ಇಂದಿನಿಂದ ಶ್ರೀ ದೇವಮ್ಮ ದೇವಾಲಯ ಉದ್ಘಾಟನಾ ಕಾರ್ಯಕ್ರಮ

ಅರಸೀಕೆರೆ: ತಾಲೂಕಿನ ಮುರುಂಡಿ ಗ್ರಾಮದಲ್ಲಿ ಜೀರ್ಣೋದ್ಧಾರ ಗೊಂಡಿರುವ ಶ್ರೀ ದೇವಮ್ಮ ದೇವಿ ದೇವಾಲಯದ ಲೋಕಾರ್ಪಣೆ ಕಾರ್ಯ ಕ್ರಮದ ಪೂಜಾ ಕೈಂಕರ್ಯಗಳು ಮೇ 5ರಿಂದ ನಡೆಯಲಿದೆ ಎಂದು ದೇವಾ ಲಯ ಸಮಿತಿ ಪ್ರಕಟಣೆ ತಿಳಿಸಿದೆ.

ಕಳೆದ ಎರಡು ವರ್ಷಗಳಿಂದ ನಡೆಯು ತ್ತಿದ್ದ ದೇವಾಲಯ ಜೀರ್ಣೋದ್ಧಾರ ಕಾರ್ಯ ಪೂರ್ಣಗೊಂಡಿದ್ದು ಮೇ 5ರಿಂದ ಮೇ 7ರವರೆಗೆ ದೇವಾಲಯ ಲೋಕಾರ್ಪಣೆಯ ಧಾರ್ಮಿಕ ಕಾರ್ಯಕ್ರಮ ನಡೆಯಲಿದೆ. ಮೇ 5ರ ಸಂಜೆ 108 ಕುಂಭಪೂಜಾ, ಗಂಗಾ ಪೂಜಾ ಶ್ರೀ ಗಣಪತಿ ಪೂಜೆ ಜೊತೆಗೆ ಹೋಮ ಹವನಾದಿಗಳು ನಡೆ ಯಲಿವೆ. ಮೇ 6ರಂದು ಬೆಳಿಗ್ಗೆ ವಾಸ್ತು ಪೂಜೆ ಕಳಸ ಸ್ಥಾಪನೆ ಪರಿವಾರ ದೇವತೆ ಗಳಿಗೆ ವಿಶೇಷ ಪೂಜಾದಿ ಕಾರ್ಯಕ್ರಮ ಸಂಜೆ ದುರ್ಗ ಮಂಡಲ ಪೂಜಾ, ನವ ದುರ್ಗಾ ಹೋಮ, ಲಲಿತಾ ಸಹಸ್ರನಾಮ ಪಾರಾಯಣ, ಕುಂಕುಮಾರ್ಚನೆ ನಂತರ ಮಹಾಮಂಗಳಾರತಿ ನಂತರ ತೀರ್ಥ ಪ್ರಸಾದ ವಿನಿಯೋಗ ನಡೆಯಲಿದೆ.

ಮೇ 7ರಂದು ಅಕ್ಷಯ ತದಿಗೆಯಂದು ಪ್ರಾತಃ ಕಾಲ 5.30ಕ್ಕೆ ಅಮ್ಮನವರಿಗೆ ಕ್ಷೀರಾಭಿಷೇಕ, ಪರಿಮಳೋದಕ ಪುಷ್ಪಾಭಿ ಷೇಕ 108 ಕುಂಭಾಭಿಷೇಕ ನಡೆಸಿ 10.50ಕ್ಕೆ ಕೆ.ಬಿದರೆ ದೊಡ್ಡಮಠದ ಶ್ರೀ ಪ್ರಭುಕುಮಾರ ಶಿವಾಚಾರ್ಯ ಸ್ವಾಮೀಜಿ ನೂತನ ಗೋಪುರಕ್ಕೆ ಕಳಸ ಸ್ಥಾಪನೆ ಮಾಡಲಿ ದ್ದಾರೆ. ಮಧ್ಯಾಹ್ನ 12.30ಕ್ಕೆ ಮಹಾಮಂಗ ಳಾರತಿ ಅನ್ನ ಸಂತರ್ಪಣೆ ನಡೆಯಲಿದೆ.

ಎರಡು ದಿನಗಳ ನಂತರ ಮೇ 10, 11, 12ರಂದು ಗ್ರಾಮದೇವತೆಗಳ, ಶ್ರೀಜೇನು ಕಲ್ ಸಿದ್ದೇಶ್ವರ, ಶ್ರೀಜವರಲಿಂಗೇಶ್ವರ ಹಾಗೂ ಸುತ್ತ್ತಲ ಗ್ರಾಮಗಳ ದೇವತೆಗಳ ಬಾನ, ಉತ್ಸವ, ಕೊಂಡೋತ್ಸವ ಹಾಗೂ ಮಹಾರಥೋತ್ಸವ ಜರುಗಲಿದೆ. ಮೂರು ದಿನಗಳ ಕಾಲ ನಡೆ ಯುವ ಈ ಧಾರ್ಮಿಕ ಕಾರ್ಯಕ್ರಮದಲ್ಲಿ ಹಾಗೂ ಜಾತ್ರಾ ಮಹೋ ತ್ಸವದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರು ಪಾಲ್ಗೊಂಡು ಶ್ರೀ ಅಮ್ಮನವರ ಕೃಪೆಗೆ ಪಾತ್ರರಾಗಬೇಕಾಗಿ ಗ್ರಾಮದ ಗುಡಿಗೌಡರಾದ ಪ್ರಭಾಕರ್ ಹಾಗೂ ಗ್ರಾಮಸ್ಥರು ಮನವಿ ಮಾಡಿದ್ದಾರೆ.