ಸೋನಿಯಾ ಗಲಿಬಿಲಿ, ರಾಹುಲ್ ತಬ್ಬಿಬ್ಬು…

ನವದೆಹಲಿ: ಪಕ್ಕದ ಆಸನ ದಲ್ಲಿ ಕುಳಿತಿದ್ದ ಮುಲಾಯಂ ಸಿಂಗ್ ಅವರು ಎದ್ದು ನಿಂತು ಮಾತನಾಡಲು ಆರಂಭಿಸಿದಾಗ ಕುತೂಹಲದಿಂದ ಕಿವಿಗೊಟ್ಟಿದ್ದ ಕಾಂಗ್ರೆಸ್ ನಾಯಕಿ ಸೋನಿಯಾ ಗಾಂಧಿ ಅವರು, ಮರು ಕ್ಷಣವೇ ಗಲಿಬಿಲಿಗೊಳಗಾದರೆ, ಎಐಸಿಸಿ ಅಧ್ಯಕ್ಷ ರಾಹುಲ್‍ಗಾಂಧಿ ತಬ್ಬಿಬ್ಬಾದರು. ಬಳಿಕ ಮಾಧ್ಯಮಗಳಿಗೆ ಪ್ರತಿಕ್ರಿಯಿಸಲು ತಿಣುಕಾಡಿದರು. ಮುಲಾಯಂ ಅವರು ತಮ್ಮ ಕಡು ರಾಜಕೀಯ ವಿರೋಧಿ ಪ್ರಧಾನಿ ಮೋದಿ ಅವರನ್ನು ಪ್ರಶಂಸಿಸ ಲಾರಂಭಿಸಿದ್ದು ಕಿವಿಗೆ ಬಿದ್ದೊಡನೆ ಸೋನಿಯಾ ಜೀ ಅವರ ಕಣ್ಣುಗಳು ಹಿಗ್ಗಿದವು. `ಇದೇನಿದು’ ಎನ್ನುವಂತೆ ಮುಲಾಯಂ ಅವರತ್ತ ನೋಡಿದರು. ಮರುಕ್ಷಣ ಹಿಂದಿನ ಸಾಲಿನಲ್ಲಿ ಕುಳಿತಿದ್ದ ಎನ್‍ಸಿಪಿ ಸಂಸದೆ, ಶರದ್‍ಪವಾರ್ ಪುತ್ರಿ ಸುಪ್ರಿಯಾ ಸುಳೆ ಅವರತ್ತ ತಿರುಗಿ ನೋಡಿದರು. ಮುಲಾಯಂ ಮಾತುಗಳನ್ನು ಕೇಳುತ್ತಾ ಸುಪ್ರಿಯಾ ಹಸನ್ಮುಖಿಯಾಗಿದ್ದು ಕಂಡು ತಾವೂ ನಿಧಾನವಾಗಿ ಹಿರಿಯ ಸಂಸದನ ಮಾತುಗಳಿಗೆ ಕಿವಿಗೊಟ್ಟರು.