ಪಾಂಡವಪುರ ತಾಲೂಕಿನಲ್ಲಿ ಬಿರುಗಾಳಿ-ಮಳೆ; ಅಪಾರ ಹಾನಿ

  • ಪಪ್ಪಾಯಿ, ಬಾಳೆ ತೋಟಗಳಲ್ಲಿ ಭಾರೀ ಬೆಳೆ ಹಾನಿ
  •  ಧರೆಗುರುಳಿದ ವಿದ್ಯುತ್ ಕಂಬ, ಟ್ರಾನ್ಸ್‍ಫಾರ್ಮರ್
  •  ವಿದ್ಯುತ್ ಇಲ್ಲದೆ ಹಲವು ಗ್ರಾಮಗಳಲ್ಲಿ ಪರದಾಟ
  • ನೆಲಕ್ಕುರುಳಿದ ಮರಗಳು, ಸಂಚಾರ ಅಸ್ತವ್ಯಸ್ತ

ಪಾಂಡವಪುರ: ಪಾಂಡವಪುರ ತಾಲೂಕಿನ ಹಲವೆಡೆ ಶನಿವಾರ ತಡರಾತ್ರಿ ಬಿರುಗಾಳಿ ಸಹಿತ ಸುರಿದ ಭಾರೀ ಮಳೆಗೆ ಅಪಾರ ಹಾನಿ ಸಂಭವಿಸಿದೆ. ಆದರೆ ಯಾವುದೇ ಪ್ರಾಣಹಾನಿಯಾಗಿಲ್ಲ.

ರಾಗಿ ಮುದ್ದನಹಳ್ಳಿ, ಬೇಬಿ, ಹಾರೋ ಹಳ್ಳಿ ಸೇರಿದಂತೆ ಹಲವು ಗ್ರಾಮಗಳಲ್ಲಿ ಮಳೆ-ಗಾಳಿ ಅವಾಂತರ ಸೃಷ್ಟಿಸಿದ್ದು, ವಿದ್ಯುತ್ ಕಂಬಗಳು ಮುರಿದುಬಿದ್ದಿವೆ. ಮರಗಳು ಧರಾಶಾಯಿಯಾಗಿವೆ. ಶಾಲೆ, ಮನೆ, ಇಟ್ಟಿಗೆ ಫ್ಯಾಕ್ಟರಿ, ಕೋಳಿ ಫಾರಂಗಳ ಮೇಲ್ಛಾ ವಣಿಗಳು ಹಾರಿ ಹೋಗಿವೆ. ಬೇಬಿ ಗ್ರಾಮ ದಲ್ಲಿ ಬಿರುಗಾಳಿಗೆ ಬಿಎಂಎಸ್ ಶಾಲೆಯ ಮೇಲ್ಛಾವಣಿ ಹಾರಿಹೋಗಿದ್ದು, ಅಪಾರ ನಷ್ಠದ ಅಂದಾಜು ಮಾಡಲಾಗಿದೆ.

ವಿದ್ಯುತ್ ಕಂಬಗಳು ಉರುಳಿ, ಹತ್ತಾರು ಟ್ರಾನ್ಸ್‍ಫಾರ್ಮರ್ (ವಿದ್ಯುತ್ ಪರಿ ವರ್ತಕ) ನಾಶವಾಗಿದ್ದು, ಶನಿವಾರ ರಾತ್ರಿ ಯಿಂದ ಬೇಬಿ, ರಾಗಿ ಮುದ್ದನಹಳ್ಳಿ, ಹಾರೋಹಳ್ಳಿ ಸೇರಿದಂತೆ ಹಲವು ಗ್ರಾಮ ಗಳು ಕತ್ತಲಲ್ಲಿ ಮುಳುಗಿವೆ. ವಿದ್ಯುತ್ ಇಲ್ಲದ್ದರಿಂದ ನೀರು ಸರಬರಾಜಾಗದೆ ಗ್ರಾಮಸ್ಥರು ಪರದಾಡುವಂತಾಗಿದೆ.

ವಾಹನ ಸಂಚಾರಕ್ಕೆ ಅಡ್ಡಿ: ಪಾಂಡವ ಪುರ ಪಟ್ಟಣದ ಕೆಆರ್‍ಎಸ್ ರಸ್ತೆಯಲ್ಲಿ ಬಿರು ಗಾಳಿಗೆ ವಿದ್ಯುತ್ ಕಂಬಗಳು, ಈಚಲು ಮರಗಳು ರಸ್ತೆಗಡ್ಡಲಾಗಿ ಬಿದ್ದಿವೆ. ಮೈಸೂರು- ಶಿವಮೊಗ್ಗ ಹಾಗೂ ಕೆಆರ್‍ಎಸ್ ಮಾರ್ಗ ದಲ್ಲಿ ಕೆಎಸ್‍ಆರ್‍ಟಿಸಿ ಬಸ್ ಸೇರಿದಂತೆ ಹೆಚ್ಚಿನ ವಾಹನಗಳು ಸಂಚರಿಸುತ್ತವೆ. ಇದೇ ಮಾರ್ಗದಲ್ಲಿ ಮರ ಹಾಗೂ ವಿದ್ಯುತ್ ಕಂಬಗಳು ಉರುಳಿಬಿದ್ದಿದ್ದರಿಂದ ವಾಹನ ಸಂಚಾರಕ್ಕೆ ಅಡಚಣೆಯಾಗಿದೆ.

ಜನರ ಆಕ್ರೋಶ: ಈ ಭಾಗದಲ್ಲಿ ಬಿರುಗಾಳಿಗೆ ಪದೇ ಪದೇ ವಿದ್ಯುತ್ ಕಂಬ ಗಳು ಬೀಳುತ್ತಿವೆ. ಆದರೂ ಸೆಸ್ಕ್ ಅಧಿಕಾರಿ ಗಳು ಸೂಕ್ತ ಕ್ರಮ ಕೈಗೊಳ್ಳಲು ವಿಫಲ ವಾಗಿದ್ದಾರೆ ಎಂದು ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಪಾಂಡವಪುರದ ಟಿಎಪಿಸಿಎಂಎಸ್ ರೈತ ಸಭಾಂಗಣ ಮುಂಭಾಗ 3 ವಿದ್ಯುತ್ ಕಂಬಗಳು ನೆಲಕ್ಕುರುಳಿವೆ. ತಾಲೂಕಿನ ಬೇಬಿ, ಚಿಕ್ಕಾಡೆ, ರಾಗಿಮುದ್ದನಹಳ್ಳಿ, ಶಂಭೂನ ಹಳ್ಳಿ, ಕೆರೆತೊಣ್ಣೂರು, ಬೆಳ್ಳಾಳೆ, ಲಕ್ಷ್ಮೀ ಸಾಗರ, ನೀಲನಹಳ್ಳಿ ಚಂದ್ರೆ, ಟಿ.ಎಸ್.ಛತ್ರ ಮತ್ತಿತರ ಗ್ರಾಮಗಳಲ್ಲಿ 60 ವಿದ್ಯುತ್ ಕಂಬಗಳು ಧರೆಗುರುಳಿವೆ. 8 ವಿದ್ಯುತ್ ಟ್ರಾನ್ಸ್‍ಫಾರ್ಮರ್‍ಗಳು ಹಾನಿಗೀಡಾಗಿವೆ.

ಸಚಿವ ಭೇಟಿ: ಪಾಂಡವಪುರ ತಾಲೂಕಿನ ವಿವಿಧೆಡೆ ಬಿರುಗಾಳಿ-ಮಳೆಗೆ ಹಾನಿ ಯಾಗಿರುವ ಸುದ್ದಿ ತಿಳಿದು ಜಿಲ್ಲಾ ಉಸ್ತು ವಾರಿ ಸಚಿವ ಸಿ.ಎಸ್.ಪುಟ್ಟರಾಜು ಅವರು ತಾಲೂಕಿಗೆ ಭೇಟಿ ನೀಡಿದ್ದರು. ಬೇಬಿ ಗ್ರಾಮದ ಡಿಎಂಎಸ್ ಜ್ಞಾನ ಕುಟೀರ ಶಾಲೆಯ ಮೇಲ್ಛಾವಣಿ ಹಾಗೂ ತಾಲೂಕಿನ ವಿವಿಧೆಡೆ 50ಕ್ಕೂ ಹೆಚ್ಚು ಮನೆಗಳ ಛಾವಣಿಯ ಜಿಂಕ್‍ಶೀಟ್‍ಗಳು ಹಾನಿಗೊಳಗಾಗಿವೆ. ಟ್ರಾನ್ಸ್ ಫಾರ್ಮರ್ ಬಿದ್ದು ಲಕ್ಷಾಂತರ ರೂ. ಹಾನಿಗೊಳಗಾಗಿ ರುವುದನ್ನು ಪರಿಶೀಲಿಸಿದರು.

ಡಿಎಂಎಸ್ ಜ್ಞಾನ ಕುಟೀರ ಶಾಲೆಯ ಮೇಲ್ಛಾವಣಿ ಬಿರುಗಾಳಿಗೆ ಹಾರಿ ರಸ್ತೆಗೆ ಬಿದ್ದಿದ್ದು, ಶ್ರೀಮಠದ ಭಕ್ತರು ಸಾರ್ವಜ ನಿಕರ ಜತೆಗೂಡಿ ಛಾವಣಿ ಶೀಟ್‍ಗಳನ್ನು ಎತ್ತಿ ಶಾಲೆಯ ಮೈದಾನಕ್ಕೆ ಸಾಗಿಸಿದರು.

ಸಿಎಂ ಕುಮಾರಸ್ವಾಮಿ ಅವರ ಸೂಚನೆ ಮೇರೆಗೆ ಭೇಟಿ ನೀಡಿದ ಸಚಿವರು, ಹಾನಿ ಗೀಡಾದ ವಿದ್ಯುತ್ ಟ್ರಾನ್ಸ್‍ಫಾರ್ಮರ್, ವಿದ್ಯುತ್ ಕಂಬಗಳನ್ನು ತ್ವರಿತಗತಿಯಲ್ಲಿ ಬದಲಿಸು ವಂತೆ ಸೆಸ್ಕ್ ಅಧಿಕಾರಿಗಳಿಗೆ ಸೂಚಿಸಿ ದರು. ಈ ವೇಳೆ ಶ್ರೀ ಮಠದ ಕಾರ್ಯ ದರ್ಶಿ ಟಿ.ಪಿ.ಶಿವಕುಮಾರ್, ಗ್ರಾ.ಪಂ ಸದಸ್ಯ ಸಿ.ಶಿವಕುಮಾರ್, ಮಾಜಿ ಅಧ್ಯಕ್ಷ ಸಿದ್ದಲಿಂಗದೇವರು ಇತರರು ಇದ್ದರು.