ಮೈಸೂರು, ಜು.25(ಎಂಕೆ)- ವರಮಹಾಲಕ್ಷ್ಮಿ ಹಬ್ಬದ ಪ್ರಯುಕ್ತ ಕುವೆಂಪುನಗರದ ಜಯಮ್ಮ ಗೋವಿಂದೇಗೌಡ ಕಲ್ಯಾಣ ಮಂಟಪದಲ್ಲಿ 6 ದಿನಗಳ ಕಾಲ ಆಯೋಜಿಸಿರುವ ‘ವೀವರ್ ಆಫ್ ಸಿಲ್ಕ್ ಇಂಡಿಯಾ-2019’ ಮೇಳಕ್ಕೆ ಗುರುವಾರ ಚಾಲನೆ ನೀಡ ಲಾಯಿತು. ಸಿಲ್ಕ್ ಕಾಟನ್ ಫ್ಯಾಬ್ ವತಿ ಯಿಂದ ಜು.24ರಿಂದ 29ರವರೆಗೆ ಆಯೋಜಿಸಿರುವ ಈ ಮೇಳದಲ್ಲಿ 30 ಮಳಿಗೆಗಳನ್ನು ತೆರೆಯಲಾಗಿದ್ದು, 12 ರಾಜ್ಯಗಳ ಕುಶಲಕರ್ಮಿಗಳು ತಾವೇ ತಯಾರಿಸಿದ ಬಗೆ-ಬಗೆಯ ಸೀರೆಗಳ ಪ್ರದರ್ಶನ ಮತ್ತು ಮಾರಾಟ ಮಾಡಲಿ ದ್ದಾರೆ. ಮೇಳದಲ್ಲಿ ಕಾಶ್ಮೀರಿ ಸೀರೆಗಳು, ವಿವಿಧ ಸಿಲ್ಕ್ ಕಾಟನ್ ಸೀರೆಗಳು, ಶಾಲ್ಸ್, ಪಶ್ಚಿಮ ಬಂಗಾಳ ಸೀರೆಗಳು, ಇಕ್ಕತ್ ಸೀರೆಗಳು, ಆರ್ಡಿಶಾ ಸೀರೆಗಳು, ಬನಾರಸ್ ಸೀರೆಗಳು, ಟಸ್ಸರ್ ಸೀರೆಗಳು, ಜ್ಯೂಟ್ ಸೀರೆಗಳು, ರಾಜಸ್ಥಾನ್ ಜೈಪುರ್ ಟಾಪ್ಸ್, ಬಾಗಲ್‍ಪುರ್ ಸೂಟ್‍ಗಳು, ಕಲಂಕಾರಿ ಟಾಪ್ಸ್, ಹುಬ್ಬಳ್ಳಿ ಸೀರೆಗಳು, ಜೈಪುರ ಬೆಡ್‍ಶೀಟ್‍ಗಳು, ಕುಚ್‍ಬುಚ್ ಟಾಪ್ಸ್, ಒಂದು ಗ್ರಾಂ ಗೋಲ್ಡ್ ಜ್ಯುವೆಲ್ಲರಿ ಆಭರಣಗಳು ಲಭ್ಯವಿದ್ದು, ಪ್ರತಿ ದಿನ ಬೆಳಿಗ್ಗೆ 10.30ರಿಂದ ರಾತ್ರಿ 9 ಗಂಟೆವರೆಗೆ ತೆರೆದಿರುತ್ತದೆ. ಕೆಪಿಸಿಸಿ ಮಹಿಳಾ ಘಟಕದ ಅಧ್ಯಕ್ಷೆ ಪುಷ್ಪಾ ಅಮರನಾಥ್ ದೀಪ ಬೆಳಗಿಸುವ ಮೂಲಕ ಮೇಳಕ್ಕೆ ಇಂದು ಚಾಲನೆ ನೀಡಿದರು. ಕೆಪಿಸಿಸಿ ಕಾರ್ಯದರ್ಶಿ ಲತಾ ಮೋಹನ್, ಆಯೋಜಕರಾದ ತಾರಾಶ್ರೀ, ಎಸ್.ಎಂ.ಹಾದಿಲ್ ಮತ್ತಿತರರು ಉಪಸ್ಥಿತರಿದ್ದರು.