ನಾನು ಸಿಎಂ ಆಗಿದ್ದಾಗ ಕೆಲಸ ಮಾಡಿಸಿಕೊಂಡು ಬೆನ್ನಿಗೆ ಇರಿದರು

ಬೆಂಗಳೂರು: ನಾನು ಮುಖ್ಯಮಂತ್ರಿಯಾಗಿದ್ದಾಗ ನನ್ನ ಬಳಿ ಬರುತ್ತಿದ್ದ ಬೈರತಿ ಬಸವರಾಜ್, ಎಸ್.ಟಿ. ಸೋಮಶೇಖರ್ ಮತ್ತು ಮುನಿರತ್ನಂ ನಾಯ್ಡು ತಮಗೆ ಬೇಕಾದ ಎಲ್ಲ ಕೆಲಸಗಳನ್ನು ಮಾಡಿಕೊಂಡರು. ಈಗ ನನ್ನ ಬೆನ್ನಿಗೆ ಚೂರಿ ಹಾಕಿದ್ದಾರೆ. ಈ ಮೂಲಕ ಹೇಸಿಗೆ ತಿನ್ನುವ ಕೆಲಸ ಮಾಡಿದ್ದಾರೆ ಎಂದು ಮಾಜಿ ಸಿಎಂ ಸಿದ್ದರಾಮಯ್ಯ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಭಾನುವಾರ ನಡೆದ ಕಾಂಗ್ರೆಸ್ ಶಾಸಕಾಂಗ ಪಕ್ಷದ ಸಭೆಯಲ್ಲಿ ಅವರು ಆಕ್ರೋಶ ವ್ಯಕ್ತಪಡಿಸಿದರು ಎನ್ನ ಲಾಗಿದೆ. ಇದರಿಂದಾಗಿ ರಾಜಕೀಯದಲ್ಲಿ ಯಾರನ್ನು ನಂಬಬೇಕು, ಯಾರನ್ನು ನಂಬಬಾರದು ಎಂಬುದೇ ತಿಳಿಯದಾಗಿದೆ. ನಂಬಿಕೆ ಎಂಬ ಪದಕ್ಕೆ ಇಲ್ಲಿ ಅರ್ಥವೇ ಇಲ್ಲವಾಗಿದೆ ಎಂದರು ಎನ್ನಲಾಗಿದೆ. ಕೆಲ ಶಾಸಕರು ನನಗೆ ಆಪ್ತರು. ನಾನೇ ಅವರನ್ನು ಮುಂಬೈಗೆ ಕಳು ಹಿಸಿದ್ದೇನೆ ಎಂದು ಅಪಪ್ರಚಾರ ಮಾಡಲಾಗುತ್ತಿದೆ. ಹೋದವರಷ್ಟೇ ಅಲ್ಲ, ಇಲ್ಲಿ ಇರುವವರೂ ನನಗೆ ಆಪ್ತರು. ನಾನು ನಿಮ್ಮಲ್ಲಿ ಯಾರಿಗಾದರೂ ಬಿಜೆಪಿಗೆ ಹೋಗುವಂತೆ ಹೇಳಿದ್ದೀನಾ. ಅಂತಹ ನೀಚ ಕೆಲಸವನ್ನು ನಾನು ಮಾಡಲಾರೆ ಎಂದು ಹೇಳಿದರು ಎನ್ನಲಾಗಿದೆ.

ನನ್ನ ಬಗ್ಗೆ ಅಪಪ್ರಚಾರ ಮಾಡಿದರೆ ಸಿಗುವ ಲಾಭವಾದರೂ ಏನು? ಎಂಟಿಬಿ ನಾಗರಾಜ್, ಮುನಿರತ್ನಂ ನಾಯ್ಡು, ಸುಧಾಕರ್ ಜೊತೆ ಗಂಟೆಗಟ್ಟಲೆ ಮಾತನಾಡಿದಾಗ ನಾವೂ ಎಲ್ಲೂ ಹೋಗುವುದಿಲ್ಲ ಎಂದು ಹೇಳಿ ಕೈ ಕೊಟ್ಟರು. ಮೋಸ ಮಾಡಿದರು. ಇದಕ್ಕಿಂತ ನೋವಿನ ಸಂಗತಿ ಬೇರೇನು ಇರಲು ಸಾಧ್ಯ ಎಂದು ಪ್ರಶ್ನಿಸಿದ್ದಾಗಿ ಹೇಳಲಾ ಗಿದೆ. ಯಾರೇ ಆದರೂ ತಮ್ಮನ್ನು ತಾವು ಮಾರಾಟ ಮಾಡಿಕೊಂಡು ಹೋಗ್ತೀವಿ ಎಂಬ ನಿರ್ಧಾರಕ್ಕೆ ಬಂದಿದ್ದರೆ ಬ್ರಹ್ಮ ಬಂದರೂ ಅವರನ್ನು ತಡೆಯೋಕಾ ಗಲ್ಲ. ಮುನಿರತ್ನಂ ಜತೆ ನಾನು, ಡಿ.ಕೆ.ಶಿವಕುಮಾರ್, ಡಾ. ಜಿ.ಪರಮೇಶ್ವರ್, ಕಾಂಗ್ರೆಸ್ ಉಸ್ತುವಾರಿ ಕೆ.ಸಿ.ವೇಣುಗೋಪಾಲ್ ಎರಡು ಗಂಟೆ ಮಾತನಾಡಿದ್ದೆವು. ನಾನೆಲ್ಲೂ ಹೋಗಲ್ಲಣ್ಣ ಅಂತ ಹೇಳ್ತಾ ಹೇಳ್ತಾನೆ ಹೋಗಿದ್ದಾನೆ ಎಂದು ಅಲವತ್ತುಕೊಂಡರು ಎನ್ನಲಾಗಿದೆ. ಡಿ.ಕೆ. ಶಿವಕುಮಾರ್ ಅವರು ಎಂಟಿಬಿನ ನನ್ನ ಮನೆಗೆ ಕರೆದುಕೊಂಡು ಬಂದರು. ಮನೆಯಳಗೆ ಎಲ್ಲೂ ಹೋಗಲ್ಲ ಎಂದು ಹೇಳಿ ಗೇಟ್ ಹತ್ರ ಹೋಗಿ ಶಾಸಕ ಡಾ. ಸುಧಾಕರ್ ಬರದೆ ನಾನೊಬ್ಬನೇ ಬಂದು ಏನ್ ಮಾಡಲಿ ಎಂದು ಹೇಳಿಕೆ ಕೊಟ್ಟರು. ಈ ರೀತಿಯ ಹೊಲಸು ರಾಜಕಾರಣ ಮಾಡುವವರಿಗೆ ಏನು ಮಾಡೋ ಕಾಗುತ್ತೆ? ಇವರೆಲ್ಲ ವಾಪಸು ಬಂದರೂ ಪಕ್ಷಕ್ಕೆ ಸೇರಿಸಿಕೊಳ್ಳಬಾರದು. ರಾಜಕೀಯ ಶುದ್ಧವಾಗಬೇಕು ಎಂದು ಹೇಳಿದರು ಎನ್ನಲಾಗಿದೆ.