ಕರಿಯಮ್ಮ, ಮಲ್ಲಿಗೆಯಮ್ಮ ಜಾತ್ರಾ ಮಹೋತ್ಸವಕ್ಕೆ ಅದ್ಧೂರಿ ಚಾಲನೆ

ಅರಸೀಕೆರೆ: ನಗರದ ಅಧಿದೇವತೆ ಕರಿಯಮ್ಮ ಹಾಗೂ ಮಲ್ಲಿಗೆಮ್ಮ ದೇವಿಯವರ 50ನೇ ವರ್ಷದ ಜಾತ್ರಾ ಮಹೋ ತ್ಸವಕ್ಕೆ ಸೋಮವಾರ ಸಂಜೆ ಸಹಸ್ರಾರು ಭಕ್ತರು ಸಮ್ಮುಖದಲ್ಲಿ ಅದ್ಧೂರಿ ಚಾಲನೆ ನೀಡಲಾಯಿತು.

ಜಾತ್ರಾ ಮಹೋತ್ಸವದ ಮೊದಲನೇ ದಿನ ಊರ ಒಳಗಿನ ಮಲ್ಲಿಗೆಮ್ಮ ದೇವಾಲಯದಲ್ಲಿ ಮಲ್ಲಿಗೆಮ್ಮ ದೇವಿಗೆ ಮಹಾರುದ್ರಾ ಭಿಷೇಕ, ಅಂಕುರಾರ್ಪಣೆ ಸೇರಿದಂತೆ ಹಲವು ಅಭಿಷೇಕಗಳು ಹಾಗೂ ಅರ್ಚನೆಗಳು ಧಾರ್ಮಿಕ ಕೈಂಕರ್ಯಗಳಂತೆ ನೆರವೇರಿತು. ಸುಮಂಗಲಿಯರು ಅಮ್ಮನಿಗೆ ತಂಬಿಟ್ಟಿನಾರತಿ ಜೊತೆಗೆ ಹೋಳಿಗೆ ಪಾಯಸ ಹೀಗೆ ನಾನಾ ಬಗೆಯ ನೈವೇದ್ಯವನ್ನ ಶ್ರದ್ಧಾಭಕ್ತಿಯಿಂದ ದೇವಿಗೆ ಅರ್ಪಿಸಿದರು. ಸಂಜೆ 7ಕ್ಕೆ ಯಾದಾಪುರದ ಜೇನುಕಲ್ಲು ಸಿದ್ದೇಶ್ವರ ಸ್ವಾಮಿ, ಬಂಡೀಹಳ್ಳಿ ರೇವಣಸಿದ್ದೇಶ್ವರ, ಚಲ್ಲಾಪುರದ ಶ್ರೀಶೈಲ ಮಲ್ಲಿಕಾರ್ಜುನ ಸ್ವಾಮಿ, ಅಂಚೆಕೊಪ್ಪಲಿನ ಮರುಳ ಸಿದ್ದೇಶ್ವರ, ನಗರದ ಗುರುಸಿದ್ದರಾಮೇಶ್ವರ ಸ್ವಾಮಿಯವರ ಸಮ್ಮುಖ ದಲ್ಲಿ ಗುರುಕೆಂಗಲ್ ಸಿದ್ದೇಶ್ವರ ಸ್ವಾಮಿಯವರ ದೇವಸ್ಥಾನದ ಆವರಣ ದಲ್ಲಿ ಕಳಸ ಸ್ಥಾಪನೆ ಮತ್ತು ನೂರೊಂದೆಡೆ ಸೇವೆ ಜರುಗಿತು.

ಬೆಳಿಗ್ಗೆ ಮದುವಣಿಗೆ ಶಾಸ್ತ್ರ, ಕಂಕಣಧಾರಣೆ ಸುವಾಸಿನಿಯರ ಬಾಯಿಬೀಗ, ಬೇವಿನಸೀರೆ ಹಾಗೂ ಮೂಲ ನೈವೇದ್ಯ ನಂತರ ಮಹಾ ಮಂಗಳಾರತಿ ನಡೆಯಿತು. ಮೇ 1ರ ರಾತ್ರಿ 8ಕ್ಕೆ ಭವಾನಿಶಂಕರ ಸ್ವಾಮಿ ದೇವಸ್ಥಾನದಲ್ಲಿ ಗಂಗಾಸ್ನಾನ ನಂತರ ಮೆರವಣಿಗೆಯೊಂದಿಗೆ ಮೂಲ ದೇವಸ್ಥಾನ ಪ್ರವೇಶ ಮತ್ತು ಸಾಂಸ್ಕøತಿಕ ಕಾರ್ಯಕ್ರಮ ನಡೆಯಲಿದೆ. ಮಹಾ ರಥೋತ್ಸವ ಮೇ 2ರ ಬೆಳಿಗ್ಗೆ 11ಕ್ಕೆ ಕರಿಯಮ್ಮ ಮತ್ತು ಶ್ರೀ ಮಲ್ಲಿಗಮ್ಮ ದೇವಿಯವರ ಮಹಾರಥೋತ್ಸವ, ಅನ್ನಸಂತ ರ್ಪಣೆ, ರಾತ್ರಿ 8ಕ್ಕೆ ಮೆರವಣಿಗೆಯೊಂದಿಗೆ ಪುರ ಪ್ರವೇಶ ನಡೆಯಲಿದೆ.

ಆನೆ ಅಂಬಾರಿ: 50 ವರ್ಷದ ಜಾತ್ರಾಮಹೋತ್ಸವದ ಪ್ರಯುಕ್ತ ಮೇ 3ರ ಸಂಜೆ 4 ಗಂಟೆಗೆ ದೇವಿಯವರ ಮೂಲ ದೇವಸ್ಥಾನ ದಿಂದ ಸಕಲ ಬಿರುದಾವಳಿಗಳೊಂದಿಗೆ ಮಂಗಳವಾದ್ಯದೊಂದಿಗೆ ಸಂಸ್ಕøತಿಕ ಕಲಾತಂಡಗಳೊಂದಿಗೆ ನಗರದ ಪ್ರಮುಖ ಬೀದಿ ಗಳೊಂದಿಗೆ ಶ್ರೀ ಕರಿಯಮ್ಮ ಮತ್ತು ಶ್ರೀ ಮಲ್ಲಿಗಮ್ಮ ದೇವರ ಆನೆ ಅಂಬಾರಿ ಉತ್ಸವವನ್ನು ಏರ್ಪಡಿಸಲಾಗಿದೆ ಎಂದು ತಿಳಿಸಿದ್ದಾರೆ.