ಶ್ರೀರಾಂಪುರ ಈಗ `ಕಸದ ಪುರ’!

ಮೈಸೂರು: ಶ್ರೀರಾಂಪುರ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಮಹದೇವಪುರ ಹಾಗೂ ಪರಸಯ್ಯನ ಹುಂಡಿ ಗ್ರಾಮಗಳಲ್ಲಿ ಕಸದ ರಾಶಿ ಬಿದ್ದಿ ದ್ದರೂ ವಿಲೇವಾರಿ ಮಾಡದೇ ನಿರ್ಲಕ್ಷ್ಯ ಮಾಡಲಾಗಿದೆ. ಈ ತ್ಯಾಜ್ಯದಲ್ಲಿ ಪರಿಸರಕ್ಕೆ ಮಾರಕವಾಗುವ ಪ್ಲಾಸ್ಟಿಕ್ ಕಸವೇ ಬಹು ತೇಕ ಇದ್ದು, ಹೀಗಿದ್ದರೂ ಸ್ಥಳೀಯ ಆಡಳಿತ ಕಂಡೂ ಕಾಣದಂತೆ ಕಣ್ಮುಚ್ಚಿ ಕುಳಿತಿದೆ.

ಈ ಗ್ರಾಮಗಳ ರಸ್ತೆಬದಿಗಳಲ್ಲಿ ಕಸದ ರಾಶಿ ಬಿದ್ದಿದ್ದು, ಮಳೆ ನೀರಿನೊಂದಿಗೆ ಅನೈ ರ್ಮಲ್ಯ ತಾಂಡವವಾಡುತ್ತಿದೆ. ಇದರಿಂದ ರೋಗ-ರುಜಿನ ಹರಡುವ ಭೀತಿಯೂ ಎದುರಾಗಿದೆ. ಹೀಗಿದ್ದರೂ ಸಂಬಂಧಿಸಿ ದವರು ವಿಲೇವಾರಿಗೆ ಮುಂದಾಗುತ್ತಿಲ್ಲ ಎಂಬುದು ಸ್ಥಳೀಯರ ಆಕ್ರೋಶವಾಗಿದೆ.

ಈ ಹಿಂದೆಯೂ ರಾಶಿ ರಾಶಿ ಕಸ ಬಿದ್ದಿತ್ತು. ಆಗ ಶ್ರೀರಾಂಪುರ ಗ್ರಾಮ ಪಂಚಾಯಿತಿ ಎದುರು ಪ್ರತಿಭಟನೆಗೆ ಮುಂದಾದಾಗ ಕಸ ವಿಲೇವಾರಿ ಮಾಡಲಾಯಿತು. ಇದೀಗ ಮತ್ತೆ ಸಮಸ್ಯೆ ಉದ್ಭವಿಸಿದೆ ಎಂದು ಮೈಸೂರು ತಾಲೂಕು ಪಂಚಾಯಿತಿ (ಶ್ರೀರಾಂಪುರ) ಸದಸ್ಯ ಹನುಮಂತು ಕಿಡಿಕಾರಿದ್ದಾರೆ.

2018ರ ಡಿ.13ರಂದು ಶ್ರೀರಾಂಪುರ ಗ್ರಾಮ ಪಂಚಾಯಿತಿ ಮುಂದೆ ಪ್ರತಿಭಟನೆಗೆ ಮುಂದಾ ಗಿದ್ದೆ. ಈ ವೇಳೆ ಪಂಚಾಯಿತಿ ಅಧ್ಯಕ್ಷರು, ಕಾರ್ಯದರ್ಶಿ ಹಾಗೂ ತಾಪಂ ಇಓ ಅವರು ಮನವಿ ಮಾಡಿದ ಹಿನ್ನೆಲೆಯಲ್ಲಿ ಪ್ರತಿಭಟನೆಯಿಂದ ಹಿಂದೆ ಸರಿಯಲಾ ಯಿತು. ಬಳಿಕ 15 ದಿನಗಳು ಕಸ ವಿಲೇ ವಾರಿ ಮಾಡಿದರು ಎಂದರು. ತದನಂತರ ಕಸ ವಿಲೇವಾರಿ ಕೈಬಿಟ್ಟು ನಿರ್ಲಕ್ಷ್ಯ ವಹಿಸಿ ದ್ದಾರೆ. ಕಸ ವಿಲೇವಾರಿಗೆ ಜಿಪಂ ಸಿಇಓ, ತಾಲೂಕು ಪಂಚಾಯಿತಿ ಇಓ ಹಾಗೂ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗೆ ಮನವಿ ಸಲ್ಲಿಸಿದ್ದೇನೆ. ವಾರದೊಳಗೆ ಕಸ ವಿಲೇವಾರಿ ಮಾಡುವ ಭರವಸೆ ನೀಡಿದ್ದಾರೆ. ಮಾಡದಿದ್ದರೆ ಜೂ.6ರಂದು ಶ್ರೀರಾಂಪುರ ಪಂಚಾಯಿತಿ ಎದುರು ಅನಿರ್ದಿಷ್ಟಾವಧಿ ಪ್ರತಿಭಟನೆ ನಡೆ ಸುವುದಾಗಿ ಹನುಮಂತು ಎಚ್ಚರಿಸಿದ್ದಾರೆ.