ಮೈಸೂರು, ಜ. 16(ಆರ್‍ಕೆ)- ಮೈಸೂರು ರೇಸ್ ಕ್ಲಬ್(ಎಂಆರ್‍ಸಿ) ಆವರಣದಲ್ಲಿ ಅನಧಿಕೃತವಾಗಿ ನೆಲೆಸಿರುವವರ ಬಗ್ಗೆ ತನಿಖೆ ಯಾಗಬೇಕೆಂದು ಶಾಸಕ ಸಾ.ರಾ.ಮಹೇಶ್ ಸರ್ಕಾರವನ್ನು ಒತ್ತಾಯಿಸಿದ್ದಾರೆ.
ಬುಧವಾರ ಮೈಸೂರಿನ ಖಾಸಗಿ ಹೋಟೆಲಿ ನಲ್ಲಿ ಸುದ್ದಿಗಾರರೊಂದಿಗೆ ಮಾತನಾಡು ತ್ತಿದ್ದ ಅವರು, ಎಂಆರ್‍ಸಿಗೆ ಕೇವಲ ಕುದುರೆ ರೇಸಿಂಗ್ ಚಟುವಟಿಕೆ ನಡೆಸಲು ಅನು ಮತಿ ನೀಡಲಾಗಿದೆ. ಆದರೆ ಆವರಣದಲ್ಲಿ ಸುಮಾರು 600 ಶೆಡ್‍ಗಳನ್ನು ನಿರ್ಮಿಸ ಲಾಗಿದ್ದು, 1500ಕ್ಕೂ ಹೆಚ್ಚು ಮಂದಿ ಅನಧಿ ಕೃತವಾಗಿ ವಾಸಿಸಲು ಅವಕಾಶ ನೀಡಲಾ ಗಿದೆ ಎಂದು ಆರೋಪಿಸಿದರು. ಆ ಪೈಕಿ ಕೆಲವರು ಅನಧಿಕೃತ ವಲಸಿಗರಾಗಿದ್ದು, ದಾಖಲಾತಿ ಹೊಂದದೆ ನೆರೆರಾಷ್ಟ್ರಗಳಿಂದ ಬಂದವರಾಗಿದ್ದಾರೆ. ಅಂತಹವರ ದಾಖಲೆ ಗಳನ್ನು ಪರಿಶೀಲಿಸಬೇಕು ಎಂದ ಸಾ.ರಾ. ಮಹೇಶ್, ಎಂಆರ್‍ಸಿ ಗುತ್ತಿಗೆ ನವೀಕರಿಸಿ ರುವ ಸರ್ಕಾರದ ಕ್ರಮ ಸರಿಯಲ್ಲ ಎಂದರು.
ಹಿಂದಿನ ಸರ್ಕಾರ ರೇಸ್ ಕೋರ್ಸ್ ಗುತ್ತಿಗೆ ನವೀಕರಿಸದಿರಲು ತೀರ್ಮಾನಿ ಸಿತ್ತು. ಈಗ 30 ವರ್ಷಗಳ ಅವಧಿಗೆ ನವೀ ಕರಿಸಲಾಗಿದ್ದು ಯಾರ ಒತ್ತಡಗಳಿಗೆ ಮಣಿದಿದೆ ಎಂಬುದನ್ನು ಮುಂಬರುವ ರಾಜ್ಯ ವಿಧಾನ ಮಂಡಲ ಅಧಿವೇಶನದಲ್ಲಿ ಪ್ರಶ್ನಿಸುತ್ತೇನೆ ಎಂದು ಸಾ.ರಾ.ಮಹೇಶ್ ತಿಳಿಸಿದರು.