ಜಿಲ್ಲಾದ್ಯಂತ 144 ಸೆಕ್ಷನ್‍ನಡಿ ನಿಷೇಧಾಜ್ಞೆ: ಕೊರೊನಾ ತಡೆಗೆ ಸಹಕರಿಸಲು ಜಿಲ್ಲಾಧಿಕಾರಿ ಡಾ.ಎಂ.ಆರ್.ರವಿ ಮನವಿ

ಚಾಮರಾಜನಗರ,ಮಾ.23-ಕೊರೊನಾ ಹರಡದಂತೆ ಮುಂಜಾಗ್ರತಾ ಕ್ರಮ ವಹಿ ಸಲು ಹಾಗೂ ಸಾರ್ವಜನಿಕರ ಸುರಕ್ಷತೆ ಹಾಗೂ ಆರೋಗ್ಯದ ದೃಷ್ಠಿಯಿಂದ ಚಾಮ ರಾಜನಗರ ಜಿಲ್ಲಾದ್ಯಂತ ನಿಷೇಧಾಜ್ಞೆ ಆದೇಶ ಹೊರಡಿಸಲಾಗಿದ್ದು, ಕೊರೊನಾ ತಡೆಯುವ ಸಂಬಂಧ ಪ್ರತಿಯೊಬ್ಬರು ಸಹಕರಿಸಬೇಕೆಂದು ಜಿಲ್ಲಾಧಿಕಾರಿ ಡಾ.ಎಂ.ಆರ್.ರವಿ ಅವರು ತಿಳಿಸಿದ್ದಾರೆ.

ನಗರದ ಡಿಸಿ ಕಚೇರಿ ಸಭಾಂಗಣದಲ್ಲಿಂದು ನಡೆದ ಸುದ್ದಿಗೊಷ್ಠಿಯಲ್ಲಿ ಜಿಲ್ಲಾಧಿಕಾರಿಯ ವರು ಈ ವಿಷಯವನ್ನು ತಿಳಿಸಿದರು.

ಜಿಲ್ಲೆಯಲ್ಲಿ ಕೊರೊನಾ ಮುಂಜಾಗ್ರತಾ ಕ್ರಮವನ್ನು ಜನರು ಸಹ ಗಂಭೀರವಾಗಿ ಪರಿಗಣಿಸಬೇಕು. ಹೀಗಾಗಿ ಜಿಲ್ಲಾಡಳಿತವು ಜನರ ಆರೋಗ್ಯ ಹಿತದೃಷ್ಠಿಯಿಂದ ಅನೇಕ ಬಿಗಿ ಕ್ರಮಗಳನ್ನು ಕೈಗೊಂಡಿದೆ. ಜಿಲ್ಲೆಯ ಜನರು ಸಹ ಜಿಲ್ಲಾಡಳಿತ ವಹಿಸಲಿರುವ ಆರೋಗ್ಯ ಪೂರಕ ಕ್ರಮಗಳಿಗೆ ಸಹಕಾರ ನೀಡಬೇಕು ಎಂದು ಜಿಲ್ಲಾಧಿಕಾರಿ ತಿಳಿಸಿದರು.

ಈಗಾಗಲೇ ಜಿಲ್ಲೆಯನ್ನು ಸಂಪರ್ಕಿ ಸುವ ಅಂತರರಾಜ್ಯಗಳಿಗೆ ಕೆಎಸ್‍ಆರ್‍ಟಿಸಿ ಹಾಗೂ ಖಾಸಗಿ ಸಾರಿಗೆ ವಾಹನಗಳ ಸಂಚಾರವನ್ನು ನಿಷೇಧಿಸಲಾಗಿತ್ತು. ಇದೀಗ ತಕ್ಷಣದಿಂದ ಜಾರಿಗೆ ಬರುವಂತೆ ಜಿಲ್ಲೆಯ ಗಡಿಗೆ ಹೊಂದಿಕೊಂಡಿರುವ ತಮಿಳು ನಾಡು ಮತ್ತು ಕೇರಳ ರಾಜ್ಯಕ್ಕೆ ಖಾಸಗಿ ವಾಹನಗಳು (ಎಲ್.ಎಂ.ವಿ. ವೈಟ್ ಬೋರ್ಡ್) ಹಾಗೂ ಟ್ಯಾಕ್ಸಿ (ಎಲ್.ಎಂ.ವಿ. ಹಳದಿ ಬೋರ್ಡ್) ವಾಹನ ಸಂಚಾರ ವನ್ನು ಮಾರ್ಚ್ 29ರವರೆಗೆ ರದ್ದುಪಡಿಸ ಲಾಗಿದೆ. ಅಲ್ಲದೆ ಜಿಲ್ಲೆಯಾದ್ಯಂತ ಖಾಸಗಿ ಬಸ್‍ಗಳ ಸಂಚಾರವನ್ನು ಸಹ ರದ್ದು ಪಡಿಸಿ ಆದೇಶಿಸಲಾಗಿದೆ. ಜಿಲ್ಲೆಯಲ್ಲೂ ಕೆ.ಎಸ್.ಆರ್.ಟಿ.ಸಿ ಬಸ್ ಸಂಚಾರ ಇರುವುದಿಲ್ಲ ಎಂದರು.

ರಾಜ್ಯದಲ್ಲಿ ಈಗಾಗಲೇ 9 ಜಿಲ್ಲೆಗಳಲ್ಲಿ ಕೊರೊನಾ ವೈರಸ್ ಹಿನ್ನಲೆಯಲ್ಲಿ ಮುನ್ನೆಚ್ಚರಿಕೆ ಕ್ರಮವಾಗಿ ಹಲವಾರು ನಿರ್ಬಂಧ ವಿಧಿಸಲಾಗಿದೆ. ಇದಕ್ಕೆ ಸಂಬಂ ಧಿಸಿದಂತೆ ಮೈಸೂರು ಜಿಲ್ಲೆಯಿಂದ ಬರುವ ಪ್ರಯಾಣಿಕರ ಮೇಲೆ ನಿಗಾ ವಹಿ ಸುವ ಹಾಗೂ ಈ ಜಿಲ್ಲೆಯಿಂದ ಅನಾ ವಶ್ಯಕವಾಗಿ ಓಡಾಡುವ ಸಾರ್ವಜನಿಕರ ಪ್ರಯಾಣವನ್ನು ನಿರ್ಬಂಧಿಸುವ ಉದ್ದೇಶ ದಿಂದ ಜಿಲ್ಲೆಯ 11 ಕಡೆ ಚೆಕ್ ಪೋಸ್ಟ್ ಗಳನ್ನು ತೆರೆಯಲಾಗಿದೆ. ಈ ಚೆಕ್ ಪೋಸ್ಟ್‍ಗಳಲ್ಲಿ ವೈದ್ಯಕೀಯ ಚೆಕ್ ಪೋಸ್ಟ್‍ನ್ನು ನಿರ್ಮಿಸಿದ್ದು, ಜಿಲ್ಲಾ ಆರೋಗ್ಯ ಇಲಾಖೆ ಅಗತ್ಯ ಸ್ಕ್ರೀನಿಂಗ್ ಮಾಡಲಿದೆ ಎಂದು ಜಿಲ್ಲಾಧಿಕಾರಿ ವಿವರಿಸಿದರು.

ಚಾಮರಾಜನಗರ ತಾಲೂಕಿನ ಹೆಗ್ಗ ವಾಡಿ, ಪುಣಜನೂರು, ಗುಂಡ್ಲುಪೇಟೆ ತಾಲೂಕಿನ ಹಿರೇಕಾಟಿ(ಬೇಗೂರು), ಮದ್ದೂರು(ಮೂಲೆಹೊಳೆ), ಮೇಲು ಕಾಮನಹಳ್ಳಿ(ಕೆಕ್ಕನಹಳ್ಳ), ಕುರುಬರ ಹುಂಡಿ, ಹನೂರು ತಾಲೂಕಿನ ಪಾಲಾರ್ (ಮೆಟ್ಟೂರು ರಸ್ತೆ), ನಾಲ್‍ರೋಡ್, ಅರ್ಧನಾರೀಪುರ(ಒಡೆಯರಪಾಳ್ಯ), ಕೊಳ್ಳೇಗಾಲ ತಾಲೂಕಿನ ಸತ್ತೇಗಾಲ, ಬಾಣ ಹಳ್ಳಿ (ಮೂಗೂರು ಗಡಿ)ಯಲ್ಲಿ ಚೆಕ್ ಪೋಸ್ಟ್‍ಗಳನ್ನು ತೆರೆಯಲಾಗಿದೆ ಎಂದರು.

ಚಾಮರಾಜನಗರಕ್ಕೆ ಹೊಂದಿಕೊಂಡಿ ರುವ ಅಕ್ಕಪಕ್ಕದ ಜಿಲ್ಲೆಗಳನ್ನು ಸಂಪೂರ್ಣ ಸಂಪರ್ಕ ಕಡಿತಗೊಳಿಸುವ ಉದ್ದೇಶ ದಿಂದ ಈ ಕ್ರಮ ತೆಗೆದುಕೊಳ್ಳಲಾಗಿದೆ ಎಂದರು.

ಕೊರೊನಾ ಸಂದರ್ಭವನ್ನು ದುರುಪ ಯೋಗ ಪಡಿಸಿಕೊಂಡು ಅಗತ್ಯ ವಸ್ತುಗಳ ಅಭಾವ ಸೃಷ್ಠಿಸುವವರ ವಿರುದ್ಧ ಕ್ರಮ ಜರುಗಿಸಲಾಗುತ್ತದೆ. ದಿನನಿತ್ಯದ ವಸ್ತುಗ ಳಾದ ಹಾಲು, ತರಕಾರಿ, ಔಷಧಿ, ದಿನಸಿ ಸಾಮಗ್ರಿ ಗಳು, ಮತ್ತಿತರ ಅಗತ್ಯ ವಸ್ತುಗಳ ಮಾರಾಟಕ್ಕೆ ಯಾವುದೇ ತೊಂದರೆ ಇಲ್ಲ ಎಂದು ಜಿಲ್ಲಾಧಿ ಕಾರಿ ಡಾ.ಎಂ.ಆರ್. ರವಿ ತಿಳಿಸಿದರು.

ಆರೋಗ್ಯದ ಹಿತದೃಷ್ಠಿಯಿಂದ ಮುಂಬ ರುವ ಯುಗಾದಿ ಹಬ್ಬವನ್ನು ಗುಂಪು ಗೂಡಿ ಆಚರಿಸದೇ ಮನೆಯಲ್ಲಿಯೇ ಸರಳವಾಗಿ ಅಚರಿಸಿಕೊಳ್ಳಬೇಕು. ಎಲ್ಲಾ ಧರ್ಮಗಳ ಜನರು ಮನೆಯಲ್ಲಿಯೇ ಪ್ರಾರ್ಥಿಸುವ ಮೂಲಕ ಸಹಕಾರ ನೀಡಬೇಕು ಎಂದು ಜಿಲ್ಲಾಧಿಕಾರಿ ಮನವಿ ಮಾಡಿದರು.

ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಎಚ್.ಡಿ. ಆನಂದಕುಮಾರ್ ಮಾತನಾಡಿ, ಸಾರ್ವಜನಿಕರ ಆರೋಗ್ಯ ಹಿತದೃಷ್ಠಿ ಯಿಂದ ಹೊರಡಿಸಲಾಗಿರುವ ಸೆಕ್ಷನ್ 144 ಅನ್ವಯ ನಿಷೇಧಾಜ್ಞೆಯನ್ನು ಪ್ರತಿಯೊಬ್ಬರು ಪಾಲಿಸಬೇಕು. ಕುಟುಂಬ ಸೇರಿದಂತೆ ಸರ್ವರ ಆರೋಗ್ಯ ಕಾಳಜಿಗಾಗಿ ಜಿಲ್ಲಾಡ ಳಿತ ಹೊರಡಿಸಿರುವ ಆದೇಶಗಳನ್ನು ಅನುಸರಿಸಬೇಕು. ಯಾವುದೇ ಆದೇಶ, ಕಾನೂನು ಉಲ್ಲಂಘಿಸಿದಲ್ಲಿ ನಿರ್ದಾಕ್ಷಿಣ್ಯ ಕ್ರಮ ತೆಗೆದುಕೊಳ್ಳಲಾಗುತ್ತದೆ. ಹೀಗಾಗಿ ಜಿಲ್ಲಾ ಜನತೆ ಸಹಕಾರ ನೀಡಬೇಕು ಎಂದರು.
ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ಎಂ.ಸಿ.ರವಿ ಸುದ್ದಿಗೋಷ್ಠಿಯಲ್ಲಿ ಹಾಜರಿದ್ದರು.