ಶೂಟೌಟ್ ಪ್ರಕರಣ: ಸದ್ಯದಲ್ಲೇ ಸರ್ಕಾರಕ್ಕೆ ಸಿಐಡಿ ತಂಡ ವರದಿ

ಮೈಸೂರು: ಮೇ 16ರಂದು ಮೈಸೂರಲ್ಲಿ ನಡೆದ ಶೂಟೌಟ್ ಪ್ರಕರಣದ ತನಿಖೆ ನಡೆಸುತ್ತಿರುವ ಸಿಐಡಿ ಅಧಿಕಾರಿಗಳು ಸದ್ಯದಲ್ಲೇ ಸರ್ಕಾರಕ್ಕೆ ಸಮಗ್ರ ವರದಿ ಸಲ್ಲಿಸಲಿದ್ದಾರೆ.

ಶೂಟೌಟ್‍ನಲ್ಲಿ ಪಂಜಾಬ್ ಮೂಲದ ಸುಕ್ವಿಂ ದರ್ ಸಿಂಗ್ ಸಾವಿಗೀಡಾಗಿದ್ದ. ವಿಜಯನಗರ ಠಾಣೆಯ ಮಾಜಿ ಇನ್ಸ್‍ಪೆಕ್ಟರ್ ಬಿ.ಜಿ.ಕುಮಾರ್ ಶೂಟೌಟ್ ಮಾಡಿದ್ದರು. ಇನ್ಸ್‍ಪೆಕ್ಟರ್ ಸೇರಿದಂತೆ ಆ ವೇಳೆ ಸ್ಥಳದಲ್ಲಿದ್ದ ಇತರ ಐವರು ಸಿಬ್ಬಂದಿಗಳನ್ನೂ ತೀವ್ರ ವಿಚಾರಣೆಗೊಳಪಡಿಸಿರುವ ಡಿವೈಎಸ್ಪಿ ಚಂದ್ರಶೇಖರ್ ನೇತೃತ್ವದ ಸಿಐಡಿ ತಂಡವು ಪ್ರಕರಣದ ಸತ್ಯಾಸತ್ಯತೆ ತಿಳಿಯಲು ಪ್ರಯತ್ನಿಸುತ್ತಿದೆ. ಘಟನೆ ನಡೆದ ದಿನ ಕೃತ್ಯವೆಸಗಿದ ಇನ್ಸ್‍ಪೆಕ್ಟರ್ ಬಿ.ಜಿ. ಕುಮಾರ್ ನೀಡಿದ ದೂರಿನಲ್ಲಿ ತಿಳಿಸಿರುವ ಅಂಶಗಳನ್ನು ಪುಷ್ಟೀಕರಿಸುವ ಪುರಾವೆಗಳನ್ನು ಕೇಳಿದಾಗ ಸಮಂಜಸ ಉತ್ತರ ಬಂದಿಲ್ಲ ಎಂದು ಹೇಳಲಾಗಿದೆ. ನಿಜವಾಗಲೂ ಕಾರ್ಯಾಚರಣೆ ಮಾಡಿದ್ದೇ ಆದರೆ ಹಿರಿಯ ಅಧಿಕಾರಿಗಳ ಗಮನಕ್ಕೂ ತರದೇ, ಠಾಣಾ ಡೈರಿಯಲ್ಲಿ ಎಂಟ್ರಿ ಮಾಡದೇ ದಾಳಿ ನಡೆಸಿದ್ದು, ಸ್ಥಳದಲ್ಲಿ ಕಾರನ್ನು ಹೊರತುಪಡಿಸಿ ನೋಟು ಗಳನ್ನಾಗಲಿ, ಎದುರಾಳಿ ಬೆದರಿಸಿದ ಎನ್ನಲಾದ ಶಸ್ತ್ರಾಸ್ತ್ರ ವನ್ನಾಗಲೀ ಜಪ್ತಿ ಮಾಡದಿರುವ ಬಗ್ಗೆ ತನಿಖೆ ನಡೆಸು ತ್ತಿರುವ ಅಧಿಕಾರಿಗಳು ಸಂಶಯ ವ್ಯಕ್ತಪಡಿಸಿ ಕೇಳಿದ ನೂರಾರು ಪ್ರಶ್ನೆಗಳಿಗೆ ಪೊಲೀಸ್ ಇನ್ಸ್‍ಪೆಕ್ಟರ್ ಉತ್ತರಿ ಸಲು ತಡಬಡಾಯಿಸಿದರು ಎಂದು ಮೂಲಗಳು ತಿಳಿಸಿವೆ. ತನಿಖೆ ಅಂತಿಮ ಹಂತ ತಲುಪಿದ್ದು, ಹೇಳಿಕೆಗಳ ನ್ನಾಧರಿಸಿ ಸಮಗ್ರ ವರದಿಯನ್ನು ಸಿಐಡಿ ಅಧಿಕಾರಿ ಗಳು ಸರ್ಕಾರಕ್ಕೆ ಹಾಗೂ ರಾಜ್ಯ ಮಾನವ ಹಕ್ಕು ಆಯೋಗ (Sಊಖಅ) ಕ್ಕೂ ವರದಿ ಸಲ್ಲಿಸುವರು. ವರದಿ ಕೈಸೇರುತ್ತಿದ್ದಂತೆಯೇ ಗೃಹ ಇಲಾಖೆಯು, ಪರಿಶೀಲಿಸಿ, ಪ್ರಕರಣ ಸಂಬಂಧ ಸಿಐಡಿ ನೀಡಿರುವ ಅಭಿಪ್ರಾಯ, ಶಿಫಾರಸು ಆಧರಿಸಿ, ಇನ್ಸ್‍ಪೆಕ್ಟರ್ ವಿರುದ್ಧ ಇಲಾಖಾ ವಿಚಾರಣೆ ನಿಗದಿಪಡಿಸಲಿದೆ. ಒಂದು ವೇಳೆ ಇಲಾಖಾ ವಿಚಾರಣೆಯಲ್ಲೂ ಅದೇ ಅಭಿ ಪ್ರಾಯ ವ್ಯಕ್ತವಾದಲ್ಲಿ ಮುಂದಿನ ಶಿಸ್ತು ಕ್ರಮವನ್ನು ಪೊಲೀಸ್ ಇಲಾಖೆ ಕೈಗೊಳ್ಳುವ ಸಾಧ್ಯತೆ ಇದೆ ಎಂದು ಮೂಲಗಳು ತಿಳಿಸಿವೆ.