ಮೈಸೂರು: “ಅಹಂ ಬ್ರಹ್ಮಾಸ್ಮಿ” (ನನ್ನೊಳಿರುವ ಆತ್ಮವೇ ಪರ ಬ್ರಹ್ಮ), “ತತ್ ತ್ವಮ್ ಅಸಿ” (ನೀನು ಅದೇ ಆತ್ಮದಿಂದ ಆಗಿರುವೆ) ಎಂಬುದು ಅದ್ವೈತ ತತ್ವದ ಮೂಲ ಮಂತ್ರ. ಇದಲ್ಲದೇ ಆದಿ ಶಂಕರಾಚಾರ್ಯರು ಪರಮಾತ್ಮ, ಅಂದರೆ “ಆತ್ಮ”, ಅದು ಮಾತ್ರ ಸತ್ಯ; ಈ ಜಗತ್ತಿನಲ್ಲಿ ಮಿಕ್ಕೆಲ್ಲವೂ ಮಿಥ್ಯ ಹಾಗೂ “ಸರ್ವಂ ಬ್ರಹ್ಮಮಯಂ ಜಗತ್” (ಈ ಜಗತ್ತಿನಲ್ಲಿ ಎಲ್ಲವೂ ಪರಮಾತ್ಮ ನಿಂದಲೇ ಆವರಿಸಲ್ಪಟ್ಟಿದೆ) ಎಂಬು ದಾಗಿ ಜಗತ್ತಿಗೆ ಸಾರಿದರು.
ಶ್ರೀ ಶಂಕರಾಚಾರ್ಯರ ಜಯಂತಿ ಹಿನ್ನೆಲೆಯಲ್ಲಿ ಮೈಸೂರು ಅರಮನೆ ಮಂಡಳಿ ಉಪ ನಿರ್ದೇಶಕ ಸುಬ್ರಹ್ಮಣ್ಯ ಅವರು, ಕಚೇರಿ ಸಿಬ್ಬಂದಿಗಳನ್ನು ಉದ್ದೇ ಶಿಸಿ ಮಾತನಾಡಿದರು. ಸನಾತನ ಭಾರತದ ಸಂಸ್ಕೃತಿಯನ್ನು ಜಗತ್ತಿಗೆ ಸಾರಿ ಹೇಳಿದ ಆಚಾರ್ಯತ್ರಯರಲ್ಲಿ ಶಂಕರಾ ಚಾರ್ಯರು ಮೊದಲಿಗರು (ಆದಿ ಶಂಕರರು). ಈ ಅಲ್ಪಾವಧಿಯಲ್ಲಿಯೇ ದೇಶದ ಮೂಲೆ ಮೂಲೆಗಳಿಗೆ ಸಂಚರಿಸಿ ಗೀತಾಚಾರ್ಯ ಶ್ರೀಕೃಷ್ಣನ ಸಿದ್ಧಾಂತ ವಾದ “ಅದ್ವೈತ” ತತ್ವವನ್ನು ಪ್ರತಿಪಾದಿಸುತ್ತ ಜಗತ್ತಿಗೆ ಸಾರಿ, ಹಲವಾರು ಮತಗಳಿಂದ ದಾಳಿಗೊಳಗಾಗುತ್ತಿದ್ದ ಸನಾ ತನ ಹಿಂದೂ ಧರ್ಮವನ್ನು ಪುನರುತ್ಥಾನ ಗೊಳಿಸಿದರು. ಎಲ್ಲಾ ಮತಗಳನ್ನು ಒಗ್ಗೂ ಡಿಸಿ, ಷಣ್ಮತ ಪ್ರತಿಷ್ಠಾಪಕರಾದರು. ಆದಿ ಶಂಕರರು ಭಗವದ್-ಗೀತೆ, ಉಪ ನಿಷತ್ ಹಾಗೂ ಬ್ರಹ್ಮ ಸೂತ್ರಗಳಿಗೆ ಭಾಷ್ಯ ಬರೆದ ಮೊದಲ ಆಚಾರ್ಯರಾದರು.
ಇವರು 8ನೇ ಶತಮಾನದಲ್ಲಿ ಕೇರಳದ ಕಾಲಡಿ ಎಂಬ ಹಳ್ಳಿಯ ಒಂದು ಬಡ ವಿಶ್ವಬ್ರಾಹ್ಮಣ ಕುಟುಂಬದಲ್ಲಿ ಜನಿ ಸಿದರು. ತಂದೆ ಶಿವಗುರು, ತಾಯಿ ಆರ್ಯಾಂಬೆ. ದೇಶದ ಮೂಲೆ ಮೂಲೆ ಗಳಲ್ಲಿ ಸಂಚರಿಸಿದ ಶಂಕರರು ಅನೇಕ ರನ್ನು ಅಧ್ಯಾತ್ಮಕ್ಕೆ ಸಂಬಂಧಪಟ್ಟ ವಾದ ದಲ್ಲಿ ಸೋಲಿಸಿದರು.
ಇವುಗಳಲ್ಲಿ ಮಂಡನ ಮಿಶ್ರರನ್ನು ವಾದದಲ್ಲಿ ಸೋಲಿಸಿದ ಘಟನೆ ಬಹು ಪ್ರಮುಖವಾದುದು. ಮಂಡನ ಮಿಶ್ರರೇ ನಂತರ ಶ್ರೀ ಸುರೇಶ್ವರಾಚಾರ್ಯ ಎಂಬ ಹೆಸರಿನಿಂದ ಪ್ರಸಿದ್ಧ ಶಿಷ್ಯರಾದರು.
ದೇಶದ ನಾಲ್ಕು ದಿಕ್ಕುಗಳಲ್ಲಿ ನಾಲ್ಕು ಪೀಠ(ಮಠ)ಗಳನ್ನು ಸ್ಥಾಪಿಸಿದರು. ಉತ್ತರದಲ್ಲಿ: ಬದರಿ ಪೀಠ- ಉತ್ತರ ಜ್ಯೋತಿರ್ ಮಠ, ದಕ್ಷಿಣ ದಲ್ಲಿ: ಶೃಂಗೇರಿ ಪೀಠ- ದಕ್ಷಿಣ ಶಾರದಾ ಮಠ, ಪೂರ್ವ ದಲ್ಲಿ: ಪುರಿ ಪೀಠ- ಪೂರ್ವಾ ಗೋವರ್ಧನ ಮಠ, ಪಶ್ಚಿಮ ದಲ್ಲಿ ದ್ವಾರಕಾ ಪೀಠ – ಪಶ್ಚಿಮ ಮಠ ನೆಲೆಗೊಳಿಸಿದರು. ಪ್ರತಿಯೊಂದು ಪೀಠಕ್ಕೂ ತಮ್ಮ ಒಬ್ಬೊಬ್ಬ ಶಿಷ್ಯರನ್ನು ಪೀಠಾಧಿಪತಿಯನ್ನಾಗಿ ಸಿದರು.”ಅದ್ವೈತ” ಸಿದ್ಧಾಂತವನ್ನು ಜನ ಪ್ರಿಯಗೊಳಿಸಿದರು. ಶಂಕರರು ಬಾದ ರಾಯಣರ “ಬ್ರಹ್ಮ ಸೂತ್ರ” (ವೇದಾಂತ ಸೂತ್ರ)ಗಳಿಗೆ ಭಾಷ್ಯವನ್ನು ರಚಿಸಿದರು. ಉಪನಿಷತ್ತುಗಳಿಗೆ ವ್ಯಾಖ್ಯಾನ ನೀಡಿ ದರು; ಅಲ್ಲದೆ ಶ್ರೀಮದ್ಭಗವದ್ಗೀತೆಗೆ ಭಾಷ್ಯವನ್ನು ಬರೆದು ಪ್ರಸ್ಥಾನತ್ರಯ ಗಳನ್ನು ಪೂರ್ಣಗೊಳಿಸಿದರು. ಇವರು ರಚಿಸಿದ “ಭಜ ಗೋವಿಂದಮ್” ಸ್ತೋತ್ರ ಅತ್ಯಂತ ಪ್ರಸಿದ್ಧವಾದುದು ಎಂದು ಸುಬ್ರಹ್ಮಣ್ಯ ನೆನಪಿಸಿದರು.