ಜಿಪಂ ಅಧ್ಯಕ್ಷೆ ಶ್ವೇತಾದೇವರಾಜ್ ಅಭಿಮತ
ಹಾಸನ: ಸಮಾಜದಲ್ಲಿ ಪ್ರತಿ ಯೊಬ್ಬರಿಗೂ ಶಿಕ್ಷಣ ಮುಖ್ಯವಾಗಿದೆ. ಶಿಕ್ಷಣ ದಿಂದಲೇ ಸಾಮಾಜಿಕ ಅಭಿವೃದ್ಧಿ ಹೊಂದಲು ಸಾಧ್ಯ ಎಂದು ಜಿಲ್ಲಾ ಪಂಚಾಯಿತಿ ಅಧ್ಯಕ್ಷೆ ಶ್ವೇತಾದೇವರಾಜು ಹೇಳಿದರು.
ನಗರದಲ್ಲಿ ಶನಿವಾರ ಜಿಲ್ಲಾಡಳಿತ, ಕನ್ನಡ ಮತ್ತು ಸಂಸ್ಕøತಿ ಇಲಾಖೆಯಿಂದ ಆಯೋಜಿಸಲಾಗಿದ್ದ ಸಂತ ಸೇವಾಲಾಲ್ ಜಯಂತಿ ಉದ್ಘಾಟಿಸಿ ಮಾತನಾಡಿದರು.
ತಾಂಡ್ಯಗಳಲ್ಲಿ ಇಂದಿಗೂ ಮೂಲ ಸೌಕರ್ಯಗಳ ಕೊರತೆಯಿದ್ದು, ಶಿಕ್ಷಣದ ಮೂಲಕ ಅವುಗಳಲ್ಲಿ ಸುಧಾರಣೆ ತರ ಬಹುದು. ಸರ್ಕಾರ ನೀಡುತ್ತಿರುವ ಮೂಲ ಸೌಕರ್ಯಗಳನ್ನು ಪಡೆದು ಸಮರ್ಪಕ ವಾಗಿ ಬಳಸಿಕೊಂಡು ಅಭಿವೃದ್ಧಿಯೆಡೆಗೆ ಸಾಗಬೇಕು ಎಂದು ಕರೆ ನೀಡಿದರು.
ತಾಲೂಕು ಪಂಚಾಯಿತಿ ಅಧ್ಯಕ್ಷ ಬಿ.ಟಿ. ಸತೀಶ್ ಮಾತನಾಡಿ, ಶತಮಾನಗಳ ಹಿಂದೆಯೇ ಸಮಾನತೆಗಾಗಿ ಹೋರಾ ಡಿದ ಸಂತ ಸೇವಾಲಾಲ್. ಸಮಾಜದಲ್ಲಿ ಅಹಿಂಸಾ ಮಾರ್ಗದ ಮೂಲಕ ಸಾಮಾ ಜಿಕ ಸಮಾನತೆ ಕಾಪಾಡಿದ ಮಹಾತ್ಮರು. ಅವರು ಹಾಕಿಕೊಟ್ಟ ಮಾರ್ಗದಲ್ಲಿ ಪ್ರತಿ ಯೊಬ್ಬರೂ ಸಾಗುವ ಮೂಲಕ ನಾವೆ ಲ್ಲರೂ ಒಂದೇ ಎಂಬ ಭಾವನೆ ಬೆಳೆಸಿ ಕೊಳ್ಳಿ ಎಂದು ಸಲಹೆ ನೀಡಿದರು.
ಜಿಲ್ಲಾ ಪಂಚಾಯಿತಿ ಉಪ ಕಾರ್ಯ ದರ್ಶಿ ನಾಗರಾಜ್ ಮಾತನಾಡಿ, ಒಂದು ಕುಟುಂಬದಲ್ಲಿ ಒಬ್ಬ ವ್ಯಕ್ತಿ ವಿದ್ಯಾವಂತ ನಾಗಿದ್ದರೆ ಕುಟುಂಬದ ಮುನ್ನಡೆ ಸಾಧ್ಯ. ಮುಂಬರುವ ಯುವ ಪೀಳಿಗೆಗೆ ಉತ್ತಮ ವಿದ್ಯಾಭ್ಯಾಸ ನೀಡುವ ಮೂಲಕ ಸಮಾಜದ ಸತ್ಪ್ರಜೆಯನ್ನಾಗಿ ರೂಪಿಸಿ ಎಂದು ಹೇಳಿದರು.
ಶಿಕ್ಷಕ ಭೋಜರಾಜನಾಯಕ್ ಮಾತ ನಾಡಿ, ಸಂತ ಸೇವಾಲಾಲರು ತಮ್ಮ ಜೀವಿತಾವಧಿಯಲ್ಲಿ ದೇಶವನ್ನು 17 ಬಾರಿ ಸುತ್ತಿ ಸಂಸ್ಕøತಿಯನ್ನು ಉಳಿಸಿದ್ದಾರೆ. ಬ್ರಹ್ಮ ಚಾರಿಯಾಗಿ ತಮ್ಮ ಜೀವನವನ್ನು ಸಮಾ ಜದ ಉದ್ಧಾರಕ್ಕಾಗಿ ಮೀಸಲಿರಿಸಿದ ಅವರು ಎಲ್ಲರಿಗೂ ಆದರ್ಶ ಸಂತರಾಗಿದ್ದಾರೆ ಎಂದು ಹೇಳಿದರು.
6 ಸಾವಿರ ವರ್ಷಗಳ ಸುದೀರ್ಘ ಇತಿ ಹಾಸ ಹೊಂದಿದ ಬಂಜಾರ ಸಮಾಜ 114 ದೇಶಗಳಲ್ಲಿ ಹಂಚಿಹೋಗಿದೆ. ಸಂತ ಸೇವಾಲಾಲ್ ಹೇಳಿದ ಸರ್ವ ಸಮು ದಾಯಗಳಿಗೂ, ಸರ್ವ ಜೀವಿ, ನಿರ್ಜೀವಿ ಗಳಿಗೂ ಒಳ್ಳೆಯದಾಗಲಿ ಎಂಬ ಸಂದೇಶ ವನ್ನು ಬೆಳೆಸಿಕೊಂಡು ಸಮಾಜದ ಉದ್ಧಾರಕ್ಕಾಗಿ ಶ್ರಮಿಸೋಣ ಎಂದರು.
ಕಾರ್ಯಕ್ರಮದಲ್ಲಿ ಜಿಲ್ಲಾಧಿಕಾರಿ ಕಚೇರಿ ಸಹಾಯಕ ತಿಮ್ಮಯ್ಯ, ಬಂಜಾರ ಸಮಾಜದ ಜಿಲ್ಲಾ ಅಧ್ಯಕ್ಷ ಪುಟ್ಟನಾಯಕ್, ಬಂಜಾರ ಸಮಾಜದ ಜಿಲ್ಲಾ ಮಹಿಳಾ ಅಧ್ಯಕ್ಷೆ ಶೈಲಾಬಾಯಿ, ಮಾಜಿ ಜಿಲ್ಲಾ ಸದಸ್ಯೆ ಸುಲೋಚನಾಬಾಯಿ, ತಾಲೂಕು ಘಟಕದ ಅಧ್ಯಕ್ಷ ಉಮೇಶ್ ನಾಯಕ್ ಸೇರಿದಂತೆ ಇತರರು ಹಾಜರಿದ್ದರು.
ಮೆರವಣಿಗೆ ಉದ್ಘಾಟನೆ: ಸಂತ ಸೇವಾ ಲಾಲ್ ಜಯಂತಿಯ ಅಂಗವಾಗಿ ಜಿಲ್ಲಾಧಿ ಕಾರಿ ಕಚೇರಿ ಆವರಣದಲ್ಲಿ ಏರ್ಪಡಿಸಿದ್ದ ಮೆರವಣಿಗೆಗೆ ಹೆಚ್ಚುವರಿ ಜಿಲ್ಲಾಧಿಕಾರಿ ಎಂ.ಎಲ್.ವೈಶಾಲಿ ಚಾಲನೆ ನೀಡಿದರು. ಈ ಸಂದರ್ಭದಲ್ಲಿ ಸ್ವಾತಂತ್ರ್ಯ ಹೋರಾಟಗಾರ ಶಿವಣ್ಣ, ಕನ್ನಡ ಮತ್ತು ಸಂಸ್ಕøತಿ ಇಲಾ ಖೆಯ ಸಹಾಯಕ ನಿರ್ದೇಶಕ ಶಿವ ಲಿಂಗಪ್ಪ ಎನ್.ಕುಂಬಾರ ಹಾಗೂ ಸಮಾ ಜದ ಮುಖಂಡರು ಹಾಜರಿದ್ದರು. ಮೆರ ವಣಿಗೆಯ ಮುನ್ನ ಜಿಲ್ಲಾಧಿಕಾರಿ ಕಚೇರಿ ಆವರಣದಲ್ಲಿರುವ ಡಾ.ಬಿ.ಆರ್. ಅಂಬೇ ಡ್ಕರ್ ಪುತ್ಥಳಿಗೆ ಸಮಾಜದ ಮುಖಂಡರು ಗಳು ಪುಷ್ಪ ನಮನ ಸಲ್ಲಿಸಿದರು.