ಮದೆನಾಡು ರಸ್ತೆಯಲ್ಲಿ ಸರಣಿ ಕಳ್ಳತನ

ಮಡಿಕೇರಿ: ಮಂಗಳೂರು-ಮಡಿಕೇರಿ ರಾಷ್ಟ್ರೀಯ ಹೆದ್ದಾರಿಯ ದೇವರಕೊಲ್ಲಿಯಿಂದ ಮದೆನಾಡುವರೆಗೆ ಸರಣಿ ಕಳ್ಳತನ ನಡೆದಿದೆ.

ಜ.7ರ ಬೆಳಗಿನ 3.30ರ ವೇಳೆಯಲ್ಲಿ ಬಿಳಿ ಬಣ್ಣದ ಸಿಫ್ಟ್ ಕಾರಿನಲ್ಲಿ ಬಂದ ಯುವಕನೋರ್ವ ದೇವರಕೊಲ್ಲಿ ಶ್ರೀ ಚಾಮುಂಡೇಶ್ವರಿ ದೇವಾಲಯದ ಬೀಗ ಒಡೆದು ಒಳನುಗ್ಗಿ ಹುಂಡಿ ಒಡೆಯಲು ವಿಫಲ ಯತ್ನ ನಡೆಸಿ ದ್ದಾನೆ. ಕೈಯಲ್ಲಿ ತಲವಾರ್ ಹಿಡಿದು ಒಳನುಗ್ಗುವ ಕಳ್ಳ ದೇವಾ ಲಯದ ಗರ್ಭ ಗುಡಿಯ ಒಳಗೆ ಅಮೂಲ್ಯ ವಸ್ತುಗಳಿ ಗಾಗಿ ತಡಕಾಡುತ್ತಿರುವ ದೃಶ್ಯಾವಳಿಗಳು ದೇವಾಲಯದಲ್ಲಿ ಅಳವಡಿಸಲಾಗಿದ್ದ ಸಿ.ಸಿ. ಕ್ಯಾಮರಾದಲ್ಲಿ ದಾಖಲಾಗಿದೆ.

ದೇವಾಲಯದ ಮುಂಭಾಗದ ಹೆದ್ದಾರಿಯಲ್ಲಿ ಡಾಂಬರು ಹಾಕುವ ಕಾರ್ಯ ನಡೆಯುತ್ತಿದ್ದು ಅಲ್ಲಿ ನಿಲ್ಲಿಸಲಾಗಿದ್ದ ಮಿನಿ ಲಾರಿಯ ಬ್ಯಾಟರಿಯನ್ನು ಕೂಡ ಕದಿಯಲಾಗಿದೆ. ಆ ಬಳಿಕ ಜೋಡುಪಾಲದ ರಸ್ತೆ ಬದಿಯ ಅಂಗಡಿಗೆ ನುಗ್ಗಿರುವ ಕಳ್ಳರು 1 ಸಾವಿರದ ನಗದು, 1 ಚೀಲ ಬಿ.ಟಿ.ಅಕ್ಕಿ, ಸಿಗರೇಟು ಮತ್ತು ಇನ್ನಿತರ ವಸ್ತುಗಳ ಕಳವು ಮಾಡಿದ್ದಾರೆ.

ಮಾತ್ರವಲ್ಲದೆ ಮದೆನಾಡು ಬಳಿ ರಸ್ತೆ ಬದಿಯಲ್ಲಿ ನಿಲ್ಲಿಸಲಾಗಿದ್ದ ಮಾರುತಿ ಓಮ್ನಿ ವಾಹನದ 4 ಚಕ್ರಗಳನ್ನು ಕದಿಯಲಾ ಗಿದ್ದು, ಹೆದ್ದಾರಿ ಬದಿಯ ನಿವಾಸಿಗಳಲ್ಲಿ ಭೀತಿ ಮೂಡಿಸಿದೆ. ಜೋಡುಪಾಲದ ಶೇಖರ್ ಎಂಬುವರ ಅಂಗಡಿಯನ್ನು 4ನೇ ಬಾರಿಗೆ ಕಳವು ಮಾಡಲಾಗುತ್ತಿದ್ದು, ಈ ಅಂಗಡಿ ವ್ಯಾಪಾರವನ್ನೇ ನಂಬಿಕೊಂಡು ಬದುಕುತ್ತಿ ರುವ ಕಡು ಬಡ ಕುಟುಂಬ ಕಳ್ಳರ ಹಾವಳಿಯಿಂದ ಕಂಗಲಾಗಿದೆ. ಮಡಿಕೇರಿ ಮಂಗಳೂರು ರಾಷ್ಟ್ರೀಯ ಹೆದ್ದಾರಿಯ ಉದ್ದಕ್ಕೂ ಒಂಟಿ ಮನೆಗಳು, ಅಂಗಡಿ ಮಳಿಗೆಗಳಿದ್ದು ಸರಣಿ ಕಳುವಿನಿಂದ ಗ್ರಾಮಸ್ಥರು ಬೆಚ್ಚಿ ಬಿದ್ದಿದ್ದಾರೆ. ಪ್ರಕರಣ ಬೆಳಕಿಗೆ ಬರುತ್ತಿದ್ದಂತೆಯೇ ಮಡಿಕೇರಿ ಗ್ರಾಮಾಂತರ ಠಾಣಾ ಪೊಲೀಸರು ಮತ್ತು ಅಪರಾಧ ಪತ್ತೆ ದಳದ ಸಿಬ್ಬಂದಿಗಳು ಸ್ಥಳಕ್ಕೆ ತೆರಳಿ ಸಿ.ಸಿ. ಕ್ಯಾಮರಾದಲ್ಲಿ ಸೆರೆಯಾದ ದೃಶ್ಯಗಳನ್ನು ಪರಿಶೀಲನೆ ನಡೆಸಿದ್ದಾರೆ.
ರಾಷ್ಟ್ರೀಯ ಹೆದ್ದಾರಿಯಲ್ಲಿ ಹಲವು ಬಾರಿ ಕಳವು ಪ್ರಕರಣಗಳು ನಡೆದಿದ್ದು, ಈ ಕೃತ್ಯಕ್ಕೆ ಪೊಲೀಸರು ಕಡಿವಾಣ ಹಾಕಬೇಕು ಎಂದು ದೇವರಕೊಲ್ಲಿ ಶ್ರೀ ಚಾಮುಂಡೇಶ್ವರಿ ದೇವಾಲಯ ಸಮಿತಿ ಅಧ್ಯಕ್ಷ ಕುಂಞÐರಾಮನ್, ಜೋಡುಪಾಲದ ಅಂಗಡಿ ವರ್ತಕ ಶೇಖರ್ ಮತ್ತು 2ನೇ ಮೊಣ್ಣಂಗೇರಿ ನಿವಾಸಿಯಾದ ಗಣೇಶ್ ಆಗ್ರಹಿಸಿದ್ದಾರೆ.