ಮೈಸೂರು-ಚಾ.ನಗರ ಒಕ್ಕಲಿಗರ ಸಂಘಕ್ಕೆ 27 ಮಂದಿ ನಿರ್ದೇಶಕರ ಆಯ್ಕೆ

ಮೈಸೂರು,ಜೂ.30(ವೈಡಿಎಸ್)- ಮೈಸೂರು-ಚಾಮ ರಾಜನಗರ ಒಕ್ಕಲಿಗರ ಸಂಘದ ಚುನಾವಣೆಯಲ್ಲಿ 27 ಮಂದಿ ನಿರ್ದೇಶಕರಾಗಿ ಆಯ್ಕೆಯಾಗಿದ್ದಾರೆ. ಈ ಪೈಕಿ 8 ಮಂದಿ ಅವಿರೋಧವಾಗಿ ಆಯ್ಕೆಯಾಗಿದ್ದು, ಉಳಿದ 19 ಸ್ಥಾನಗಳಿಗೆ ನಡೆದ ಚುನಾವಣೆಯಲ್ಲಿ ಅತೀ ಹೆಚ್ಚು ಮತ ಪಡೆದ ಅಭ್ಯರ್ಥಿಗಳು ಗೆಲುವು ಸಾಧಿಸಿದ್ದಾರೆ.

ಭಾನುವಾರ ಬೆಳಿಗ್ಗೆ 9ರಿಂದ ಮಧ್ಯಾಹ್ನ 3 ಗಂಟೆವರೆಗೆ ವಿದ್ಯಾ ರಣ್ಯಪುರಂನ ಒಕ್ಕಲಿಗರ ಸಮುದಾಯ ಭವನ ಮತ್ತು ನಳಂದ ಹಿರಿಯ ಪ್ರಾಥಮಿಕ ಶಾಲೆ ಈ ಎರಡೂ ಕಡೆಯಿಂದ 19 ಬೂತ್ ಗಳಲ್ಲಿ ಮತದಾನ ನಡೆಯಿತು. ಮತದಾರರು ಉತ್ಸಾಹದಿಂದಲೇ ಪಾಲ್ಗೊಂಡು ಮೈಸೂರು ನಗರದ 8 ಸಾವಿರ ಹಾಗೂ ಜಿಲ್ಲೆಯಾ ದ್ಯಂತ ಮೂರೂವರೆ ಸಾವಿರ ಸೇರಿ ಒಟ್ಟು 11,500 ಮಂದಿ ಮತ ಚಲಾಯಿಸಿದ್ದರು. ಚುನಾವಣೆಯಲ್ಲಿ 56 ಮಂದಿ ಸ್ಪರ್ಧಿಸಿದ್ದರು.

ಮೈಸೂರು ಜಿಲ್ಲಾ ನೋಂದಣಾಧಿಕಾರಿ ಕಚೇರಿಯ ಸಹಾಯಕ ನೋಂದಣಾಧಿಕಾರಿ ಕೆ.ಎಸ್.ಹರೀಶ್ ಕುಮಾರ್ ಚುನಾವಣಾಧಿಕಾರಿ ಆಗಿ ಕಾರ್ಯನಿರ್ವಹಿಸಿದರು.

ಚುನಾವಣೆ ಮೂಲಕ ಆಯ್ಕೆಯಾದವರು: ಮೈಸೂರು ನಗರ ಘಟಕಕ್ಕೆ ಸಿ.ಮರಿಸ್ವಾಮಿ(1983), ಆರ್.ರವಿಕುಮಾರ್,(1621), ಎನ್.ಪ್ರಕಾಶ್(1541), ಗುರುರಾಜ್(1464), ಪ್ರಸನ್ನಲಕ್ಷ್ಮಣ (1371), ಜಿ.ಕುಮಾರ್‍ಗೌಡ(1351), ಎಂ.ಇ.ಚೇತನ್(1170), ಸುಶೀಲ ನಂಜಪ್ಪ(1098), ಎ.ರವಿ(1097), ಬಿ.ಇ.ಗಿರೀಶ್‍ಗೌಡ (1096), ಬೋರೇಗೌಡ(1024), ಎಸ್.ಉಮೇಶ್(1018), ಆರ್. ಲೋಕೇಶ್(1018), ಕೆ.ಪಿ.ನಾಗಣ್ಣ(986), ಮೈಸೂರು ತಾಲೂಕು ಘಟಕಕ್ಕೆ ಜಯರಾಮ(390), ನಂಜನಗೂಡು

ತಾಲೂಕು ಘಟಕಕ್ಕೆ ಗೋಪಾಲ(96), ತಿ.ನರಸೀಪುರ ತಾಲೂಕು ಘಟಕಕ್ಕೆ ಬಿ.ಸಿ. ಮಹೇಶ(369), ಪಿರಿಯಾಪಟ್ಟಣ ತಾಲೂಕು ಘಟಕಕ್ಕೆ ಪಿ.ಪ್ರಶಾಂತ್‍ಗೌಡ(91), ಕೆ.ಆರ್. ನಗರ ತಾಲೂಕು ಘಟಕಕ್ಕೆ ಎಂ.ಕೆ.ಶ್ರೀನಿವಾಸ್(301) ಮತ ಪಡೆದು ಆಯ್ಕೆಯಾಗಿದ್ದಾರೆ.

ಹೆಚ್.ಡಿ.ಕೋಟೆ ತಾಲೂಕು ಘಟಕಕ್ಕೆ ಹೆಚ್.ಎನ್.ಸುಧೀರ್, ಹುಣಸೂರು ತಾಲೂಕು ಘಟಕಕ್ಕೆ ಹೆಚ್.ಕೆ.ನಾಗಣ್ಣ, ಚಾ.ನಗರ ತಾಲೂಕು ಘಟಕಕ್ಕೆ ಪಿ.ಹೆಚ್. ರಾಜು, ಗುಂಡ್ಲುಪೇಟೆ ತಾಲೂಕು ಘಟಕಕ್ಕೆ ಆರ್.ಜಯರಾಮ್, ಯಳಂದೂರು ತಾಲೂಕು ಘಟಕಕ್ಕೆ ಎ.ಕುಮಾರ್, ಕೊಳ್ಳೇಗಾಲ ತಾಲೂಕು ಘಟಕಕ್ಕೆ ಟಿ.ಎನ್.ಸಂತೋಷ್‍ಕುಮಾರ್, ಮಹಾಪೋಷಕರಾಗಿ ಜಿ.ಮಂಜು, ಪೋಷಕರಾಗಿ ಎಂ.ಶಿವಕುಮಾರ್ ಅವಿರೋಧ ಆಯ್ಕೆಯಾಗಿದ್ದಾರೆ.