ಟಿಕೆಟ್ ನೀಡದಿದ್ದಲ್ಲಿ ಮೈಸೂರು, ಚಾ.ನಗರದಲ್ಲಿ ಬಿಜೆಪಿಗೆ ಹಿನ್ನಡೆ

ಮೈಸೂರು: ಮೈಸೂರಿನ ವರುಣಾ ಕ್ಷೇತ್ರಕ್ಕೆ ಇನ್ನೂ ಬಿಜೆಪಿ ಅಭ್ಯರ್ಥಿ ಘೋಷಣೆಯಾಗಿಲ್ಲ. ಆದ್ದರಿಂದ ಬಿ.ವೈ. ವಿಜಯೇಂದ್ರ ಅವ ರಿಗೆ ಟಿಕೆಟ್ ಕೈತಪ್ಪಿದೆ ಎಂದು ಹೇಳಲಾಗದು. ಪಕ್ಷದ ನಾಯ ಕರು ವಿಜಯೇಂದ್ರ ಅವರಿಗೇ ಟಿಕೆಟ್ ನೀಡುತ್ತಾರೆಂಬ ಸಂಪೂರ್ಣ ಭರವಸೆ ನಮ್ಮಲ್ಲಿದೆ ಎಂದು ಸಂಸದ ಪ್ರತಾಪ್ ಸಿಂಹ ಹೇಳಿದ್ದಾರೆ. ನಾಮಪತ್ರ ಸಲ್ಲಿಸುವ ಹಂತದಲ್ಲಿ ವಿಜಯೇಂದ್ರ ಅವರಿಗೆ ಟಿಕೆಟ್ ಖಚಿತವಾಗಿಲ್ಲ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ನವರು ಘೋಷಿಸಿದ್ದರ ಪರಿಣಾಮ ನಂಜನಗೂಡಲ್ಲಿ ತೀವ್ರ ಆಕ್ರೋಶ ವ್ಯಕ್ತ ಪಡಿಸಿದ್ದ ಸಾವಿರಾರು ಕಾರ್ಯಕರ್ತರು, ಯಡಿಯೂರಪ್ಪ ಅವರು ಉಳಿದು ಕೊಂಡಿದ್ದ ಮೈಸೂರಿನ ಪ್ರೆಸಿಡೆಂಟ್ ಹೋಟೆಲ್‍ಗೂ ಮುತ್ತಿಗೆ ಹಾಕಿ ಪಕ್ಷದ ವಿರುದ್ಧವೇ ಆಕ್ರೋಶ ವ್ಯಕ್ತಪಡಿಸಿದ ಪರಿಣಾಮ ಪರಿಸ್ಥಿತಿ ವಿಕೋಪಕ್ಕೆ ತಿರು ಗಿತ್ತು. ಈ ಹಿನ್ನೆಲೆಯಲ್ಲಿ ಕರೆಯಲಾ ಗಿದ್ದ ತುರ್ತು ಸುದ್ದಿಗೋಷ್ಠಿಯಲ್ಲಿ ಮಾತ ನಾಡಿದ
ಪ್ರತಾಪ್‍ಸಿಂಹ, ವಿಜಯೇಂದ್ರ ಅವರಿಗೇ ಟಿಕೆಟ್ ಸಿಗುವುದು ಖಚಿತ ಎಂದು ವಿಶ್ವಾಸ ವ್ಯಕ್ತಪಡಿಸಿದರು. ಇಂದಿನ ಘಟನೆಯಿಂದ ಮೈಸೂರು ಹಾಗೂ ಚಾಮರಾಜನಗರದ ಒಟ್ಟು 15 ಕ್ಷೇತ್ರಗಳ ಬಿಜೆಪಿ ಅಭ್ಯರ್ಥಿಗಳ ರಾಜಕೀಯ ಭವಿಷ್ಯಕ್ಕೆ ಹಿನ್ನೆಡೆಯಾ ದಂತಾಗಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ತಮ್ಮ ಪುತ್ರ ಡಾ.ಯತೀಂದ್ರನನ್ನು ವರುಣಾ ಕ್ಷೇತ್ರದ ಅಭ್ಯರ್ಥಿ ಎಂದು ಘೋಷಿಸಿ, ನಮ್ಮನ್ನು ಸೋಲಿಸುವವರು ಯಾರೂ ಇಲ್ಲ ಎಂಬಂತೆ ದರ್ಪ ಮೆರೆಯುತ್ತಿದ್ದ ಸಂದರ್ಭದಲ್ಲಿ, ಬಿ.ವೈ.ವಿಜಯೇಂದ್ರ ಅವರು ವರುಣಾ ಕ್ಷೇತ್ರ ಪ್ರವೇಶಿಸಿ, 20 ದಿನಗಳಿಂದ ಬಿಜೆಪಿಯನ್ನು ಸಂಘಟಿಸಿದ್ದಾರೆ. ಜನರ ಬೆಂಬಲ, ಅಭಿಮಾನ ಗಳಿಸಿದ್ದಾರೆ. ಇದರಿಂದ ವರುಣಾ ಮಾತ್ರವಲ್ಲ ಇನ್ನಿತರ ಕ್ಷೇತ್ರಗಳಲ್ಲೂ ಪಕ್ಷಕ್ಕೆ ಉತ್ತಮ ವಾತಾವರಣ ನಿರ್ಮಾಣವಾಗಿತ್ತು. ಇದೀಗ ಅನಿರೀಕ್ಷಿತವಾಗಿ ವಿಜಯೇಂದ್ರ ಅವರ ಸ್ಫರ್ದೆ ಇಲ್ಲ ಎಂಬ ಗುಮಾನಿಯಿಂದ ಗೊಂದಲ ನಿರ್ಮಾಣವಾಗಿದೆ. ಇನ್ನೂ ಇಲ್ಲಿ ಯಾರಿಗೂ ಟಿಕೆಟ್ ಘೋಷಣೆಯಾಗದ ಕಾರಣ, ವಿಜಯೇಂದ್ರ ಅವರಿಗೆ ಕೈ ತಪ್ಪಿದೆ ಎಂದು ಸ್ಪಷ್ಟವಾಗಿ ಹೇಳಲು ಸಾಧ್ಯವಿಲ್ಲ ಎಂದರು.

ನಮ್ಮ ಪಕ್ಷದ ಕೇಂದ್ರ ಹಾಗೂ ರಾಜ್ಯ ನಾಯಕರು, ವಿಜಯೇಂದ್ರ ಅವರಿಗೆ ಟಿಕೆಟ್ ನೀಡುವ ಮೂಲಕ ಈ ಎರಡು ಜಿಲ್ಲೆಗಳ ಅಭ್ಯರ್ಥಿಗಳ ಮೇಲೆ ಆಗುವ ದುಷ್ಪರಿಣಾಮವನ್ನು ತಡೆಯಬೇಕೆಂದು ಎಲ್ಲಾ ಅಭ್ಯರ್ಥಿಗಳ ಪರವಾಗಿ ಮನವಿ ಮಾಡಿಕೊಳ್ಳುತ್ತಿದ್ದೇವೆ. ರಾಜ್ಯಾಧ್ಯಕ್ಷರಾದ ಬಿ.ಎಸ್.ಯಡಿಯೂರಪ್ಪನವರ ಜೊತೆ ಮಾತನಾಡಿದ್ದೇವೆ. ವಿಜಯೇಂದ್ರ ಅವರಿಗೆ ಟಿಕೆಟ್ ನೀಡಿದರೆ ಅದು ನಿಮ್ಮ ಪುತ್ರನಿಗೆ ಅವಕಾಶ ನೀಡಿದಂತಲ್ಲ. ವರುಣಾ ಕ್ಷೇತ್ರದ ಜನರಿಗೆ ಮನ್ನಣೆ ನೀಡುವುದರ ಜೊತೆಗೆ ಈ ಭಾಗದಲ್ಲಿ ಪಕ್ಷಕ್ಕೆ ಬಲ ತುಂಬಿದಂತಾಗುತ್ತದೆ ಎಂದು ನಾನು, ಕೆ.ಆರ್.ಕ್ಷೇತ್ರದ ಅಭ್ಯರ್ಥಿ ಎಸ್.ಎ.ರಾಮದಾಸ್, ಚಾಮರಾಜ ಕ್ಷೇತ್ರದ ಎಲ್.ನಾಗೇಂದ್ರ, ಎನ್.ಆರ್. ಕ್ಷೇತ್ರದ ಸಂದೇಶ್‍ಸ್ವಾಮಿ ಸೇರಿದಂತೆ ಅನೇಕ ಮುಖಂಡರು ಮನವಿ ಮಾಡಿಕೊಂಡಿ ದ್ದೇವೆ ಎಂದು ಪ್ರತಾಪ್‍ಸಿಂಹ ತಿಳಿಸಿದರು. ಯಡಿಯೂರಪ್ಪನವರೂ ಸಾಮಾನ್ಯ ಕಾರ್ಯಕರ್ತನಂತೆ ದುಡಿಯುತ್ತಿದ್ದಾರೆ. ಅವರು ರಾಜ್ಯವನ್ನು ತಿರುಗಿರುವಷ್ಟು ಬೇರ್ಯಾವ ನಾಯಕರೂ ತಿರುಗಿಲ್ಲ. ಯಡಿಯೂರಪ್ಪನವರು ಎಂದಿಗೂ ಪ್ರಶ್ನಾತೀತ ನಾಯಕರು. ಆದರೆ ಬಿಜೆಪಿಯ ರಾಜ್ಯಾಧ್ಯಕ್ಷರಾಗಿ ನಮ್ಮೆಲ್ಲರ ಭಾವನೆಗೆ ಮನ್ನಣೆ ನೀಡಬೇಕು. ಈ ವಿಚಾರದಲ್ಲಿ ಏಕಪಕ್ಷೀಯ ನಿರ್ಧಾರ ತೆಗೆದುಕೊಳ್ಳಬಾರದು. ಕ್ಷೇತ್ರದಲ್ಲಿದ್ದ ಹತ್ತಾರು ಮಂದಿ ಟಿಕೆಟ್ ಆಕಾಂಕ್ಷಿಗಳು ವಿಜಯೇಂದ್ರ ಅವರು ಕ್ಷೇತ್ರಕ್ಕೆ ಬಂದ ಕ್ಷಣದಲ್ಲೇ ಅವರಿಗೆ ಬೆಂಬಲ ವ್ಯಕ್ತಪಡಿಸಿದ್ದಾರೆ. ಸಿಎಂ ಸಿದ್ದರಾಮಯ್ಯ ಅವರ ಆರ್ಭಟವನ್ನು ಮಟ್ಟಹಾಕಬೇಕೆಂದು ಶ್ರಮಿಸುತ್ತಿದ್ದಾರೆ. ಯಡಿಯೂರಪ್ಪನವರು ವಿಜಯೇಂದ್ರ ಅವರ ತಂದೆಯಾಗಿ ಅಲ್ಲ, ಪಕ್ಷದ ರಾಜ್ಯಾಧ್ಯಕ್ಷರಾಗಿ ನಿರ್ಧಾರ ತೆಗೆದುಕೊಳ್ಳಬೇಕು. ಸ್ವಂತ ಶಕ್ತಿಯಿಂದ ಕ್ಷೇತ್ರದಲ್ಲಿ ಬಿಜೆಪಿಗೆ ಉತ್ತಮ ವಾತಾವರಣ ನಿರ್ಮಿಸಿರುವ ವಿಜಯೇಂದ್ರ ಅವರಿಗೆ ಬಿ ಫಾರಂ ನೀಡಬೇಕೆಂದು ಒತ್ತಾಯಿಸಿದ್ದೇವೆ. ನಾಳೆ(24) ಮಧ್ಯಾಹ್ನ 3 ಗಂಟೆವರೆಗೂ ಸಮಯಾವಕಾಶವಿದೆ. ಎಲ್ಲವೂ ಒಳ್ಳೆಯದಾಗುತ್ತದೆ ಎಂದು ಪ್ರಶ್ನೆ ಯೊಂದಕ್ಕೆ ಪ್ರತಿಕ್ರಿಯಿಸಿದರು. ಸುದ್ದಿಗಾರರ ಪ್ರಶ್ನೆಗೆ ಪ್ರತಿಕ್ರಿಯಿಸಿದ ಕೆ.ಆರ್.ಕ್ಷೇತ್ರದ ಅಭ್ಯರ್ಥಿ, ಮಾಜಿ ಸಚಿವ ಎಸ್.ಎ.ರಾಮದಾಸ್, ಇಂದಿನ ಘಟನೆಯಿಂದ ಇತರೆ ಕ್ಷೇತ್ರಗಳ ಮೇಲೂ ಸಹಜವಾಗಿ ಪರಿಣಾಮ ಬೀರುತ್ತದೆ.

ಯಡಿಯೂರಪ್ಪನವರು ತಂದೆ ಸ್ಥಾನದಲ್ಲಿದ್ದಾರೆ. ನಮ್ಮೆಲ್ಲರ ಉದ್ದೇಶ ಕಾಂಗ್ರೆಸ್ ಮುಕ್ತ ಮಾಡುವುದಷ್ಟೇ ಆಗಿದೆ. ಇಂದಿನ ಬೆಳವಣ ಗೆಯಿಂದ ಬೇಸರವಾದ ಕಾರಣಕ್ಕೆ ಇಂದೇ ಆರಂಭಿಸಿದ್ದ ಪಾದಯಾತ್ರೆಯನ್ನು ರದ್ದು ಮಾಡಿ ಇಲ್ಲಿಗೆ ಬಂದಿದ್ದೇನೆ. ಸಂಸದ ಪ್ರತಾಪ್‍ಸಿಂಹ ಹೇಳಿದಂತೆ ವಿಜಯೇಂದ್ರ ಅವರಿಗೆ ಬಿ ಫಾರಂ ನೀಡಬೇಕೆಂಬುದು ಒಮ್ಮತದ ಒತ್ತಾಯವಾಗಿದೆ ಎಂದು ಸ್ಪಷ್ಟಪಡಿಸಿದರು. ಎನ್.ಆರ್.ಕ್ಷೇತ್ರದ ಅಭ್ಯರ್ಥಿ ಸಂದೇಶ್ ಸ್ವಾಮಿ, ಚಾಮರಾಜ ಕ್ಷೇತ್ರದ ಎಲ್.ನಾಗೇಂದ್ರ, ಮುಖಂಡ ನಿರಂಜನ್‍ಮೂರ್ತಿ ಮತ್ತಿತರ ಮುಖಂಡರು ಸುದ್ದಿಗೋಷ್ಠಿಯಲ್ಲಿದ್ದರು. ಇದಕ್ಕೂ ಮುನ್ನ ವಿಜಯೇಂದ್ರ ಅವರಿಗೆ ಬಿ ಫಾರಂ ನೀಡದಿದ್ದರೆ, ಮೈಸೂರು ಹಾಗೂ ಚಾಮರಾಜನಗರ ಜಿಲ್ಲೆಯ ಎಲ್ಲಾ 15 ಕ್ಷೇತ್ರದ ಬಿಜೆಪಿ ಅಭ್ಯರ್ಥಿಗಳೂ ರಾಜೀನಾಮೆ ನೀಡಲು ನಿರ್ದರಿಸಿದ್ದಾ ರೆಂದು ವರದಿಯಾಗಿತ್ತು. ನಂತರದ ಬೆಳವಣ ಗೆಯಲ್ಲಿ ಯಡಿಯೂರಪ್ಪನವರನ್ನು ಭೇಟಿಯಾದ ನಂತರ ನಡೆಸಿದ ತುರ್ತು ಸುದ್ದಿಗೋಷ್ಠಿಯಲ್ಲಿ ವಿಜಯೇಂದ್ರ ಅವರೇ ಸ್ಪರ್ಧಿಸುತ್ತಾರೆಂದು ವಿಶ್ವಾಸ ವ್ಯಕ್ತವಾಗಿದೆ. ಆದರೆ ಎಲ್ಲಿಯೂ, ಯಾವ ನಾಯಕರೂ ಕಡೇ ಹಂತದಲ್ಲಿ ಉಂಟಾದ ಗೊಂದಲಕ್ಕೆ ಸ್ಪಷ್ಟ ಕಾರಣವನ್ನು ತಿಳಿಸಲಿಲ್ಲ.