ಕರ್ನಾಟಕ ಒನ್ ಕೇಂದ್ರಗಳ ಮೂಲಕ ಆಸ್ತಿ ತೆರಿಗೆ ಪಾವತಿಸಲು ಸೇವೆ ಆರಂಭ

ಮೈಸೂರು, ಜೂ.12-ಸಾರ್ವಜನಿಕರಿಗೆ ಅನುಕೂಲವಾಗುವ ನಿಟ್ಟಿನಲ್ಲಿ ಮೈಸೂರು ಮಹಾನಗರ ಪಾಲಿಕೆ ವತಿಯಿಂದ ಆಸ್ತಿ ತೆರಿಗೆಯನ್ನು ಕರ್ನಾಟಕ ಒನ್ ಕೇಂದ್ರಗಳಲ್ಲಿ ಅಥವಾ ವೈಬ್ ಸೈಟ್ ಮೂಲಕ ಆಸ್ತಿ ತೆರಿಗೆ ಪಾವತಿಸಲು ಸೇವೆ ಆರಂಭವಾಗಿದೆ. ಮೈಸೂರು ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ರುವ ಗೋಕುಲಂ, ರಾಮಕೃಷ್ಣನಗರ, ನ್ಯೂ ಶೇಷಾದ್ರಿ ಐಯ್ಯರ್ ರೋಡ್, ಜಯನಗರ( ಕೃಷ್ಣಮೂರ್ತಿಪುರಂ) ಹಾಗೂ ಸಿದ್ದಾರ್ಥ ಬಡಾವಣೆಯಲ್ಲಿ ಕರ್ನಾಟಕ ಒನ್ ಕೇಂದ್ರ ಗಳಲ್ಲಿ ಆಸ್ತಿ ತೆರಿಗೆ ಪಾವತಿಸುವ (ಆಸ್ತಿ ತೆರಿಗೆ ವಿವರ ಪಟ್ಟಿ, ಸ್ಯಾಸ್ ಫಾರ್ಮ-1 ಮುದ್ರಿಸುವ ಸೇವೆಯನ್ನು ಒಳಗೊಂಡಂತೆ) ಸೇವೆಯನ್ನು ಜೂನ್ 9ರಿಂದ ಪ್ರಾರಂಭಿಸಲಾಗಿದೆ.

ಕರ್ನಾಟಕ ಒನ್ ಕೇಂದ್ರಗಳು ಗಾಂಧಿ ಜಯಂತಿ, ಕಾರ್ಮಿಕರ ದಿನಾಚರಣೆ, ಕನ್ನಡ ರಾಜ್ಯೋತ್ಸವ, ಸ್ವಾತಂತ್ರ್ಯ ದಿನಾಚರಣೆ, ಗಣರಾಜ್ಯೋತ್ಸವ ಮತ್ತು ಚುನಾವಣೆ ಮತ ಚಲಾಯಿಸುವ ದಿನ ಹೊರತುಪಡಿಸಿ ಉಳಿದ ಎಲ್ಲಾ ದಿನಗಳಂದು ಪ್ರತಿದಿನ ಬೆಳಿಗ್ಗೆ 8 ಗಂಟೆಯಿಂದ ಸಂಜೆ 7ರವರೆಗೆ ಕಾರ್ಯ ನಿರ್ವಹಿಸುತ್ತವೆ. ನಾಗರಿಕರು ನಗದು, ಚೆಕ್, ಡಿಡಿ, ಕ್ರೆಡಿಟ್, ಡೆಬಿಟ್ ಕಾರ್ಡ್, ಪೇಟಿಯಂ, ಯುಪಿಐ ಮೂಲಕ ಪಾವತಿ ಸಬಹುದಾಗಿದೆ ಅಥವಾ ಕರ್ನಾಟಕ ಒನ್ ಕೇಂದ್ರಗಳ ವೆಬ್‍ಸೈಟ್ www.karnatakaone.gov.in ಮೂಲಕ ಆಸ್ತಿ ತೆರಿಗೆ ಪಾವತಿಸಲು ಕೋರಲಾಗಿದೆ.

ಹೆಚ್ಚಿನ ಮಾಹಿತಿಗಾಗಿ ಗೋಕುಲಂ- 0821- 2411490, ರಾಮಕೃಷ್ಣನಗರ- 0821- 2460727, ನಜರಾಬಾದ್-0821-2430103, ನ್ಯೂ ಶೇಷಾದ್ರಿ ಐಯ್ಯರ್ ರೋಡ್- 0821-2421042, ಜಯನಗರ (ಕೃಷ್ಣಮೂರ್ತಿಪುರಂ)- 0821-2330042, ಸಿದ್ದಾರ್ಥ ಬಡಾವಣೆ- 0821-2470046 ಅನ್ನು ಸಂಪರ್ಕಿಸುವಂತೆ ಇಡಿಸಿಎಸ್ ನಿರ್ದೇಶನಾಲಯದ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.