ದುಶ್ಚಟಗಳಿಂದ ದೂರವಿರಲು ವಿದ್ಯಾರ್ಥಿಗಳಿಗೆ ಕಿವಿ ಮಾತು

ಬೇಗೂರು:  ದುಶ್ಚಟ ಗಳು ಕುತೂಹಲಕ್ಕೆ ವಿದ್ಯಾರ್ಥಿಗಳು ಬಿದ್ದಲ್ಲಿ ಮಾದಕ ವಸ್ತುಗಳಿಗೆ ದಾಸರಾಗಬೇಕಾಗುತ್ತದೆ ಎಂದು ಜೆಎಂಎಫ್‍ಸಿ ಸಿವಿಲ್ ನ್ಯಾಯಾಧೀಶ ಎನ್.ಶರತ್‍ಚಂದ್ರ ಕಿವಿ ಮಾತು ಹೇಳಿದರು.

ತಾಲೂಕಿನ ಬೇಗೂರು ಗ್ರಾಮದ ಕೈಗಾ ರಿಕೆ ತರಬೇತಿ ಸಂಸ್ಥೆಯಲ್ಲಿ ತಾಲೂಕು ಕಾನೂನು ಸೇವೆಗಳ ಸಮಿತಿ, ವಕೀಲರ ಸಂಘ, ಹಂಗಳ ಸೃಷ್ಠಿ ಗ್ರಾಮಾಭಿವೃದ್ಧಿ ಸಂಸ್ಥೆ, ಸಮಷ್ಠಿ ಸಮಗ್ರ ಅಭಿವೃದ್ಧಿ ಟ್ರಸ್ಟ್, ಕೈಲಾಸ್ ಸತ್ಯಾರ್ಥಿ ಚಿಲ್ಡ್ರನ್ ಫೌಂಡೇಶನ್ ಆಶ್ರಯದಲ್ಲಿ ನಡೆದ ಮಾದಕ ವ್ಯಸನಕ್ಕೆ ಒಳಗಾದ ಸಂತ್ರಸ್ಥರಿಗೆ ಕಾನೂನಿನ ನೆರವು ಮತ್ತು ಪ್ರಕೃತಿ ವಿಕೋಪಕ್ಕೆ ಒಳಗಾದ ಸಂತ್ರ ಸ್ತರಿಗೆ ಕಾನೂನಿನ ನೆರವು ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ಮೊದಲಿಗೆ ಮಾದಕ ವಸ್ತುಗಳ ಸೇವನೆ ಮಾಡುವ ಗೆಳೆಯರ ನೋಡಿ ಸಿಗರೇಟು, ಗಾಂಜಾ ಸೇವನೆಗೆ ಅಭ್ಯಾಸದ ನೆಪದಲ್ಲಿ ತೊಡಗಿದ್ದಲ್ಲಿ ನಂತರದ ದಿನಗಳಲ್ಲಿ ಬಿಡಲು ಆಗದೆ ತೊಳಲಾಟದಲ್ಲಿ ಬೀಳಬೇಕಾಗು ತ್ತದೆ ಎಂದು ಎಚ್ಚರಿಸಿದರು.
ಎಚ್ಚರ ವಹಿಸಬೇಕು: ವಿದ್ಯಾರ್ಥಿ ದೆಶೆ ಯಲ್ಲಿ ಗೆಳೆಯರ ಜೊತೆ ಗೆಳತನ ಮಾಡುವಾಗ ಬಹಳ ಎಚ್ಚರಿಕೆ ವಹಿಸಿದರೆ ದುಶ್ಚಟಗಳಿಂದ ದೂರ ಇರಬಹುದಾಗಿದೆ. ಆದರೆ ಗೆಳೆಯನ ಸ್ನೇಹದಲ್ಲೆ, ಯಡವಟ್ಟಾ ದಲ್ಲಿ ದುಶ್ಚಟಗಳಿಗೆ ಕಾರಣರಾಗುತ್ತೀರಾ ಎಂದು ಎಚ್ಚರಿಕೆ ನೀಡಿದರು.

ಬೇಗೂರು ಕೈಗಾರಿಕೆ ತರಬೇತಿ ಸಂಸ್ಥೆಯ ಪ್ರಾಂಶುಪಾಲೆ ಲುಬ್ಬ ನಿಖತ್, ತಾಲೂಕು ವಕೀಲರ ಸಂಘದ ಅಧ್ಯಕ್ಷ ಜಿ.ಬಿ.ನಂಜಪ್ಪ, ಸಹಾಯಕ ಸರ್ಕಾರಿ ಅಭಿಯೋಜಕ ಎ.ಎನ್. ರಾಜಣ್ಣ, ವಕೀಲರ ಸಂಘದ ಪ್ರಧಾನ ಕಾರ್ಯದರ್ಶಿ ಟಿ.ಎಸ್.ವೆಂಕಟೇಶ್, ಸೃಷ್ಠಿ ಸಂಸ್ಥೆಯ ವೃಷಬೇಂದ್ರ, ಸಮಷ್ಠಿ ಸಂಸ್ಥೆಯ ಗಂಗಾಧರಸ್ವಾಮಿ ಹಾಗೂ ಜಿ.ಸಿ.ನಾರಾಯಣ ಸ್ವಾಮಿ, ತರಬೇತಿ ಅಧಿಕಾರಿ ಎಚ್.ಪ್ರಸಾದ್, ವಕೀಲ ಪುಟ್ಟಸ್ವಾಮಿ ಸೇರಿದಂತೆ ಸಂಸ್ಥೆಯ ನೂರಾರು ಮಂದಿ ವಿದ್ಯಾರ್ಥಿಗಳಿದ್ದರು.