ಹಡಪದ ಅಪ್ಪಣ್ಣ ಜಯಂತಿ ಅರ್ಥಪೂರ್ಣ ಆಚರಣೆ

ಹಾಸನ,ಜು.16- ಹಡಪದ ಅಪ್ಪಣ್ಣ ಜಯಂತಿಯನ್ನು ನಗರದಲ್ಲಿ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಜಿಲ್ಲಾಡಳಿತ, ಕನ್ನಡ ಮತ್ತು ಸಂಸ್ಕøತಿ ಇಲಾಖೆಯಿಂದ ಮಂಗಳ ವಾರ ಅರ್ಥಪೂರ್ಣವಾಗಿ ಆಚರಿಸಲಾಯಿತು.ಕಾರ್ಯಕ್ರಮ ಉದ್ಘಾಟಿಸಿದ ಜಿಲ್ಲಾಧಿ ಕಾರಿ ಅಕ್ರಂ ಪಾಷ, ಮಹನೀಯರ ಆದರ್ಶ ಗಳು ಸದಾ ಅನುಕರಣೀಯ ಎಂದರು.

ವಿಶೇಷ ಉಪನ್ಯಾಸ ನೀಡಿದ ಜಯಶಂಕರ್ ಬೆಳಗುಂಬ ಅವರು, 12ನೇ ಶತಮಾನದ ವಿಚಾರಕ್ರಾಂತಿಯಲ್ಲಿ ಹಡಪದ ಅಪ್ಪಣ್ಣ ಅವರು ವಹಿಸಿದ ಮಹತ್ವದ ಪಾತ್ರದ ಬಗ್ಗೆ ವಿವರಿಸಿದರು. ಅನುಭವ ಮಂಟಪ ಸ್ಥಾಪನೆಯಲ್ಲಿ ಪ್ರಮುಖ ಪಾತ್ರ ವಹಿಸಿದ ಹಡಪದ ಅಪ್ಪಣ್ಣ ಅವರು ವಚನಗಳ ಮೂಲಕ ಸಾಮಾಜಿಕ ಅನಿಷ್ಟಗಳ ಬಗ್ಗೆ ಅರಿವು ಮೂಡಿಸಿದರು ಎಂದರು. ಯಾವುದೇ ಮಹನೀಯರನ್ನು ಒಂದು ಜಾತಿಗೆ ಸೀಮಿತ ಗೊಳಿಸದೇ, ಅವರು ಬೋಧಿಸಿದ ತತ್ವ ಆದರ್ಶಗಳನ್ನು ಮನುಕುಲದ ಉದ್ಧಾರ ಕ್ಕಾಗಿ ಬಳಸಬೇಕು ಎಂದು ಹೇಳಿದರು.

ಅಪರ ಜಿಲ್ಲಾಧಿಕಾರಿ ವೈಶಾಲಿ, ನಗರ ಸಭೆ ಆಯುಕ್ತ ಪರಮೇಶ್, ಜಿಪಂ ಉಪ ಕಾರ್ಯದರ್ಶಿ ಅರುಣ್ ಕುಮಾರ್, ಹೆಚ್. ಎಂ.ಶಿವಣ್ಣ, ಮಹಂತಪ್ಪ, ಮಧುಸೂಧನ್, ಮಂಜುನಾಥ್, ಶಿವಲಿಂಗಪ್ಪ ಕಂಬಾರ ಮತ್ತಿತರರಿದ್ದರು. ಹಾಸನ ಬಾಬು ಅವರು ಹಡಪದ ಅಪ್ಪಣ್ಣ ಅವರ ವಚನಗಳ ಗಾಯನ ನಡೆಸಿಕೊಟ್ಟರು.