ಮೈಸೂರು: ಸ್ಮಾರ್ಟ್‍ಪೆÇೀನ್‍ನಂತಹ ತಂತ್ರಜ್ಞಾನ ದಿಂದಾಗಿ ಖಾಸಗಿ ಮಾಹಿತಿಗಳು ಸೋರಿಕೆ ಯಾಗುತ್ತಿರುವುದೇ ಶ್ರೀಲಂಕಾದಲ್ಲಿ ನಡೆದ ಭಯೋತ್ಪಾದಕರ ದಾಳಿಗೆ ಕಾರಣ ಎಂದು ಎಎಲ್‍ಎಂಟಿ ಲೀಗಲ್ ಅಡ್ವೋಕೇಟ್ಸ್ ಸಂಸ್ಥೆಯ ಹಿರಿಯ ಸಲಹೆಗಾರ ಡಾ. ಭೀಮೇಶ್ ವಿಷಾದಿಸಿದ್ದಾರೆ.
ಮೈಸೂರಿನ ವಿದ್ಯಾವರ್ಧಕ ಕಾನೂನು ಕಾಲೇಜಿನಲ್ಲಿ ಶನಿವಾರ ನಡೆದ `ಮಾದರಿ ವಿಶ್ವಸಂಸ್ಥೆ ಸಮ್ಮೇಳನ’ದಲ್ಲಿ ಮಾತ ನಾಡಿದ ಅವರು, ಸ್ಮಾರ್ಟ್‍ಫೋನ್ ಮತ್ತು ತಂತ್ರಜ್ಞಾನ ಬಳಕೆಯಿಂದ ಅನುಕೂಲ ಕ್ಕಿಂತ ಅಪಾಯವೇ ಹೆಚ್ಚಾಗಿದೆ. ಪ್ರಸ್ತುತ ಸಂದರ್ಭದಲ್ಲಿ ಜೀವನವನ್ನು ಇನ್ನಷ್ಟು ಸ್ಮಾರ್ಟ್ ಮಾಡಿಕೊಳ್ಳಲು ಸ್ಮಾರ್ಟ್ ಪೆÇೀನ್ ಮೇಲೆ ಹೆಚ್ಚಾಗಿ ಅವಲಂಬಿತರಾ ಗುತ್ತಿದ್ದಾರೆ. ಈ ಮೂಲಕ ಪ್ರತಿಯೊಬ್ಬರೂ ತಮ್ಮ ಖಾಸಗಿ ಮಾಹಿತಿಗಳನ್ನು ಮತ್ತೊಬ್ಬ ರಿಗೆ ಸುಲಭವಾಗಿ ಸಿಗುವಂತೆ ಮಾಡುತ್ತಿ ದ್ದಾರೆ. ಇದು ಅಪಾಯಕ್ಕೆ ಸ್ವತಃ ಆಹ್ವಾನ ನೀಡಿದಂತಾಗುತ್ತಿದೆ. ಬೇರೆಯವರು ಅಥವಾ ಆತಂಕಕಾರಿ ಶಕ್ತಿಗಳಿಗೆ ನಮ್ಮ ಖಾಸಗಿ ಮಾಹಿತಿ ದುರ್ಬಳಕೆ ಮಾಡಿಕೊಳ್ಳಲು ನಾವೇ ವೇದಿಕೆ ಕಲ್ಪಿಸಿಕೊಡುತ್ತಿದ್ದೇವೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ತುರ್ತು ಕ್ರಮ ಅನಿವಾರ್ಯ: ಜಿಲ್ಲಾ ಪ್ರಧಾನ ಮತ್ತು ಸತ್ರ ನ್ಯಾಯಾಧೀಶ ಎಸ್.ಕೆ.ವಂಟಿಗೋಡಿ ಮಾತನಾಡಿ, ಪ್ರಪಂಚವನ್ನು ಇತ್ತೀಚೆಗೆ ಕಾಡುತ್ತಿರುವ ಬಹು ದೊಡ್ಡ ಸಮಸ್ಯೆಗಳೆಂದರೆ ಭಯೋ ತ್ಪಾದನೆ ಮತ್ತು ಖಾಸಗಿ ಮಾಹಿತಿ ಸೋರಿಕೆ. ಈ ಬಗ್ಗೆ ವಿಶ್ವಸಂಸ್ಥೆ ಗಮನ ಹರಿಸಿ ತುರ್ತು ಕ್ರಮ ಕೈಗೊಳ್ಳುವ ಅಗತ್ಯವಿದೆ. ಶ್ರೀಲಂಕಾದಲ್ಲಿ ಭಯೋತ್ಪಾದಕರ ದಾಳಿಗೆ ಖಾಸಗಿ ಮಾಹಿತಿ ಸೋರಿಕೆಯೇ ಕಾರಣ ಎಂದು ಭಾವಿಸಬಹುದು ಎಂದರು.
ಮೂರನೇ ಮಹಾಯುದ್ಧ ನಡೆದರೆ ಅದು ಅಮೆರಿಕ ಮತ್ತು ಉತ್ತರ ಕೊರಿಯಾ ವಿರುದ್ಧ ನಡೆಯುತ್ತದೆ ಎಂದು ವಿಶ್ವದ ಜನರೆಲ್ಲ ಮಾತನಾಡಿ ಕೊಳ್ಳುತ್ತಿದ್ದರು. ಇಂದು ಅಮೆರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮತ್ತು ಉತ್ತರ ಕೊರಿಯಾ ಅಧ್ಯಕ್ಷ ಕಿಮ್ ಜಾಂಗ್ ಉನ್ ಭೇಟಿ ಮಾಡಿ ಶಾಂತಿ ಮಾತುಕತೆ ನಡೆಸಿದ್ದಾರೆ. ಇದರಿಂದ ಶಾಂತಿ ವಾತಾವರಣ ನಿರ್ಮಾಣವಾಯಿತು. ಎಲ್ಲ ರಾಷ್ಟ್ರಗಳ ನಾಯಕರು ಒಂದೆಡೆ ಸೇರಿ ಚರ್ಚಿಸಬೇಕು. ಅಂತಾರಾಷ್ಟ್ರೀಯ ಭದ್ರತೆ ಹಾಗೂ ಮಾಹಿತಿ ಸೋರಿಕೆ ತಡೆ ಗಟ್ಟುವಲ್ಲಿ ಕ್ರಮ ಕೈಗೊಳ್ಳಬೇಕು ಎಂದು ಅಭಿಪ್ರಾಯಪಟ್ಟರು.
ಮಾದರಿ ಸಮ್ಮೇಳನ: ವಿಶ್ವ ಸಂಸ್ಥೆಯಲ್ಲಿ ನಡೆಯುವ ಸಮ್ಮೇಳನವನ್ನು ಪರಿಚಯಿ ಸುವ ನಿಟ್ಟಿನಲ್ಲಿ ಕಾಲೇಜು ವಿದ್ಯಾರ್ಥಿ ಗಳಿಂದ ವಿಶ್ವಸಂಸ್ಥೆ ಮಾದರಿ ಸಮ್ಮೇಳನ ಆಯೋಜಿಸಲಾಗಿತ್ತು. ವಿದ್ಯಾರ್ಥಿಗಳು ವಿವಿಧ ದೇಶಗಳನ್ನು ಪ್ರತಿನಿಧಿಸಿ ಅಂತಾ ರಾಷ್ಟ್ರೀಯ ಭದ್ರತೆ ಹಾಗೂ ಮಾಹಿತಿ ಸೋರಿಕೆ ಕುರಿತು ಚರ್ಚೆ ನಡೆಸಿದರು. ಭಯೋತ್ಪಾದನೆ ತಡೆಗಟ್ಟುವ ಕ್ರಮಗಳ ಬಗ್ಗೆ ಚರ್ಚೆ ನಡೆಸಲಾಯಿತು.
ಈ ಸಂದರ್ಭದಲ್ಲಿ ವಿದ್ಯಾವರ್ಧಕ ಸಂಘದ ಅಧ್ಯಕ್ಷ ಗುಂಡಪ್ಪಗೌಡ, ಕಾರ್ಯ ದರ್ಶಿ ಪಿ.ವಿಶ್ವನಾಥ್, ಖಜಾಂಚಿ ಶ್ರೀಶೈಲ ರಾಮಣ್ಣನವರ್, ಪ್ರಾಂಶುಪಾಲ ಪಿ.ದೀಪು ಹಾಗೂ ಇನ್ನಿತರರು ಉಪಸ್ಥಿತರಿದ್ದರು.