ಶಾಲಾ ವಾಹನ ಡಿಕ್ಕಿ: 3 ವರ್ಷದ ಕಂದಮ್ಮ ಸಾವು

ಬೇಲೂರು: ಶಾಲಾ ವಾಹನ ಡಿಕ್ಕಿ ಹೊಡೆದ ಪರಿಣಾಮ ಮಗುವೊಂದು ಮೃತಪಟ್ಟಿರುವ ಘಟನೆ ತಾಲೂಕಿನ ಯಗಶೆಟ್ಟಿಹಳ್ಳಿ ಗ್ರಾಮದಲ್ಲಿ ನಡೆದಿದೆ.

ಗ್ರಾಮದ ರಮೇಶ್, ನಂದಿನಿ ದಂಪತಿ ದ್ವಿತೀಯ ಪುತ್ರಿ ತಾರಣ್ಯ (3) ಮೃತಪಟ್ಟ ಕಂದಮ್ಮ. ನಂದಿನಿ ತಮ್ಮ ಮೊದಲ ಮಗುವನ್ನು ಶಾಲಾ ವ್ಯಾನ್‍ಗೆ ಹತ್ತಿಸುವ ವೇಳೆ ಮನೆ ಮುಂದೆ ಆಟ ವಾಡುತ್ತಿದ್ದ ತಾರುಣ್ಯ ವ್ಯಾನ್ ಬಳಿ ತೆರಳಿದ್ದಾಳೆ. ಇದನ್ನು ಗಮನಿಸದೆ ಮೊಬೈಲ್ ಕರೆಯಲ್ಲಿ ನಿರತನಾಗಿದ್ದ ವ್ಯಾನ್ ಚಾಲಕನ ಅಜಾಗರೂಕತೆಯ ವಾಹನ ಚಲಾಯಿಸಿ ಡಿಕ್ಕಿ ಹೊಡೆದಿದ್ದಾನೆ. ಪರಿಣಾಮ ಸ್ಥಳದಲ್ಲೇ ಮಗು ಮೃತಪಟ್ಟಿದೆ. ಬೇಲೂರು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ..