ಶಾಸಕ ಬಿ.ಹರ್ಷವರ್ಧನ್‍ಗೆ ಶ್ರೀ ಶ್ರೀಕಂಠೇಶ್ವರಸ್ವಾಮಿ ದೇವಸ್ಥಾನದಲ್ಲಿ ಅವ್ಯವಸ್ಥೆ, ಅವ್ಯವಹಾರ ದಿವ್ಯ ದರ್ಶನ

ನಂಜನಗೂಡು:  ಇಲ್ಲಿನ ಪ್ರಸಿದ್ಧ ಶ್ರೀ ಶ್ರೀಕಂಠೇಶ್ವರಸ್ವಾಮಿ ದೇವಸ್ಥಾನ ಒಳ ಮತ್ತು ಹೊರಗಡೆ ಪರಿಸರ, ಭಕ್ತಾದಿಗಳ ಸೌಕರ್ಯ, ಇನ್ನಿತರ ಸಮಸ್ಯೆಗಳ ಬಗ್ಗೆ ತಿಳಿದುಕೊಳ್ಳಲು ನೂತನ ಶಾಸಕ ಬಿ.ಹರ್ಷವರ್ಧನ್ ಅನಿರೀಕ್ಷಿತ ಭೇಟಿ ನೀಡಿದ್ದು, ದೇವಾ ಲಯದ ಸುತ್ತ ಅವ್ಯವಸ್ಥೆಗಳ ಅಗರ, ಹೆಜ್ಜೆ-ಹೆಜ್ಜೆಗೂ ಸಮಸ್ಯೆಗಳ ಸರಮಾಲೆ, ಅತಿಥಿ ಗೃಹದಲ್ಲಿ ಅವ್ಯವ ಹಾರ ದರ್ಶನವಾಯಿತು. ಇವುಗಳನ್ನು ಶೀಘ್ರದಲ್ಲೇ ಸರಿಪಡಿಸಬೇಕೆಂದು ದೇವಸ್ಥಾನ ಕಾರ್ಯನಿರ್ವಾಹಕ ಅಧಿಕಾರಿಗೆ ಅವರು ಆದೇಶಿಸಿದರು.

ಶ್ರೀಕಂಠೇಶ್ವರ ದೇವಸ್ಥಾನಕ್ಕೆ ಪ್ರತಿ ವರ್ಷ ಭಕ್ತಾದಿಗಳಿಂದ ಕೋಟ್ಯಾಂತರ ರೂ.ಗಳ ಆದಾಯ ಬಂದು ರಾಜ್ಯದಲ್ಲೆ ಮುಜರಾಯಿ ದೇವಸ್ಥಾನ ವ್ಯಾಪ್ತಿಯಲ್ಲಿ ಅತಿ ಹೆಚ್ಚು ಆದಾಯವಿರುವ 3ನೇ ದೇವಸ್ಥಾನ ವಾಗಿದ್ದರೂ ಭಕ್ತಾದಿಗಳಿಂದ ಮೂಲಭೂತ ಸೌಕರ್ಯ ಗಳ ಬಗ್ಗೆ ಅಪಸ್ವರ, ಭಕ್ತಾದಿಗಳಿಗೆ ತಾರತಮ್ಯ, ಅವ್ಯವ ಹಾರದ ಬಗ್ಗೆ ಆರೋಪ ಬರುತ್ತಿರುವ ಹಿನ್ನೆಲೆಯಲ್ಲಿ ಗುರುವಾರ ಶಾಸಕರು ದೇವಸ್ಥಾನ, ದಾಸೋಹ ಭವನ, ಗಿರಿಜಾ ಕಲ್ಯಾಣ ಮಂಟಪ ವಸತಿ ಗೃಹ, ದೇವಸ್ಥಾನ ಸುತ್ತ ತಲೆ ಎತ್ತಿರುವ ಅಕ್ರಮ ಕಟ್ಟಡಗಳು, ಅಕ್ರಮ ಮಳಿಗೆಗಳು, ಅಶುಚಿತ್ವ, ಕಪಿಲ ನದಿಯ ದಡದಲ್ಲಿ ಭಕ್ತಾದಿಗಳಿಗೆ ಸ್ನಾನ ಮಾಡಲು ಸೌಲಭ್ಯ ವಿಲ್ಲದಿರುವುದು, ತಾತ್ಕಾಲಿಕವಾಗಿ ನಿರ್ಮಿಸಿರುವ ಶೌಚಾಲಯದಿಂದ ಮಲಮೂತ್ರ ನೇರವಾಗಿ ಕಪಿಲ ನದಿಗೆ ಬಿಡುತ್ತಿರುವುದನ್ನು ವೀಕ್ಷಿಸಿ ಅಧಿಕಾರಿಗಳನ್ನು ತೀವ್ರ ತರಾಟೆ ತೆಗೆದುಕೊಂಡರು. ನಂತರ ಸುದ್ದಿಗಾರ ರೊಂದಿಗೆ ಮಾತನಾಡಿ, ದೇಗುಲದ ಸುತ್ತ ತಲೆ ಎತ್ತಿರುವ ಅಕ್ರಮ ಕಟ್ಟಡಗಳ ಬಗ್ಗೆ ದಾಖಲಾತಿ ಪರಿಶೀಲಿಸಿ ಕ್ರಮ ಕೈಗೊಳ್ಳುತ್ತೇನೆ. ದೇಗುಲದ 240 ನೌಕರರು ಕರ್ತವ್ಯ ನಿರ್ವಹಿಸುತ್ತಿದ್ದು, ಹಾಜರಾತಿ ಪುಸ್ತಕ ತರಿಸಿ ಪರಿಶೀಲಿಸಿದಾಗ ಮೇಲ್ನೋಟಕ್ಕೆ ಅಸಮರ್ಪಕವಾಗಿದ್ದು, ನೌಕರ ಹಾಜರಾತಿ ಆಧುನಿಕರಣಗೊಳಿಸುವಂತೆ ಸೂಚಿಸಿ ದ್ದೇನೆ. ಮತ್ತು ಕಪಿಲಾ ನದಿಯ ಸುತ್ತ ಪರಿಸರ ಮತ್ತು ದೇವಸ್ಥಾನ ಆವರಣ ಶುಚಿಯಾಗಿರಬೇಕು ಹಾಗೂ ದೇಗುಲದ ಸನ್ನಿಧಿಯಲ್ಲಿರುವ ವಿಐಪಿ ಅತಿಥಿ ಗೃಹದಲ್ಲಿ ಸುರೇಶ್ ಎಂಬಾತನ ಹೆಸರಿನಲ್ಲಿ ಪದೇ ಪದೇ ಮುಂಗಡವಾಗಿ ಬುಕಿಂಗ್ ಆಗಿದ್ದು, ಈ ಬಗ್ಗೆಯೂ ತನಿಖೆ ಆದೇಶಿಸಿದ್ದೇನೆ ಎಂದರಲ್ಲದೇ ಬರುವ ಭಕ್ತಾದಿಗಳಿಗೆ ಸೌಕರ್ಯ ಕಲ್ಪಿಸಲು ಎಲ್ಲಾ ರೀತಿಯ ಕ್ರಮ ಕೈಗೊಳ್ಳುವಂತೆ ಕಾರ್ಯ ನಿರ್ವಾಹಕ ಅಧಿಕಾರಿ ಕುಮಾರಸ್ವಾಮಿ ಯವರಿಗೆ ಸೂಚಿಸಿರುವುದಾಗಿ ತಿಳಿಸಿದರು.

ಇದೇ ಸಂದರ್ಭದಲ್ಲಿ ಬಿಜೆಪಿ ರಾಜ್ಯ ಎಸ್.ಟಿ. ಮೋರ್ಚಾ ಉಪಾಧ್ಯಕ್ಷ ಸಿ.ಚಿಕ್ಕರಂಗನಾಯಕ, ತಾ.ಪಂ.ಅಧ್ಯಕ್ಷ ಬಿ.ಎಸ್.ಮಹದೇವಪ್ಪ, ಸದಸ್ಯರಾದ ಹೆಮ್ಮರಗಾಲ ಶಿವಣ್ಣ, ಬಿ.ಎಸ್.ರಾಮು, ಸಿ.ಎಂ.ಮಹದೇವಯ್ಯ, ಸಿದ್ದರಾಜೇಗೌಡ, ಶ್ಯಾಂಪಟೇಲ್, ಡಿ.ಪಿ.ಲೋಕೇಶ್, ದೇವರಸನಹಳ್ಳಿ ಮಹದೇವು, ನಿಧಿ ಸುರೇಶ್, ಬದನವಾಳು ಮಹೇಶ್, ಕಪಿಲೇಶ್, ಸಂಜಯ್ ಶರ್ಮ, ಉಮೇಶ್, ಹೆಜ್ಜಿಗೆ ನಾಗೇಂದ್ರ, ವಕೀಲರಾದ ಮಹೇಶ್ ಬಾಬು, ಪ್ರಜ್ವಲ್ ಶಶಿ, ಸಂತೋಷ್, ಧೀರಜ್, ಬ್ಯಾಳಾರು ಹುಂಡಿ ಮಲ್ಲಿಕಾರ್ಜುನಸ್ವಾಮಿ, ಡಿ.ಪಿ.ನಾಗರಾಜು, ಗಿರೀಶ್, ಕೃಷ್ಣಂರಾಜು, ಶಿವಮೂರ್ತಿನಾಯಕ್, ಉಮೇಶ್, ವಳಗೆರೆ ಪುಟ್ಟಸ್ವಾಮಿ, ಕಾರ್ಯ ನಿರ್ವಾಹಕ ಅಧಿಕಾರಿ ಕುಮಾರಸ್ವಾಮಿ, ನಗರಸಭಾ ಆಯುಕ್ತ ವಿಜಯ, ಈಈ ಬಾಸ್ಕರ್ ಆರ್.ಓ. ವೆಂಕಟೇಶ್, ಎಇಇ ಜಯಕುಮಾರ್. ಇದ್ದರು.