ಎಲ್.ವಿ.ಶ್ರೀನಿವಾಸ ಸೇರಿದಂತೆ ಹಲವರು ಪಾಲ್ಗೊಂಡಿದ್ದರು.
ಇದೇ ವೇಳೆ ಸಂಸ್ಥೆಯಿಂದ ಮಂಡ್ಯ ಮತ್ತು ಮೈಸೂರಿಗೆ ತಲಾ ಒಂದರಂತೆ ಮಾರುತಿ ಒಮ್ನಿ ಆಂಬುಲೆನ್ಸ್‍ಗಳನ್ನು ಉಡುಗೊರೆಯಾಗಿ ನೀಡಲಾಯಿತು. ಲ. ರಾಮಚಂದ್ರ ಅವರು ರಾಷ್ಟ್ರಧ್ವಜವನ್ನು ವೇದಿಕೆಗೆ ತಂದರು. ವಿಶ್ವ ಶಾಂತಿಗಾಗಿ ಒಂದು ನಿಮಿಷ ಮೌನ ಆಚರಿಸಿ, ಧ್ವಜ ವಂದನೆ ಸಮರ್ಪಿಸಲಾಯಿತು. ನಂತರ ವಿವಿಧ ಗೋಷ್ಠಿಗಳು ಸಂಜೆವರೆಗೂ ನಡೆದವು. 1500 ಮಂದಿ ಪ್ರತಿನಿಧಿಗಳು ಸಮಾವೇಶದಲ್ಲಿ ಪಾಲ್ಗೊಂಡಿದ್ದರು.