ಲಕ್ಕೂರು ಶ್ರೀ ಸಂಗಮೇಶ್ವರ ದೇಗುಲ ಲೋಕಾರ್ಪಣೆ

ರಾಮನಾಥಪುರ: ದೇವಾಲಯ ಗಳು ನಮ್ಮ ಸಂಸ್ಕøತಿ ಪರಂಪರೆ ಮತ್ತು ಇತಿ ಹಾಸದ ಮೇಲೆ ಬೆಳಕು ಚೆಲ್ಲುವ ಜೀವಂತ ಸ್ಮಾರಕಗಳಾಗಿವೆ. ಮುಂದಿನ ತಲೆಮಾರಿಗೆ ಪರಂಪರೆ ಉಳಿಸಲು ದೇವಾಲಯಗಳ ಸಂರಕ್ಷಣೆ ಹೊಣೆ ನಮ್ಮೆಲ್ಲರದ್ದಾಗಿದೆ ಎಂದು ಶಾಸಕ ಎ.ಟಿ.ರಾಮಸ್ವಾಮಿ ಹೇಳಿದರು.

ಹೋಬಳಿಯ ಲಕ್ಕೂರು ಗ್ರಾಮದಲ್ಲಿ 60 ಲಕ್ಷ ರೂ. ವೆಚ್ಚದಲ್ಲಿ ಹೊಸದಾಗಿ ನಿರ್ಮಿಸಿದ ಪ್ರಸಿದ್ಧ ಶ್ರೀಸಂಗಮೇಶ್ವರ ಸ್ವಾಮಿ ದೇವಾಲಯದಲ್ಲಿ ಪೂಜೆ ಸಲ್ಲಿ ಸಿದ ಬಳಿಕ ವೇದಿಕೆ ಕಾರ್ಯಕ್ರಮದಲ್ಲಿ ಸನ್ಮಾನ ಸ್ವೀಕರಿಸಿದ ಬಳಿಕ ಮಾತನಾಡಿದ ಅವರು, ಇಂದಿನ ಒತ್ತಡದ ಬದುಕಿನಲ್ಲಿ ದೇವರು ಮತ್ತು ಧರ್ಮದ ಹಾದಿಯಲ್ಲಿ ಸಾಗಿದರೆ ಮಾತ್ರ ನಾವು ಹಿಡಿದ ಕೆಲಸ ಗಳು ಕೈಗೂಡುತ್ತವೆ. ಮನಸ್ಸಿಗೆ ಶಾಂತಿ, ನೆಮ್ಮದಿ ದೊರೆಯುತ್ತದೆ. ಆಡಂಬರದ ಭಕ್ತಿ ಗಿಂತ ಪರಿಶುದ್ಧ ಭಕ್ತಿ ಅತ್ಯಂತ ಶ್ರೇಷ್ಠ ಎಂದರು.

ದೇವಸ್ಥಾನ ನಿರ್ಮಿಸಿ ಜನರ ಒಡ ನಾಟ ಇಟ್ಟುಕೊಂಡು ಸಮಾಜದಲ್ಲಿ ಪುಣ್ಯ ಕಾರ್ಯಗಳನ್ನು ಮಾಡುವ ಮೂಲಕ ಜೀವನದಲ್ಲಿ ಸುಖ, ಶಾಂತಿ, ನೆಮ್ಮದಿ ಕಾಣಲು ಸಾಧ್ಯ ಎಂದು ತಿಳಿಸಿದರು.

ಕೆ.ಆರ್.ನಗರ ಕನಕಪೀಠದ ಶ್ರೀ ಶಿವಾ ನಂದಪುರಿ ಸ್ವಾಮೀಜಿ, ಅರಕಲಗೂಡು ದೊಡ್ಡಮಠದ ಶ್ರೀ ಮಲ್ಲಿಕಾರ್ಜುನ ಸ್ವಾಮೀಜಿ, ಬಸವಾಪಟ್ಟಣ ತೋಂಟ ದಾರ್ಯ ಮಠದ ಶ್ರೀಸ್ವತಂತ್ರ ಬಸವಲಿಂಗ ಶಿವಯೋಗಿಗಳು, ಶಿರಾ ತಾಲೂಕು ಶಿಡ್ಲುಕೋಣ ವಾಲ್ಮೀಕಿ ಸಂಸ್ಥಾನ ಮಠದ ಶ್ರೀ ನಿರಂಜನಕುಮಾರ ಸ್ವಾಮೀಜಿ, ಮೈಸೂರು ಉರಿಲಿಂಗಪೆದ್ದೇಶ್ವರ ಸಂಸ್ಥಾನ ಮಠದ ಶ್ರೀ ಜ್ಞಾನಪ್ರಕಾಶ ಸ್ವಾಮೀಜಿ, ಗ್ರಾಪಂ ಅಧ್ಯಕ್ಷೆ ಶಶಿಕಲಾ, ಉಪಾಧ್ಯಕ್ಷ ಮಹದೇವಪ್ಪ, ಸದಸ್ಯರಾದ ಸ್ವಾಮಿಗೌಡ, ಭಾಗ್ಯಮ್ಮ, ಸುರೇಶ್‍ನಾಯ್ಕ, ರಮೇಶ್, ಸುವರ್ಣ, ಪ್ರಕಾಶ್, ನಂಜಯ್ಯ, ಅಧಿಕಾರಿ ಗಳಾದ ಸಣ್ಣೇಗೌಡ, ನಾಗರಾಜಶೆಟ್ಟಿ, ಕರೀ ಗೌಡ, ಹುಚ್ಚೇಗೌಡ, ಸಣ್ಣಯ್ಯ, ನಾಗ ರಾಜನಾಯ್ಕ, ಯಶವಂತರಾಜ್, ಕೃಷ್ಣನಾಯ್ಕ, ದೇವಸ್ಥಾನ ಸಮಿತಿ ಅಧ್ಯಕ್ಷ ಶಿವಲಿಂಗೇ ಗೌಡ, ಕಾರ್ಯದರ್ಶಿ ಅನಂತರಾಜು, ಉಪಾ ಧ್ಯಕ್ಷ ಮೋಹನ್, ಖಜಾಂಚಿ ಬಸವರಾಜು, ಸದಸ್ಯರಾದ ನಾಗರಾಜೇಗೌಡ, ಚಂದ್ರೇಗೌಡ, ಕಾಳೇಗೌಡ, ವಿಜಯ್, ಗಣೇಶ ನಾಯ್ಕ, ಜವರನಾಯ್ಕ, ಶಂಕರಾಚಾರಿ, ಮಂಜು, ಕರಿನಾಯ್ಕ, ಸುರೇಶ್ ಭಾಗವಹಿಸಿದ್ದರು.