ನಿರ್ಭಯಾ ಹಂತಕರ ಗಲ್ಲು ಶಿಕ್ಷೆಗೆ ತಡೆಯಾಜ್ಞೆ

ನವದೆಹಲಿ, ಜ.31- ನಿರ್ಭಯಾ ಅಪರಾಧಿಗಳ ಗಲ್ಲು ಶಿಕ್ಷೆಗೆ ವಿಧಿಸಿದ್ದ ಡೆತ್ ವಾರಂಟ್‍ಗೆ ಪಟಿಯಾಲ ಕೋರ್ಟ್ ತಡೆ ಯಾಜ್ಞೆ ನೀಡಿದೆ. ಫೆ.1ರಂದು ಬೆಳಿಗ್ಗೆ 6 ಗಂಟೆಗೆ ನಿರ್ಭಯಾ ಅಪರಾಧಿಗಳ ಗಲ್ಲಿಗೇರಿಸಲು ಕೋರ್ಟ್ ಆದೇಶ ನೀಡಿತ್ತು. ಆದರೆ ಅಪರಾಧಿಗಳು ಗಲ್ಲುಶಿಕ್ಷೆ ಜಾರಿ ಮುಂದೂಡಲು ನಾನಾ ಪ್ರಯತ್ನವನ್ನು ಮುಂದುವರಿಸಿದ್ದರು. ಬುಧವಾರ ಅಪರಾಧಿ ವಿನಯ್ ಶರ್ಮಾ ರಾಷ್ಟ್ರಪತಿ ಅವರಿಗೆ ಎರಡನೇ ಬಾರಿ ಕ್ಷಮಾ ದಾನ ಕೋರಿ ಅರ್ಜಿ ಸಲ್ಲಿಸಿದ್ದನು. ಇನ್ನೊಂದೆಡೆ ಪವನ್, ನಾನು ಅಪ್ರಾಪ್ತನಾಗಿದ್ದಾಗ ಈ ಘಟನೆ ನಡೆದಿತ್ತು. ಹಾಗಾಗಿ ನನ್ನನ್ನು ಮರಣದಂಡನೆಗೆ ಒಳಪಡಿಸಬಾರದು ಎಂದು ಸುಪ್ರಿಂಕೋರ್ಟ್‍ಗೆ ಮತ್ತೊಮ್ಮೆ ಮನವಿ ಮಾಡಿದ್ದಾನೆ. ಈ ಹಿಂದೆಯೇ ತ್ರಿಸದಸ್ಯ ಪೀಠ ಪವನ್ ಅರ್ಜಿಯನ್ನು ತಿರಸ್ಕರಿಸಿತ್ತು. ಈಗ ಸುಪ್ರೀಂಕೋರ್ಟಿನ ಸಾಂವಿಧಾನಿಕ ಪೀಠದ ಮುಂದೆ ಮೇಲ್ಮನವಿ ಸಲ್ಲಿಸಿದ್ದಾನೆ. ರಾಷ್ಟ್ರಪತಿಗಳ ಕ್ಷಮಾದಾನದ ತೀರ್ಪಿನ ವಿರುದ್ಧ ಮುಖೇಶ್ ಸುಪ್ರೀಂಕೋರ್ಟ್ ಮೊರೆ ಹೋಗಿದ್ದಾನೆ. ಬುಧವಾರ ಸುಪ್ರೀಂಕೋರ್ಟ್ ಮುಖೇಶ್ ಅರ್ಜಿಯನ್ನು ವಜಾಗೊಳಿಸಿತ್ತು. ಮುಖೇಶ್ ನಂತೆಯೇ ಉಳಿದ ಅಪರಾಧಿಗಳು ಅರ್ಜಿ ಸಲ್ಲಿಸುವ ಮೂಲಕ ಗಲ್ಲು ಏರುವುದಕ್ಕೆ ವಿಳಂಬ ಮಾಡುವ ತಂತ್ರ ಮಾಡುತ್ತಿದ್ದಾರೆ.

ಕಣ್ಣೀರಿಟ್ಟ ನಿರ್ಭಯಾ ತಾಯಿ: ನಿರ್ಭಯಾ ಹಂತಕರ ಗಲ್ಲಿಗೆ ಇನ್ನೇನು ಕೆಲವೇ ಗಂಟೆಗಳು ಬಾಕಿ ಇದೆ ಎನ್ನುವಾಗ ಈ ಶಿಕ್ಷೆಯನ್ನು ಮುಂದೂಡಿ ಪಟಿಯಾಲ ನ್ಯಾಯಾಲಯ ತೀರ್ಪು ನೀಡಿದ್ದರಿಂದ ಸತತ 7 ವರ್ಷಗಳ ಹೋರಾಟದ ಬಳಿಕ ಇನ್ನೇನು ತನ್ನ ಮಗಳಿಗೆ ಜಯ ಸಿಗಲಿದೆ ಎಂಬ ಆಶಾಭಾವನೆಯಲ್ಲಿದ್ದ ನಿರ್ಭಯಾ ತಾಯಿ ಆಘಾತಕ್ಕೆ ಒಳಗಾಗಿದ್ದಾರೆ. ನ್ಯಾಯಾಲಯದ ತೀರ್ಪನ್ನು ಆಲಿಸುತ್ತಿದ್ದಂತೆ ನಿರ್ಭಯಾ ತಾಯಿ ಆಶಾದೇವಿ ಕುಸಿದು ಬಿದ್ದಿದ್ದು, ಕಣ್ಣಿರಿಟ್ಟಿದ್ದಾರೆ. ಎರಡನೇ ಬಾರಿ ಅತ್ಯಾಚಾರಿಗಳಿಗೆ ಈ ಶಿಕ್ಷೆಯನ್ನು ಮುಂದೂಡಲಾಗಿದೆ. ದೋಷಿಗಳಿಗೆ ಗಲ್ಲು ಶಿಕ್ಷೆಯಾಗುವುದಿಲ್ಲ ಎಂದು ಬಿಕ್ಕಿದ್ದಾರೆ. ದೋಷಿಗಳ ಪರ ವಕೀ ಎ.ಪಿ.ಸಿಂಗ್, ದೋಷಿಗಳಿಗೆ ಗಲ್ಲು ಶಿಕ್ಷೆಯಾಗು ವುದಿಲ್ಲ ಎಂದು ನನಗೆ ಸವಾಲು ಹಾಕಿದ್ದರು. ಆದರೆ, ನಾನು ಸುಮ್ಮನಿರುವುದಿಲ್ಲ. ನ್ಯಾಯ ಕ್ಕಾಗಿ ನನ್ನ ಹೋರಾಟವನ್ನು ಮುಂದುವರೆಸುತ್ತೇವೆ ಎಂದಿದ್ದಾರೆ. ಗಲ್ಲು ಶಿಕ್ಷೆಗೆ ಇನ್ನೇನು ಕೆಲವೇ ಗಂಟೆಗಳು ಬಾಕಿ ಇದೆ ಎನ್ನುವ ಸಂದರ್ಭದಲ್ಲಿ ನಾಲ್ವರು ದೋಷಿಗಳು ಕೊನೆ ಕ್ಷಣದಲ್ಲಿ ಈ ಶಿಕ್ಷೆಯಿಂದ ತಪ್ಪಿಸಿಕೊಂಡಿದ್ದಾರೆ. ಗಲ್ಲು ಶಿಕ್ಷೆಗೆ ತಡೆ ನೀಡಿರುವ ಕೋರ್ಟ್ ಗಲ್ಲು ಶಿಕ್ಷೆಗೆ ಹೊಸ ದಿನಾಂಕ ನಿಗದಿ ಮಾಡುವುದಾಗಿ ತಿಳಿಸಿದೆ. ಇನ್ನು ಇವರಿಗೆ ನೇಣಿಗೇರಿಸಲು ಹ್ಯಾಂಗ್ ಮ್ಯಾನ್ ಪವನ್ ಜಲಾದ್ ಕೂಡ ತಿಹಾರ್ ಜೈಲಿಗೆ ಆಗಮಿಸಿದ್ದು, ನಾಳೆ ನೇಣಿಗೆರಿಸಲು ಸಿದ್ಧತೆ ನಡೆಸಿದ್ದರು. ಅಲ್ಲದೇ ಇಂದು ಮಧ್ಯಾಹ್ನ ಕೂಡ ನೇಣಿಗೇರಿಸುವ ಅಣಕು ಕಾರ್ಯ ಕೂಡ ನಡೆಸಲಾಗಿತ್ತು.