ವಿದ್ಯಾವರ್ಧಕದಲ್ಲಿ `ವಿಧ್ವತ್-2ಕೆ19’ ಚಾಲನೆ

ಮೈಸೂರು: ವಿದ್ಯಾವರ್ಧಕ ಪ್ರಥಮ ದರ್ಜೆ ಕಾಲೇಜಿನಲ್ಲಿ ರಾಜ್ಯಮಟ್ಟದ ವಾಣಿಜ್ಯ ಮತ್ತು ನಿರ್ವಹಣೆ ಉತ್ಸವ `ವಿಧ್ವತ್’ಗೆ ಶುಕ್ರವಾರ ಚಾಲನೆ ದೊರೆಯಿತು. ಕಾಲೇಜಿನ ವಾಣಿಜ್ಯ ಮತ್ತು ನಿರ್ವಹಣೆ ವಿಭಾಗದ 12ನೇ ವರ್ಷದ ಅಂತರ ಕಾಲೇಜು ವಿಧ್ವತ್ ಉತ್ಸವ ಇದಾಗಿದೆ.

ಕಾಲೇಜಿನ ಪಿ.ಎಂ.ಚಿಕ್ಕಬೋರಯ್ಯ ಸಭಾಂಗಣದಲ್ಲಿ ಹಮ್ಮಿಕೊಂಡಿದ್ದ ಸಮಾರಂಭದಲ್ಲಿ ನಗರ ಪೊಲೀಸ್ ಆಯುಕ್ತ ಕೆ.ಟಿ.ಬಾಲಕೃಷ್ಣ `ವಿಧ್ವತ್-2ಕೆ19’ಕ್ಕೆ ಚಾಲನೆ ನೀಡಿದರು. ಬಳಿಕ ಮಾತನಾಡಿದ ಅವರು, ನಾನೂ ಇದೇ ಕಾಲೇಜು ವಿದ್ಯಾರ್ಥಿ. ಕಾಲೇಜಿನ ದಿನಗಳು ಮತ್ತೆ ನೆನಪಾಗುತ್ತಿವೆ. ಆಗ ವಾಣಿಜ್ಯ ಮತ್ತು ನಿರ್ವ ಹಣೆಗೆ ಸಂಬಂಧಿಸಿದ ಬಿಬಿಎಂ ಕೋರ್ಸ್ ಹೊಸ ದಾಗಿ ಪರಿಚಯಿಸಲಾಗಿತ್ತು. ಆ ದಿನಗಳಲ್ಲಿ ಶೈಕ್ಷಣಿಕ ವಾಗಿ ನಾನೇನು ಉತ್ತಮ ವಿದ್ಯಾರ್ಥಿಯಾಗಿರಲಿಲ್ಲ. ಅದಾಗ್ಯೂ ಪರೀಕ್ಷೆ ಸಂದರ್ಭದಲ್ಲಿ ಕಠಿಣ ಶ್ರಮ ವಹಿಸುತ್ತಿದ್ದೆ. ಈಗ ಕಾಲೇಜಿನ ಸಮಾರಂಭದಲ್ಲಿ ಅತಿಥಿ ಯಾಗಿ ಪಾಲ್ಗೊಂಡಿರುವುದು ಸಂತಸ ತಂದಿದೆ ಎಂದು ಹರ್ಷ ವ್ಯಕ್ತಪಡಿಸಿದರು.

ಬೆಂಗಳೂರಿನ ಗೆಲೂಫ್ ಇಂಡಸ್ಟ್ರೀಸ್ ಸಂಸ್ಥಾಪಕ ನಿರ್ದೇಶಕ ಜಿ.ಎಸ್.ರಾಘವೇಂದ್ರ ಮಾತನಾಡಿ ದರು. ಪ್ರಾಸ್ತಾವಿಕವಾಗಿ ಮಾತನಾಡಿದ ಪ್ರಾಂಶುಪಾಲ ಡಾ.ಎಸ್.ಮರೀಗೌಡ, ಪ್ರಸ್ತುತ ಉನ್ನತ ಶಿಕ್ಷಣದಲ್ಲಿ ಅನೇಕ ಸವಾಲು ಎದುರಿಸಿ ಮುಂದೆ ಸಾಗಬೇಕಾದ ಸನ್ನಿವೇಶವಿದೆ. ಪ್ರತಿಭಾನ್ವಿತರ ನಡುವೆ ಸ್ಪರ್ಧೆ ಹೆಚ್ಚು ತ್ತಿದ್ದು, ವೃತ್ತಿಕೌಶಲದಲ್ಲಿ ಹೆಚ್ಚು ಪರಿಣತಿ ಹೊಂದು ವುದು ಅಗತ್ಯ. ಹೀಗಾಗಿ ಇಂತಹ ಸ್ಪರ್ಧೆಗಳು ವಿದ್ಯಾರ್ಥಿ ಗಳು ಹೊಸ ಆಲೋಚನೆಗಳೊಂದಿಗೆ ತಮ್ಮ ಕೌಶಲ ವೃದ್ಧಿಸಿಕೊಳ್ಳಲು ಸಹಕಾರಿಯಾಗಲಿವೆ. ಆ ಮೂಲಕ ವೃತ್ತಿಜೀವನ ಆರಂಭಿಸಲು ಭದ್ರ ಬುನಾದಿ ದೊರೆ ಯಲಿದೆ ಎಂದು ಅಭಿಪ್ರಾಯಪಟ್ಟರು.
2 ದಿನಗಳಲ್ಲಿ ಹಲವು ಸ್ಪರ್ಧೆಗಳು: 2 ದಿನ ವಿಧ್ವತ್ ಉತ್ಸವದಲ್ಲಿ 2 ವಿಭಾಗಗಳಲ್ಲಿ ಸ್ಪರ್ಧೆಗಳು ನಡೆಯ ಲಿವೆ. ಹಣಕಾಸು ನಿರ್ವಹಣೆ, ಮಾನವ ಸಂಪ ನ್ಮೂಲದ ವ್ಯವಸ್ಥೆ, ಮಾರುಕಟ್ಟೆ ನಿರ್ವಹಣೆ, ಇ-ವ್ಯಾಪಾರ, ನಿಧಿ ಶೋಧನೆ, ಟಗ್ ಆಫ್ ವಾರ್ ಸೇರಿದಂತೆ ಹಲವು ರೀತಿಯ ಸ್ಪರ್ಧೆಗಳು ನಡೆಯ ಲಿವೆ. ಕೋರ್ ಈವೆಂಟ್ಸ್‍ನಲ್ಲಿ ಪ್ರತಿ ಕಾಲೇಜಿನ ಎರಡು ತಂಡಗಳು ಪಾಲ್ಗೊಳ್ಳಲು ಅವಕಾಶವಿದ್ದು, ನಿಗದಿತ ಪ್ರವೇಶ ಶುಲ್ಕ ಭರಿಸಬೇಕು. ಸಮಗ್ರ ಪ್ರಶಸ್ತಿ ಸೇರಿದಂತೆ ಹಲವು ಆಕರ್ಷಕ ಬಹುಮಾನಗಳಿವೆ.

ನಾಳೆ ಸಂಜೆ 4.30ಕ್ಕೆ ನಡೆಯುವ ಸಮಾರೋಪ ಸಮಾರಂಭದಲ್ಲಿ ಅತಿಥಿಯಾಗಿ ಮೈಸೂರು ವಿವಿ ಕುಲಸಚಿವ ಪ್ರೊ. ಲಿಂಗರಾಜ ಗಾಂಧಿ ಭಾಗವಹಿ ಸಲಿದ್ದಾರೆ. ವಿದ್ಯಾವರ್ಧಕ ಸಂಘದ ಅಧ್ಯಕ್ಷ ಗುಂಡಪ್ಪ ಗೌಡ, ಕಾರ್ಯದರ್ಶಿ ಪಿ.ವಿಶ್ವನಾಥ್, ಪ್ರಭಾರ ಖಜಾಂಚಿ ಶ್ರೀಶೈಲ ರಾಮಣ್ಣವರ್, ಕಾಲೇಜಿನ ಸಿಎಂಸಿ ಅಧ್ಯಕ್ಷ ಟಿ.ನಾಗರಾಜ್ ಮತ್ತಿತರರು ಹಾಜರಿದ್ದರು.