ಕನ್ನಡ ಮಾಧ್ಯಮ ಶಾಲೆಗಳು ಮುಚ್ಚುವ ಹಂತ ತಲುಪಿರುವುದಕ್ಕೆ ಹಿರಿಯ ನಟ ಶ್ರೀನಾಥ್ ವಿಷಾದ

ಮೈಸೂರು: ಕನ್ನಡ ಮಾಧ್ಯಮ ಶಾಲೆಗಳು ವಿದ್ಯಾರ್ಥಿಗಳಿಲ್ಲದೆ ಮುಚ್ಚುವ ಸ್ಥಿತಿಗೆ ಬಂದಿರುವುದನ್ನು ಕೇಳಿದರೆ ಮನಸ್ಸಿಗೆ ಸಂಕಟವಾಗುತ್ತದೆ ಎಂದು ಹಿರಿಯ ಚಲನಚಿತ್ರ ನಟ ಶ್ರೀನಾಥ್ ವಿಷಾದಿಸಿದರು.

ಮೈಸೂರಿನ ಜಗನ್ಮೋಹನ ಅರಮನೆ ಯಲ್ಲಿ ಡಾ.ರಾಜ್‍ಕುಮಾರ್ ಮ್ಯೂಸಿಕಲ್ ಗ್ರೂಪ್ ವತಿಯಿಂದ ಡಾ.ರಾಜ್‍ಕುಮಾರ್ ಅವರ 90ನೇ ಜನ್ಮ ದಿನೋತ್ಸವದ ಅಂಗ ವಾಗಿ ಆಯೋಜಿಸಿದ್ದ ‘ಮೈಸೂರಲ್ಲಿ ರಾಜ ಸಂಭ್ರಮ’ ಸಂಗೀತ ರಸ ಸಂಜೆ ಕಾರ್ಯ ಕ್ರಮದಲ್ಲಿ ಅವರು ಮಾತನಾಡಿದರು.

ಇಂಗ್ಲಿಷ್ ಮಾಧ್ಯಮ ಶಾಲೆಗಳಿಂದ ಹಲವಾರು ಕನ್ನಡ ಶಾಲೆಗಳಲ್ಲಿ ವಿದ್ಯಾರ್ಥಿ ಗಳೇ ಇಲ್ಲವಾಗಿದ್ದಾರೆ. ಕನ್ನಡ ಭಾಷೆಯೆಂದರೆ ಸದಾ ಮುನ್ನುಗುತ್ತಿದ್ದ ಡಾ.ರಾಜ್ ಕುಮಾರ್, ಇಂದು ಕನ್ನಡದ ಉಳಿವಿಗಾಗಿ ಇರಬೇಕಾಗಿತ್ತು ಎಂದು ಹೇಳಿದರು.
ರಾಜ್‍ಕುಮಾರ್ ಅವರೊಂದಿಗೆ ಒಡ ನಾಟ ಪ್ರಾರಂಭವಾದಾಗಿನಿಂದ ರಾಜಣ್ಣ ಎಂಬ ಪದವೇ ಅಂದಿನಿಂದ ಇಲ್ಲಿಯ ವರೆಗೆ ಬಂದಿದೆ. ಅವರೊಂದಿಗಿನ ನನ್ನ ಒಡನಾಟ ಅವಿಸ್ಮರಣೀಯ. ಎಲ್ಲರನ್ನು ಪ್ರೀತಿ, ವಿಶ್ವಾಸದೊಂದಿಗೆ ಜಗತ್ತನ್ನೇ ಪ್ರೀತಿಸ ಬೇಕು ಎಂಬುದನ್ನು ರಾಜಣ್ಣನಿಂದ ಕಲಿತಿದ್ದೇನೆ ಎಂದು ಸ್ಮರಿಸಿದರು.

ನಮ್ಮ ಜತೆಗಿದ್ದ ರಾಜಣ್ಣನಿಗೂ ಕ್ಯಾಮರಾ ಮುಂದೆ ನಿಲ್ಲುತ್ತಿದ್ದ ರಾಜ್ ಕುಮಾರ್‍ಗೂ ಸಾಕಷ್ಟು ವ್ಯತ್ಯಾಸಗಳಿದ್ದವು. ಪಾತ್ರಗಳಲ್ಲಿ ಸಂಪೂರ್ಣವಾಗಿ ತಲ್ಲೀನ ವಾಗುತ್ತಿದ್ದರು. ಅಭಿನಯದ ಪ್ರತಿಯೊಂದು ಹಂತದಲ್ಲಿಯೂ ತಿದ್ದಿದ್ದಾರೆ. ನಿರಾಸೆ ಯಾದಾಗ ಆತ್ಮವಿಶ್ವಾಸ ತುಂಬಿದ್ದಾರೆ. ಅವರು ಹಾಡಿದ ಭಕ್ತಿ ಗೀತೆಗಳಲ್ಲಿ ದೇವರು ಮತ್ತು ಮನುಷ್ಯರ ನಡುವಿನ ಸೇತುವೆ ಯಾಗಿದ್ದಾರೆ ಎಂದರು.
ನಾನು ಅಭಿನಯಕ್ಕೆ ಬಂದಾಗ ರಾಜಣ್ಣ ನಿಗೆ ಚಿತ್ರರಂಗದಲ್ಲಿ 16 ವರ್ಷದ ಅನುಭ ವಿತ್ತು. ನನ್ನನ್ನು ಬೆಳೆಸಿದ್ದು ರಾಜಣ್ಣ ಮತ್ತು ಪುಟ್ಟಣ್ಣ. ಶುಭಮಂಗಳ ಚಿತ್ರದ ನಂತರ ಸಾಕಷ್ಟು ಚಿತ್ರಗಳಲ್ಲಿ ಅಭಿನಯಿಸಲು ಡಾ.ರಾಜ್ ಕುಮಾರ್ ನನಗೆ ಸ್ಫೂರ್ತಿ ಎಂದು ಬಣ್ಣಿಸಿದರು.

ಕಾರ್ಯಕ್ರಮವನ್ನು ಉದ್ಘಾಟಿಸಿದ ಕನ್ನಡ ಮತ್ತು ಸಂಸ್ಕøತಿ ಇಲಾಖೆ ಸಹಾ ಯಕ ನಿರ್ದೇಶಕ ಹನೂರು ಚನ್ನಪ್ಪ ಮಾತ ನಾಡಿ, ಸಾಂಸ್ಕøತಿಕ ಮೌಲ್ಯಗಳನ್ನು ಚಿತ್ರಗಳ ಮೂಲಕ ಜನತೆಯಲ್ಲಿ ಮೂಡಿಸಿದ ಕೀರ್ತಿ ಡಾ.ರಾಜ್‍ಕುಮಾರ್‍ಗೆ ಸಲ್ಲುತ್ತದೆ. ಸಾಮಾ ಜಿಕ ಕಳಕಳಿಯಿದ್ದ ಅವರು, ಮೈಸೂರಿನಲ್ಲಿ ಬೆಳೆಸಿದ ಶಕ್ತಿಧಾಮ ನಿದರ್ಶನವಾಗಿದೆ. ಸಾಂಸ್ಕøತಿಕ ರಾಯಬಾರಿಯಾಗಿ ಬೆಳೆದ ಡಾ.ರಾಜ್‍ಕುಮಾರ್ ಮಹಾನ್ ಕಲಾವಿದ ಎಂದು ಗುಣಗಾನ ಮಾಡಿದರು.

ಮನಸೂರೆಗೊಂಡ ಸಂಗೀತ ರಸ ಸಂಜೆ: ಗಾಯಕರಾದ ಆರ್ಕೇಸ್ಟ್ರಾ ಜಯರಾಂ, ಸರ್ವಮಂಗಳ ಅವರು ‘ಶ್ರೀ ವಿಘ್ನೇಶ್ವರ ವಿನಾಯಕ’, ‘ಆನುಮಲೆ’, ‘ಕನ್ನಡವೇ ಸತ್ಯ’ ಹಾಡುಗಳನ್ನು ಹಾಡಿ ಸಂಗೀತ ರಸ ಸಂಜೆಗೆ ಚಾಲನೆ ನೀಡಿದರು.
ಗಾಯಕರಾದ ಜಯರಾಂ, ಚರಣ್, ರಮ್ಯಶ್ರೀ, ಪ್ರಕೃತಿ, ರಾಮ್‍ಪ್ರಸಾದ್, ಬಾಲ ರಾಜ್ ಅವರು, ‘ಯಾರಿವನು’ ಚಿತ್ರದ ‘ರಾಗವೋ ಅನುರಾಗವೋ’, ‘ಶ್ರಾವಣ ಬಂತು’ ಚಿತ್ರದ ‘ಶ್ರಾವಣ ಮಾಸ ಬಂದಾಗ’, ‘ಎರಡು ಕನಸು’ ಚಿತ್ರದ ‘ತನ್ನಂ ತನ್ನಂ’, ‘ಬಂಗಾರದ ಮನುಷ್ಯ’ ಚಿತ್ರದ ‘ನಗು ನಗುತಾ’, ‘ನೀ ನನ್ನ ಗೆಲ್ಲಲಾರೆ’ ಚಿತ್ರದ ‘ಜೀವ ಹೂವಾಗಿದೆ’, ‘ದೇವತಾ ಮನುಷ್ಯ’ ಚಿತ್ರದ ‘ಈ ಸೊಗಸಾದ ಸಂಜೆ’, ‘ಪರಶುರಾಂ’ ಚಿತ್ರದ ‘ತಂದಾನ ತಂದಾನ’, ‘ರಾಜ ನನ್ನ ರಾಜ’ ಚಿತ್ರದ ‘ಗಂಗಮ್ಮಾ’ ಸೇರಿದಂತೆ 20ಕ್ಕೂ ಹೆಚ್ಚು ರಾಜ್ ಕುಮಾರ್ ಅಭಿನಯದ ಕೆಲವು ಆಯ್ದ ಚಲನಚಿತ್ರ ಗೀತೆಗಳನ್ನು ಹಾಡಿ ರಾಜ್ ಅಭಿಮಾನಿಗಳ ಮನತಣಿಸಿದರು.

ಕಾರ್ಯಕ್ರಮದಲ್ಲಿ ಮೇಲುಕೋಟೆ ವೆಂಗೀಪುರ ನಂಬಿಮಠದ ಇಳೈ ಆಳ್ವಾರ್ ಸ್ವಾಮೀಜಿ, ಡಾ.ರಾಜ್‍ಕುಮಾರ್ ಕುಟುಂಬವರಾದ ಎಸ್.ಎ.ಗೋವಿಂದ ರಾಜು, ಲಕ್ಷ್ಮೀ ಗೋವಿಂದರಾಜು, ಚಲನಚಿತ್ರ ನಿರ್ಮಾಪಕ ಎಸ್.ಎ.ಶ್ರೀನಿ ವಾಸ್, ರಂಗಕರ್ಮಿ ರಾಜಶೇಖರ ಕದಂಬ, ಚಂದ್ರಶೇಖರ್, ಮೈಕ್ ಚಂದ್ರು ಮತ್ತಿತರರು ಉಪಸ್ಥಿತರಿದ್ದರು.