ಗಣರಾಜ್ಯೋತ್ಸವದಲ್ಲಿ ಆಕರ್ಷಕ ಪಥ ಸಂಚಲನಕ್ಕೆ ಎಸ್ಪಿ ಸೂಚನೆ

ಹಾಸನ: ಗಣರಾಜ್ಯೋತ್ಸವ ದಲ್ಲಿ ಆಕರ್ಷಕ ಪಥ ಸಂಚಲನ ಆಯೋ ಜಿಸಬೇಕು, ಅತ್ಯುತ್ತಮ ಶಾಲಾ ತಂಡ ಗಳನ್ನು ಮಾತ್ರ ಪಥ ಸಂಚಲನಕ್ಕೆ ಆಯ್ಕೆ ಮಾಡಬೇಕು. ಸಾಂಸ್ಕøತಿಕ ಕಾರ್ಯ ಕ್ರಮಗಳು ದಿನದ ಮಹತ್ವ ಬಿಂಬಿಸುವಂತಿ ರಬೇಕು ಎಂದು ಜಿಲ್ಲಾ ಪೊಲೀಸ್ ವರಿಷ್ಠಾ ಧಿಕಾರಿ ಎ.ಎನ್.ಪ್ರಕಾಶ್ ಗೌಡ ತಿಳಿಸಿದರು.

ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕಚೇರಿಯಲ್ಲಿಂದು ನಡೆದ ಗಣರಾಜ್ಯೋ ತ್ಸವ ಪಥ ಸಂಚಲನ ಕುರಿತು ಪೂರ್ವ ಭಾವಿ ಸಭೆಯ ಅಧ್ಯಕ್ಷತೆ ವಹಿಸಿ ಮಾತ ನಾಡಿದ ಅವರು, ಪಥ ಸಂಚಲನಕ್ಕೆ ತಂಡ ಗಳ ಆಯ್ಕೆ ಹಾಗೂ ಪ್ರದರ್ಶನ ಪೂರ್ವ ತಾಲೀಮು ಕುರಿತು ಸಲಹೆ ನೀಡಿದರು.

ಪಥ ಸಂಚಲನಕ್ಕೆ ಪಾಲ್ಗೊಳ್ಳುವ ಮಕ್ಕಳಿಗೆ ಉಪಹಾರ ಒದಗಿಸಬೇಕು. ಸಾರ್ವಜನಿಕ ಶಿಕ್ಷಣ ಇಲಾಖೆ ನಿರೂ ಪಣೆಯ ಜವಾಬ್ದಾರಿಯನ್ನು ವಹಿಸಿ ಕೊಂಡು ಕೆಲಸ ಮಾಡಬೇಕು ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ತಿಳಿಸಿದರು.

ಸಾಂಸ್ಕøತಿಕ ಕಾರ್ಯಕ್ರಮ ಹಾಗೂ ಪರೇಡ್ ತಾಲೀಮು ಮುಂಚಿತ ದಿನ ಗಳಲ್ಲಿ ನಡೆಯುವುದರಿಂದ ನಗರಸಭೆ ವತಿಯಿಂದ ಜಿಲ್ಲಾ ಕ್ರೀಡಾಂಗಣಕ್ಕೆ ನೀರು ಸಿಂಪಡಿಸಬೇಕು ಎಂದು ಹೇಳಿದರು.

ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ನಂದಿನಿ, ಡಿವೈಎಸ್‍ಪಿ ಪುಟ್ಟಸ್ವಾಮಿ ಗೌಡ ಹಾಗೂ ವಿವಿಧ ಇಲಾಖಾ ಅಧಿಕಾರಿಗಳು ಮತ್ತು ವಿವಿಧ ಹಂತದ ಪೊಲೀಸ್ ಅಧಿಕಾರಿಗಳು ಸಭೆಯಲ್ಲಿ ಹಾಜರಿದ್ದರು.