ಇಂದಿನಿಂದ 24ರವರೆಗೆ ಸಂವಿಧಾನ ಒಂದು ವೈಚಾರಿಕ ವಿಶ್ಲೇಷಣೆ ಕುರಿತು ಉಪನ್ಯಾಸ ಸರಣಿ

ಮೈಸೂರು: ಪರಂಪರೆ ಸಂಸ್ಥೆ ವತಿಯಿಂದ `ಭಾರತದ ಸಂವಿಧಾನ ಒಂದು ವೈಚಾರಿಕ ವಿಶ್ಲೇಷಣೆ’ ಕುರಿತಂತೆ ನ.18ರಿಂದ 24ರವರೆಗೆ ಉಪನ್ಯಾಸ ಸರಣಿ ಏರ್ಪಡಿಸಲಾಗಿದೆ ಎಂದು ಸಂಸ್ಥೆ ಕಾರ್ಯದರ್ಶಿ ಕೃಷ್ಣಕುಮಾರ್ ತಿಳಿಸಿದರು.

ಮೈಸೂರು ಜಿಲ್ಲಾ ಪತ್ರಕರ್ತರ ಭವನದಲ್ಲಿ ಪತ್ರಿಕಾಗೋಷ್ಠಿ ಯಲ್ಲಿ ಮಾತನಾಡಿದ ಅವರು, ಮೈಸೂರಿನ ಜೆಎಲ್‍ಬಿ ರಸ್ತೆಯ ನಾದಬ್ರಹ್ಮ ಸಂಗೀತ ಸಭಾದಲ್ಲಿ ಪ್ರತಿದಿನ ಸಂಜೆ 6ರಿಂದ 8ರವರೆಗೆ ವಿಷಯ ತಜ್ಞರು ಉಪನ್ಯಾಸ ನೀಡಲಿದ್ದಾರೆ. ನ.18ರಂದು ಸಂಜೆ 6ಕ್ಕೆ ಸುತ್ತೂರು ಮಠದ ಶ್ರೀ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ ಅವರ ಸಾನಿಧ್ಯದಲ್ಲಿ ಮಾಜಿ ಲೋಕಾಯುಕ್ತ ನ್ಯಾಯಮೂರ್ತಿ ಸಂತೋಷ್ ಹೆಗಡೆ ಉಪನ್ಯಾಸ ಸರಣಿಗೆ ಚಾಲನೆ ನೀಡಲಿದ್ದಾರೆ ಎಂದರು. ನ.19ರಂದು `ಸಂವಿಧಾನ ರಚನೆ’ ಕುರಿತು ಮೈವಿವಿ ನಿವೃತ್ತ ಕಾನೂನು ಪ್ರಾಧ್ಯಾಪಕ ಪ್ರೊ.ಸಿ.ಕೆ.ಎನ್. ರಾಜಾ, ನ.20ರಂದು `ಭಾರತದ ಸಂವಿಧಾನದ ಆಶಯಗಳು’ ಕುರಿತು ಮೈವಿವಿ ನಿವೃತ್ತ ರಾಜ್ಯಶಾಸ್ತ್ರ ಪ್ರಾಧ್ಯಾಪಕ ಪ್ರೊ.ಹೆಚ್.ಎಂ. ರಾಜಶೇಖರ, ನ.21ರಂದು `ಅಧಿಕಾರ ವಿಂಗಡಣಾ ತತ್ವ’ ಕುರಿತು ಬೆಂಗಳೂರಿನ ರಾಷ್ಟ್ರೀಯ ಕಾನೂನು ವಿವಿ ಹಿರಿಯ ಪ್ರಾಧ್ಯಾಪಕ ಪ್ರೊ.ಎಂ.ಕೆ.ರಮೇಶ್ ಉಪನ್ಯಾಸ ನೀಡಲಿದ್ದಾರೆ ಎಂದು ತಿಳಿಸಿ ದರು. ನ.22ರಂದು `ಕೇಂದ್ರ-ರಾಜ್ಯ ಸಂಬಂಧ’ ಕುರಿತು ಮಾಜಿ ಅಡ್ವೋಕೇಟ್ ಜನರಲ್ ಅಶೋಕ ಹಾರನಹಳ್ಳಿ, ನ.23ರಂದು `ಮೂಲಭೂತ ಹಕ್ಕುಗಳು ಮತ್ತು ನಿರ್ದೇಶಕ ತತ್ವಗಳು’ ಕುರಿತು ಬೆಂಗಳೂರಿನ ರಾಷ್ಟ್ರೀಯ ಕಾನೂನು ವಿವಿ ಹಿರಿಯ ಪ್ರಾಧ್ಯಾಪಕ ಪ್ರೊ.ಹೆಚ್.ಕೆ.ನಾಗರಾಜ ಹಾಗೂ ನ.24ರಂದು `ವರಿಷ್ಠ ನ್ಯಾಯಾ ಲಯದ ಐತಿಹಾಸಿಕ ತೀರ್ಪುಗಳು’ ಕುರಿತು ಕರ್ನಾಟಕ ಉಚ್ಚ ನ್ಯಾಯಾಲಯದ ನ್ಯಾಯಮೂರ್ತಿ ಕೃಷ್ಣ ಎಸ್.ದೀಕ್ಷಿತ್ ಉಪನ್ಯಾಸ ನೀಡಲಿದ್ದಾರೆ ಎಂದರು. ಅಧ್ಯಕ್ಷ ಗುರುರಾಘವೇಂದ್ರ, ಉಪಾಧ್ಯಕ್ಷ ಹೆಚ್.ಎಂ.ನಾಗರಾಜರಾವ್ ಮತ್ತಿತರರು ಸುದ್ದಿಗೋಷ್ಠಿಯಲ್ಲಿದ್ದರು.