ಎದೆ ಬಗೆಯೋಕೆ ಆಗಲ್ಲ ಅಲ್ವಾ!?

ಬೆಂಗಳೂರು, ಜು.12- ನಮ್ಮ ಮೈತ್ರಿ ಸರ್ಕಾರದಲ್ಲಿಂದ ಬ್ಲ್ಯಾಕ್‍ಶಿಪ್‍ಗಳೆಲ್ಲಾ ಈಗ ಇಲ್ಲಿಂದ ಓಡಿ ಹೋಗಿವೆ ಎಂದು ರಾಜೀನಾಮೆ ಕೊಟ್ಟ ಶಾಸಕರನ್ನು ಮಾಜಿ ಸಿಎಂ ಸಿದ್ದರಾಮಯ್ಯ ಅವರು ಕಾಲೆಳೆದಿದ್ದಾರೆ. ವಿಧಾನ ಸೌಧದ ಬಳಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ವಿಶ್ವಾಸ ಇರುವ ಕಾರಣಕ್ಕೆ ವಿಶ್ವಾಸಮತ ಯಾಚಿಸುತ್ತಿರೋದು. ಅದು ಹೇಗೆ ಆಗುತ್ತೆ? ಹೆಂಗೆ ಆಗುತ್ತೆ ಅನ್ನೊದೆಲ್ಲ ಹೇಳೋಕೆ ಆಗಲ್ಲ. ನಮ್ಮ ಜೊತೆ ಚರ್ಚಿಸಿಯೇ ಸಿಎಂ ಈ ಮಾತನ್ನು ಸದನದಲ್ಲಿ ಹೇಳಿದ್ದು ಎಂದರು. ಯಡಿಯೂರಪ್ಪನೇ ಬೇರೆ ಸಿದ್ದರಾಮಯ್ಯನೇ ಬೇರೆ ಎಂದ ಅವರು, ಈ ಹಿಂದೆ ಎಂಟಿಬಿ ನಾಗರಾಜ್ ಎದೆ ಬಗಿದರೂ ಸಿದ್ದರಾಮಯ್ಯನವರು ಇದ್ದಾರೆ ಎಂದು ಹೇಳಿದ್ದ ಹೇಳಿಕೆಗೆ ಪ್ರತಿಕ್ರಿಯಿಸಿ, ಎಂಟಿಬಿ ನಾಗರಾಜ್ ಎದೆಯಲ್ಲಿ ನಾನಿದ್ದೀನೋ ಇಲ್ಲವೋ ಅನ್ನೋದು ಗೊತ್ತಿಲ್ಲ. ಎದೆ ಬಗೆಯೋಕೆ ಆಗಲ್ಲ ಅಲ್ವಾ? ಇದ್ದಿನೋ ಇಲ್ವೋ ಗೊತ್ತಿಲ್ಲ ಎಂದು ಹಾಸ್ಯ ಮಾಡಿದರು. ನಮಗೆ ಆಪರೇಷನ್ ಭಯ ಇಲ್ಲ. ನಮ್ಮಲ್ಲಿ ಇದ್ದ ಬ್ಲ್ಯಾಕ್ ಶಿಪ್‍ಗಳೆಲ್ಲ ಈಗ ಇಲ್ಲಿಂದ ಓಡಿ ಹೋಗಿವೆ. ಹಾಗಾಗಿ ನಮಗೆ ಭಯವಿಲ್ಲ. ಒಟ್ಟಾಗಿ ಇರಲು ರೆಸಾರ್ಟಿಗೆ ಹೋಗೋಣ ಎಂದು ಕೆಲವರು ಹೇಳುತ್ತಿದ್ದಾರೆ ನೋಡೋಣಾ ಎಂದು ಹೇಳಿದ್ದಾರೆ.