ಮೈಸೂರು, ಜೂ.12-ಸಾರ್ವಜನಿಕರಿಗೆ ಅನುಕೂಲವಾಗುವ ನಿಟ್ಟಿನಲ್ಲಿ ಮೈಸೂರು ಮಹಾನಗರ ಪಾಲಿಕೆ ವತಿಯಿಂದ ಆಸ್ತಿ ತೆರಿಗೆಯನ್ನು ಕರ್ನಾಟಕ ಒನ್ ಕೇಂದ್ರಗಳಲ್ಲಿ ಅಥವಾ ವೈಬ್ ಸೈಟ್ ಮೂಲಕ ಆಸ್ತಿ ತೆರಿಗೆ ಪಾವತಿಸಲು ಸೇವೆ ಆರಂಭವಾಗಿದೆ. ಮೈಸೂರು ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ರುವ ಗೋಕುಲಂ, ರಾಮಕೃಷ್ಣನಗರ, ನ್ಯೂ ಶೇಷಾದ್ರಿ ಐಯ್ಯರ್ ರೋಡ್, ಜಯನಗರ( ಕೃಷ್ಣಮೂರ್ತಿಪುರಂ) ಹಾಗೂ ಸಿದ್ದಾರ್ಥ ಬಡಾವಣೆಯಲ್ಲಿ ಕರ್ನಾಟಕ ಒನ್ ಕೇಂದ್ರ ಗಳಲ್ಲಿ ಆಸ್ತಿ ತೆರಿಗೆ ಪಾವತಿಸುವ (ಆಸ್ತಿ ತೆರಿಗೆ ವಿವರ ಪಟ್ಟಿ, ಸ್ಯಾಸ್ ಫಾರ್ಮ-1 ಮುದ್ರಿಸುವ ಸೇವೆಯನ್ನು ಒಳಗೊಂಡಂತೆ) ಸೇವೆಯನ್ನು…