ಶ್ರೀ ನಟರಾಜ ಮಹಿಳಾ ವಸತಿ ಕಾಲೇಜಲ್ಲಿ  ಜಾಣ-ಜಾಣೆಯರ ಬಳಗ ಉದ್ಘಾಟನೆ

ಮೈಸೂರು: ಕನ್ನಡ ಪುಸ್ತಕ ಪ್ರಾಧಿ ಕಾರ, ಬೆಂಗಳೂರು ಹಾಗೂ ಶ್ರೀ ನಟರಾಜ ಮಹಿಳಾ ವಸತಿ ಪ್ರಥಮ ದರ್ಜೆ ಕಾಲೇಜು ಸಹಯೋಗದೊಂದಿಗೆ “ಜಾಣ-ಜಾಣೆಯರ ಬಳಗದ ಉದ್ಘಾಟನೆ ಮತ್ತು ನನ್ನ ಮೆಚ್ಚಿನ ಪುಸ್ತಕ ವಿದ್ಯಾರ್ಥಿನಿಯರ ಅಭಿಪ್ರಾಯ ಮಂಡನೆ ಸ್ಪರ್ಧೆ” ಹಮ್ಮಿಕೊಳ್ಳಲಾಗಿತ್ತು.

ಕಾರ್ಯಕ್ರಮವನ್ನು ಮಹಿಳಾ ಚಿಂತಕ ರಾದ ಡಾ.ಚಂದ್ರಮತಿ ಸೋಂದಾ ಉದ್ಘಾ ಟಿಸಿ ಮಾತನಾಡುತ್ತಾ, ವಿದ್ಯಾರ್ಥಿಗಳು ತಮ್ಮ ಮನಸ್ಸಿನ ಭಾವನೆಗಳನ್ನು ಹೊರ ಹಾಕು ವುದು ತಮ್ಮ ಮಾತೃಭಾಷೆಯಲ್ಲಿ. ಹಾಗೆಯೇ ಕರ್ನಾಟಕದಲ್ಲಿ ನಮ್ಮ ಮಾತೃಭಾಷೆ ಕನ್ನಡವಾಗಿದ್ದು, ಅದನ್ನು ನಮ್ಮ ಉಸಿರ ನ್ನಾಗಿ ಮಾಡಿಕೊಳ್ಳಬೇಕು, ಬೆಳೆಸಬೇಕು. ಪ್ರತಿಯೊಬ್ಬರು ಸಂಸ್ಕಾರಯುತವಾಗಿ ಮಾನ ವೀಯತೆಯಿಂದ ಜೀವನ ನಡೆಸಬೇಕಾದರೆ ಹೆಚ್ಚು ಹೆಚ್ಚು ಕವನ, ಕಥೆ, ನಾಟಕ, ಕಾದಂ ಬರಿ, ಪ್ರವಾಸ ಸಾಹಿತ್ಯ, ಜೀವನ ಚರಿತ್ರೆಯನ್ನು ಓದಬೇಕು. ಪ್ರಸ್ತುತ ಯುವ ಜನಾಂಗ ಮೊಬೈಲ್, ವಾಟ್ಸಪ್‍ಗಳಲ್ಲಿ ತಲ್ಲೀನರಾಗದೆ, ಅವುಗಳನ್ನು ಅಗತ್ಯಕ್ಕೆ ತಕ್ಕಂತೆ ಉಪಯೋಗಿ ಸಿಕೊಂಡು, ಪುಸ್ತಕವನ್ನು ಓದುವ ಹವ್ಯಾಸ ಬೆಳೆಸಿಕೊಳ್ಳಬೇಕು ಎಂದರು.

ಜಾಣ-ಜಾಣೆಯರ ಬಳಗದ ಸಂಚಾ ಲಕ ಹಾಗೂ ಕನ್ನಡ ವಿಭಾಗದ ಮುಖ್ಯಸ್ಥ ಜಿ. ಪ್ರಸಾದಮೂರ್ತಿ ಪ್ರಾಸ್ತಾವಿಕ ನುಡಿಯ ನ್ನಾಡಿ, ಕನ್ನಡ ಪುಸ್ತಕ ಪ್ರಾಧಿಕಾರವು ಕೈಗೊಂಡಿ ರುವ ಜಾಣ-ಜಾಣೆಯರ ಬಳಗದ ಉದ್ದೇಶ ಮತ್ತು ಆಶಯವನ್ನು ಹಂಚಿಕೊಂಡರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿ ಸಿದ್ದ ಪ್ರಾಂಶುಪಾಲರಾದ ಡಾ. ಎಂ. ಶಾರದ ಮಾತನಾಡುತ್ತಾ, ವಿದ್ಯಾರ್ಥಿಗಳು ಸಮಸ್ಯೆಗಳಿಗೆ ಹೆದರದೆ, ಅವುಗಳನ್ನು ಧೈರ್ಯ ವಾಗಿ ಎದುರಿಸಬೇಕಾದರೆ ಸಾಹಿತ್ಯವನ್ನು ಹೆಚ್ಚು ಹೆಚ್ಚಾಗಿ ಅಧ್ಯಯನ ಮಾಡಬೇಕು. ಇದರಿಂದ ಪ್ರಬುದ್ಧರಾಗಿ ನಮ್ಮ ವ್ಯಕ್ತಿತ್ವವನ್ನು ರೂಪಿಸಿಕೊಳ್ಳಬಹುದು ಎಂದು ಕರೆ ನೀಡಿ ದರು. ಕಾರ್ಯಕ್ರಮದಲ್ಲಿ ಸುಮಾರು 20 ವಿದ್ಯಾರ್ಥಿಗಳು ವಿವಿಧ ಪುಸ್ತಕಗಳ ಮೇಲೆ ತಮ್ಮ ಅಭಿಪ್ರಾಯವನ್ನು ಮಂಡಿಸಿದರು.
ಕಾರ್ಯಕ್ರಮದಲ್ಲಿ ಸಹಾಯಕ ಪ್ರಾಧ್ಯಾ ಪಕ ರಾದ ಶ್ರೀಮತಿ ಎಂ.ಎಸ್. ಸಂಧ್ಯಾ ರಾಣಿ, ಶ್ರೀಮತಿ ಪವಿತ್ರ, ಟಿ.ಬಸಪ್ಪ ಹೆಚ್.ಬಿ. ತೀರ್ಪುಗಾರರಾಗಿ ಭಾಗವಹಿಸಿದ್ದರು. ಕು.ಮಹಿಮಾ ಮಹೇಶ್ ಪ್ರಾರ್ಥಿಸಿದರೆ, ಚೈತ್ರ ಸ್ವಾಗತಿಸಿದರು, ಅನುಷಾ ವಂದಿಸಿದರೆ, ಕು. ಲಾವಣ್ಯ ಕಾರ್ಯಕ್ರಮವನ್ನು ನಿರೂಪಿಸಿದರು.