ರೈತ ಸಂಘದ ಬಣಗಳಿಂದ ಪ್ರತ್ಯೇಕ ಪ್ರತಿಭಟನೆ

ಮಂಡ್ಯ: ವಿವಿಧ ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ರೈತ ಸಂಘದ ಬಣಗಳು ನಗರದಲ್ಲಿಂದು ಪ್ರತ್ಯೇಕ ಪ್ರತಿಭಟನೆ ನಡೆಸಿದವು.ಅಖಂಡ ಕರ್ನಾಟಕ ರೈತ ಸಂಘ (ಪಕ್ಷಾತೀತ)ದ ಕಾರ್ಯಕರ್ತರು ನಗರದ ತಹಶೀಲ್ದಾರ್ ಕಚೇರಿ ಎದುರು ಪ್ರತಿಭಟಿಸಿ ದರೆ, ಕರ್ನಾಟಕ ರಾಜ್ಯ ರೈತ(ಮೂಲ) ಸಂಘಟನೆ ಕಾರ್ಯಕರ್ತರು ಜಿಲ್ಲಾಧಿಕಾರಿ ಕಚೇರಿ ಆವರಣದಲ್ಲಿ ಧರಣಿ ನಡೆಸಿದರು.
ಪ್ರತಿಭಟನೆ: ಕಬ್ಬಿನ ಬಾಕಿ ಪಾವತಿ, ಬೆಳೆಗೆ ನೀರು ಹರಿಸುವಿಕೆ ಹಾಗೂ ಭತ್ತ ಖರೀದಿ ಕೇಂದ್ರ ಆರಂಭ ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಅಖಂಡ ಕರ್ನಾಟಕ ರೈತ ಸಂಘ (ಪಕ್ಷಾತೀತ)ದ ಕಾರ್ಯಕರ್ತರು ನಗರದ ರೈತ ಸಭಾಂಗಣದ ಆವರಣದಿಂದ ಪ್ರತಿಭಟನಾ ಮೆರವಣಿಗೆ ಹೊರಟು, ಮೈಸೂರು-ಬೆಂಗಳೂರು ಹೆದ್ದಾರಿ ಮೂಲಕ ತಹಶೀಲ್ದಾರ್ ಕಚೇರಿ ತಲುಪಿದರು. ಬಳಿಕ ಅಲ್ಲೇ ಧರಣಿ ಆರಂಭಿಸಿ, ತಹಶೀಲ್ದಾರ್ ಮೂಲಕ ಮುಖ್ಯಮಂತ್ರಿಗೆ ಮನವಿ ಸಲ್ಲಿಸಿದರು.

ಇದೇ ವೇಳೆ ಮಾತನಾಡಿದ ಸಂಘ ಟನೆಯ ಗೌರವಾಧ್ಯಕ್ಷ ಇಂಡುವಾಳು ಚಂದ್ರ ಶೇಖರ್, ಜಿಲ್ಲೆಯ ಸಕ್ಕರೆ ಕಾರ್ಖಾನೆಗಳು ರೈತರಿಗೆ 188.5 ಕೋಟಿ ರೂ. ಕಬ್ಬಿನ ಬಾಕಿ ಹಣ ಪಾವತಿಸಬೇಕಿದ್ದು, ಕೂಡಲೇ ರೈತ ಹಣ ಪಾವತಿಗೆ ಕ್ರಮ ಕೈಗೊಳ್ಳಬೇಕು. ಜಿಲ್ಲೆಯಾದ್ಯಂತ ಅಕ್ರಮ ಗಣಿಗಾರಿಕೆ ಸಂಪೂರ್ಣ ತಡೆಗಟ್ಟಬೇಕು. ಕೆಆರ್‍ಎಸ್ ನಿಂದ ಬೆಳೆಗಳಿಗೆ ಸಮರ್ಪಕ ನೀರು ಹರಿಸಬೇಕು ಎಂದು ಒತ್ತಾಯಿಸಿದರು.

ಹಾಲು ಉತ್ಪಾದಕರಿಗೆ ಹಿಂದೆಯೇ ಕಡಿಮೆ ಬೆಲೆ ನೀಡುತ್ತಿದ್ದ ಮಂಡ್ಯ ಜಿಲ್ಲಾ ಹಾಲು ಒಕ್ಕೂಟ ಪ್ರಸ್ತುತ 2 ರೂ. ಕಡಿಮೆ ಮಾಡಿ ವಂಚಿಸುತ್ತಿದೆ. ಹಾಲಿನ ದರ ಕಡಿತ ಮಾಡಿರುವುದನ್ನು ಕೂಡಲೇ ರದ್ದುಪಡಿಸಿ, ಲೀ.ಗೆ 30 ರೂ.ನಂತೆ ದರ ನೀಡಬೇಕು. ಪಶು ಆಹಾರ ಬೆಲೆ ಏರಿಕೆಯಾಗಿದ್ದು, ಹಾಲಿನದರ ಏರಿಕೆ ಮಾಡಬೇಕು ಎಂದು ಆಗ್ರಹಿಸಿದರು. ಈ ವೇಳೆ ಜಿಲ್ಲಾಧ್ಯಕ್ಷ ಹೆಮ್ಮಿಗೆ ಚಂದ್ರಶೇಖರ್, ಮುಖಂಡರಾದ ಕೆ.ಎಸ್. ಸುಧೀರ್‍ಕುಮಾರ್, ಸೊ.ರಾ.ಶಿವರಾಂ, ಪ್ರಿಯಾಂಕ ಅಪ್ಪುಗೌಡ, ಪೂರ್ಣಿಮಾ ಚಂದ್ರÀಶೇಖರ್, ಇಂಡುವಾಳು ಬಸವ ರಾಜು ಸೇರಿದಂತೆ ಹಲವರಿದ್ದರು.

ಮೂಲ ಸಂಘಟನೆ ಧರಣಿ: ಕರ್ನಾಟಕ ರಾಜ್ಯ ರೈತ ಸಂಘಟನೆ(ಮೂಲ ಸಂಘಟನೆ) ಕಾರ್ಯಕರ್ತರೂ ಕೂಡ ನಗರದ ಜಿಲ್ಲಾ ಧಿಕಾರಿ ಕಚೇರಿ ಆವರಣದಲ್ಲಿ ಧರಣಿ ನಡೆಸಿ ಆಕ್ರೋಶ ವ್ಯಕ್ತಪಡಿಸಿದರಲ್ಲದೆ, ತಮ್ಮ ವಿವಿಧ ಬೇಡಿಕೆ ಈಡೇರಿಸುವಂತೆ ಜಿಲ್ಲಾ ಧಿಕಾರಿಗೆ ಮನವಿ ಸಲ್ಲಿಸಿದರು.

ಇದೇ ವೇಳೆ ಮಾತನಾಡಿದ ಜಿಲ್ಲಾಧ್ಯಕ್ಷ ಬೋರಾಪುರ ಶಂಕರೇಗೌಡ, ಮನ್‍ಮುಲ್ ಹಾಲು ಒಕ್ಕೂಟ ಲೀ. ಹಾಲಿಗೆ 2ರೂ. ಕಡಿತ ಗೊಳಿಸಿ ಉತ್ಪಾದಕರನ್ನು ಸಂಕಷ್ಟಕ್ಕೀಡು ಮಾಡಿದ್ದು, ಕೂಡಲೇ ಹಾಲಿನ ಬೆಲೆ ಯನ್ನು 30 ರೂ.ಗೆ ನಿಗದಿಪಡಿಸಬೇಕು. 6 ತಿಂಗಳ ಪ್ರೋತ್ಸಾಹ ಧನ ಬಾಕಿ ಹಣ ಪಾವತಿಸಬೇಕು. ದೇಸಿ ತಳಿಯ ಹಾಲನ್ನು ಪ್ರತ್ಯೇಕವಾಗಿ ಸಂಗ್ರಹಣೆ ಹಾಗೂ ದೇಸಿ ತಳಿಗಳ ಅಭಿವೃದ್ಧಿಗೆ ಕ್ರಮ ವಹಿಸಬೇಕು. ಸರ್ಕಾರ ಕೆಆರ್‍ಎಸ್ ಅಣೆಕಟ್ಟೆ ಬಳಿ ನಿರ್ಮಾಣ ಮಾಡಲು ಮುಂದಾಗಿರುವ ಡಿಸ್ನಿ ಲ್ಯಾಂಡ್ ನಿರ್ಧಾರವನ್ನು ಕೂಡಲೇ ಕೈಬಿಡ ಬೇಕೆಂದು ಒತ್ತಾಯಿಸಿದರು.

ಬೇಬಿಬೆಟ್ಟ ಹಾಗೂ ಕೆಆರ್‍ಎಸ್ ಸುತ್ತ ಮುತ್ತ ಕಲ್ಲುಗಣಿಗಾರಿಕೆಯನ್ನು ನಿಷೇಧಿಸ ಬೇಕು. ಶ್ರೀರಂಗಪಟ್ಟಣ ತಾಲೂಕಿನ ವಿವಿಧ ಗ್ರಾಮಗಳಲ್ಲಿ ಅಕ್ರಮ ಮರಳು ಗಾರಿಕೆ, ಗಣಿಗಾರಿಕೆ, ನಿರಂತರವಾಗಿ ನಡೆಯುತ್ತಿದ್ದು, ಅರಣ್ಯ ಭೂಮಿ, ಸರ್ಕಾರಿ ಗೋಮಾಳ ಮುಂತಾದ ಕಡೆ ಅಕ್ರಮ ವಾಗಿ ನಡೆಯುತ್ತಿರುವುದರಿಂದ ಗಣಿಗಾರಿಕೆ ಯನ್ನು ಶಾಶ್ವತವಾಗಿ ನಿಷೇಧಿಸಬೇಕು. ಕೇಂದ್ರ ಸÀರ್ಕಾರದ ಮೇಲೆ ಒತ್ತಡ ತಂದು ಡಾ.ಬಸವರಾಜು ಸಮಿತಿ ವರದಿ ಜಾರಿ ಮಾಡಬೇಕೆಂದು ಇದೇ ವೇಳೆ ಆಗ್ರಹಿಸಿ ದರು. ಧರಣಿಯಲ್ಲಿ ರೈತ ಮುಖಂಡರಾದ ಮಂಜೇಶ್‍ಗೌಡ, ಸ್ವಾಮೀಗೌಡ, ನಾಗೇಂದ್ರಸ್ವಾಮಿ, ಎಳೇಗೌಡ, ದಿನೇಶ್, ಸೋ.ಶಿ. ಪ್ರಕಾಶ್, ಕೆ.ರಾಮಲಿಂಗೇಗೌಡ, ಶ್ರೀಧರ್, ಡಿ.ಸಿ.ಜಗದೀಶ್, ಮಾದೇಗೌಡ, ಗಣೇಶ್, ಸಿದ್ದೇಗೌಡ, ರಮೇಶ್, ಶ್ರೀಕಂಠಯ್ಯ, ಸುರೇಶ್, ಉಮೇಶ್, ಬಸವರಾಜೇಅರಸ್ ಮತ್ತಿತರರಿದ್ದರು.