ಸೆಲ್ಫಿ ವಿತ್ ಹೆರಿಟೇಜ್ ಬಿಲ್ಡಿಂಗ್

ಮೈಸೂರುಸೆ.8-ಮೈಸೂರು ದಸರಾ ಮಹೋತ್ಸವ- 2019ರ ಅಂಗವಾಗಿ ಪುರಾ ತತ್ವ, ಸಂಗ್ರಹಾಲಯಗಳು ಮತ್ತು ಪರಂಪರೆ ಇಲಾಖೆ ವತಿಯಿಂದ ಜನಸಾಮಾನ್ಯರಿಗೆ ಹಾಗೂ ಪ್ರವಾಸಿಗರಿಗೆ ಪಾರಂಪರಿಕ ಕಟ್ಟಡಗಳ ಪರಿಚಯ ಮಾಡಿಕೊಡುವ ಸಲುವಾಗಿ ಸೆಲ್ಫಿ ವಿತ್ ಹೆರಿಟೇಜ್ ಬಿಲ್ಡಿಂಗ್ ಎಂಬ ಸ್ಪರ್ಧೆಯನ್ನು ಆಯೋಜಿಸಿದೆ. ಈ ಸ್ಪರ್ಧೆಯಲ್ಲಿ ವಿಜೇತರಾದ ಮೊದಲ 3 ಸೆಲ್ಫಿಗಳಿಗೆ ಪ್ರಥಮ ಬಹುಮಾನಕ್ಕೆ ರೂ. 3,000, ದ್ವಿತೀಯ ಬಹುಮಾನಕ್ಕೆ ರೂ. 2,000 ಹಾಗೂ ತೃತೀಯ ಬಹುಮಾನ ರೂ. 1,000 ನಗದನ್ನು ನೀಡಲಾಗುವುದು.

ಪಾರಂಪರಿಕ ಕಟ್ಟಡದೊಂದಿಗೆ ಒಬ್ಬರೇ ಸೆಲ್ಫಿ ತೆಗೆದುಕೊಂಡಿರಬೇಕು. ಸೆಲ್ಫಿ ಫೆÇೀಟೋ 10ಘಿ12 ಅಳತೆಯದ್ದಾಗಿರಬೇಕು. ಯಾವುದೇ ವಯೋಮಾನದವರು ಸ್ಪರ್ಧೆಯಲ್ಲಿ ಭಾಗವಹಿಸಬಹುದಾಗಿದೆ. ಕಲರ್ ಫೆÇೀಟೋ ತೆಗೆಸಿಕೊಂಡಿರಬೇಕು ಹಾಗೂ ಎಡಿಟ್ ಮಾಡದೆ ಸಹಜವಾಗಿರುವ ಫೆÇೀಟೋವನ್ನು ಸ್ಪರ್ಧೆಗೆ ಕಳುಹಿಸುವುದು. ಒಬ್ಬರು 1 ಫೆÇೀಟೋ ಮಾತ್ರ ಕಳುಹಿಸುವುದು. ಭಾವಚಿತ್ರದ ಹಿಂದೆ ಪೂರ್ಣ ಹೆಸರು, ವಿಳಾಸ ಮತ್ತು 2 ದೂರವಾಣಿ ಸಂಖ್ಯೆಯನ್ನು ಕಡ್ಡಾಯವಾಗಿ ನಮೂದಿಸಿರಬೇಕು.

ಆಸಕ್ತರು ಯಾವುದಾದರೂ ಪಾರಂಪರಿಕ ಕಟ್ಟಡದೊಂದಿಗೆ ಸೆಲ್ಫಿಯನ್ನು ತೆಗೆದು ಕೊಂಡು ಸೆ.25ರಂದು ಸಂಜೆ 5 ಗಂಟೆಯೊಳಗೆ ಹಾರ್ಡ್ ಕಾಪಿಯನ್ನು ಖುದ್ದಾಗಿ ಅಥವಾ ಅಂಚೆ ಮೂಲಕ ಉಪ ನಿರ್ದೇಶಕರು(ಪರಂಪರೆ), ಕರ್ನಾಟಕ ವಸ್ತು ಪ್ರದ ರ್ಶನ ಪ್ರಾಧಿಕಾರದ ಆವರಣ, ಇಂದಿರಾನಗರ, ಮೈಸೂರು-570010 ಮತ್ತು ಸಾಫ್ಟ್ ಕಾಪಿಯನ್ನು ddheritagemysore@gmail.com ಇ-ಮೇಲ್ ವಿಳಾಸಕ್ಕೆ ಕಳುಹಿ ಸುವುದು. ಸ್ಪರ್ಧೆಯಲ್ಲಿ ವಿಜೇತರಾದವರ ಹೆಸರನ್ನು ಸೆ.30ರಂದು ಸಂಜೆ 5 ಗಂಟೆಗೆ ಉಪ ನಿರ್ದೇಶಕರು(ಪರಂಪರೆ), ಪುರಾತತ್ವ, ಸಂಗ್ರಹಾಲಯಗಳು ಮತ್ತು ಪರಂಪರೆ ಇಲಾಖೆ, ಕರ್ನಾಟಕ ವಸ್ತು ಪ್ರದರ್ಶನ ಪ್ರಾಧಿಕಾರದ ಆವರಣ, ಇಂದಿರಾನಗರ, ಇಲ್ಲಿ ಪ್ರಕಟಿಸಲಾಗುವುದು. ಮಾಹಿತಿಗೆ ದೂ.ಸಂ.0821-2424671 ಸಂಪರ್ಕಿಸುವುದು.