ರಾಜ್ಯ ಪ್ರವಾಸೋದ್ಯಮ ಟಾಸ್ಕ್‍ಫೋರ್ಸ್‍ಗೆ ಸುಧಾಮೂರ್ತಿ ಮುಖ್ಯಸ್ಥೆ

ಮೈಸೂರು,ಆ.5(ಆರ್‍ಕೆ)- ಕರ್ನಾಟಕ ರಾಜ್ಯ ಪ್ರವಾ ಸೋದ್ಯಮ ಟಾಸ್ಕ್ ಫೋರ್ಸ್ (State tourism task force)ಗೆ ಇನ್ಫೋಸಿಸ್ ಫೌಂಡೇಷನ್ ಅಧ್ಯಕ್ಷ ರಾದ ಶ್ರೀಮತಿ ಸುಧಾಮೂರ್ತಿ ಅವರನ್ನು ಮುಖ್ಯಸ್ಥೆ ಯನ್ನಾಗಿ ಸರ್ಕಾರ ನೇಮಕ ಮಾಡಲು ನಿರ್ಧರಿಸಿದೆ.

ರಾಜ್ಯದ ಪ್ರವಾಸೋದ್ಯಮ ಮತ್ತು ಸಾಂಸ್ಕøತಿಕ ಅಭಿ ವೃದ್ಧಿ ಕುರಿತಂತೆ ಬೆಂಗಳೂರಿನ ಗೃಹ ಕಚೇರಿ ಕೃಷ್ಣಾ ದಲ್ಲಿ ಭಾನುವಾರ ಮುಖ್ಯಮಂತ್ರಿ ಬಿ.ಎಸ್.ಯಡಿ ಯೂರಪ್ಪ ಅವರು ಪ್ರವಾಸೋದ್ಯಮ ಇಲಾಖೆ ಅಧಿ ಕಾರಿಗಳೊಂದಿಗೆ ಸಭೆ ನಡೆಸಿ ಪ್ರವಾಸೋದ್ಯಮ ಅಭಿವೃದ್ಧಿಗಾಗಿ ರಾಜ್ಯ ಟೂರಿಸಂ ಟಾಸ್ಕ್‍ಫೋರ್ಸ್ ರಚಿಸಲು ಮಹತ್ವದ ನಿರ್ಣಯ ಕೈಗೊಂಡರು.

ಈ ಕಾರ್ಯಪಡೆಗೆ ಸಂಸ್ಕøತಿ ಮತ್ತು ಪ್ರವಾಸೋ ದ್ಯಮ ಅಭಿವೃದ್ಧಿಗೆ ಶ್ರಮಿಸುತ್ತಿರುವ ಹಾಗೂ ಹಲವು ಸಾಮಾಜಿಕ ಕಾರ್ಯದಲ್ಲಿ ನಿರತರಾಗಿರುವ ಇನ್ಫೋ ಸಿಸ್ ಫೌಂಡೇಷನ್ ಅಧ್ಯಕ್ಷರಾದ ಸುಧಾಮೂರ್ತಿ ಅವರನ್ನು ಮುಖ್ಯಸ್ಥೆಯನ್ನಾಗಿ ನೇಮಿಸಲೂ ಮುಖ್ಯ ಮಂತ್ರಿಗಳು ಇಂಗಿತ ವ್ಯಕ್ತಪಡಿಸಿದ್ದಾರೆ.

ಭಾನುವಾರ ನಡೆದ ಸಭೆಯಲ್ಲಿ ಸುಧಾಮೂರ್ತಿ ಅವರೂ ಹಾಜರಿದ್ದು, ತಮ್ಮ ಅಭಿಪ್ರಾಯ ವ್ಯಕ್ತಪಡಿಸಿ ದರು. ರಾಜ್ಯದಲ್ಲಿರುವ ಪ್ರಾಚೀನ ಸ್ಮಾರಕಗಳ ಸಂರಕ್ಷಿ ಸುವ ಜೊತೆಗೆ ಅವುಗಳ ಹಿನ್ನೆಲೆ, ಇತಿಹಾಸವನ್ನು ಇಂದಿನ ಯುವ ಪೀಳಿಗೆಗೆ ಪರಿಚಯಿಸುವ ಕೆಲಸ ವಾಗಬೇಕಿದೆ ಎಂದು ಅವರು ನುಡಿದರು.

ಸ್ಮಾರಕ, ಪುರಾತನ ದೇವಸ್ಥಾನಗಳನ್ನು ಜೀರ್ಣೋ ದ್ಧಾರ ಮಾಡಿರುವ ಬಗ್ಗೆ ಮಾಹಿತಿ ಫಲಕಗಳು ಮಾತ್ರ ಇವೆ. ಆದರೆ ಅವುಗಳನ್ನು ಯಾರು? ಯಾವಾಗ? ನಿರ್ಮಿಸಿದರು, ಅವುಗಳ ಇತಿಹಾಸ, ಹಿನ್ನೆಲೆಗಳ ವಿವರ ಇರುವುದಿಲ್ಲ. ಆ ಎಲ್ಲಾ ಮಾಹಿತಿಗಳನ್ನು ಜನರಿಗೆ ತಲು ಪಿಸುವ ಕೆಲಸವನ್ನು ಸರ್ಕಾರ ಮಾಡಬೇಕಿದೆ ಎಂದು ಸುಧಾಮೂರ್ತಿ ಅವರು ಅಭಿಪ್ರಾಯಪಟ್ಟರು.

ರಾಜ್ಯದಲ್ಲಿ ಪ್ರವಾಸೋದ್ಯಮವನ್ನು ಅಭಿವೃದ್ಧಿಪಡಿ ಸುವ ಸಲುವಾಗಿ ಸುಧಾಮೂರ್ತಿ ನೇತೃತ್ವದಲ್ಲಿ ಪ್ರವಾ ಸೋದ್ಯಮ ಕಾರ್ಯಪಡೆ ರಚಿಸಲಾಗುವುದು. ಪ್ರತೀ ವಾರ ಕಾರ್ಯಪಡೆಯು ಸಭೆ ನಡೆಸಿ, ನಾನೂ ಸಹ ಹಾಜರಾಗುತ್ತೇನೆ. ಪ್ರವಾಸೋದ್ಯಮದ ಸಮಗ್ರ ಅಭಿವೃದ್ಧಿ ಗಾಗಿ ಸಲಹೆ-ಮಾರ್ಗದರ್ಶನ ನೀಡಿ. ಅದರಂತೆ ಕಾರ್ಯಕ್ರಮ ಅನುಷ್ಠಾನಗೊಳಿಸಲು ತಾವು ಅಗತ್ಯ ಹಣ ಕಾಸು ಒದಗಿಸುವುದಾಗಿ ಯಡಿಯೂರಪ್ಪ ತಿಳಿಸಿದರು.

ಹಲವು ದೇವಾಲಯಗಳಿಗೆ ರೂಢಿಯಂತೆ ಬಂದಿ ರುವ ಹೆಸರುಗಳಿವೆ. ಇತಿಹಾಸಕಾರರು ಇಂತಹ ದೇವಾ ಲಯಗಳ ಇತಿಹಾಸ ಪತ್ತೆ ಮಾಡಿ ಅದರ ಮೂಲ ಹೆಸರನ್ನಿಡಬೇಕು. ರಾಜ್ಯದಲ್ಲಿರುವ ಸುಮಾರು 2 ಸಾವಿರ ಕಲೆಗಳನ್ನು ಉಳಿಸಿ, ಬೆಳೆಸಬೇಕಿದೆ. ಕನ್ನಡ ನಾಡಿನ ಸಂಸ್ಕøತಿ ಅಭಿವೃದ್ಧಿ ಮಾಡುವ ಅಗತ್ಯವಿದೆ ಎಂದು ಸುಧಾಮೂರ್ತಿ ಸಭೆಯಲ್ಲಿ ಅಭಿಪ್ರಾಯಪಟ್ಟರು.

ರಾಜ್ಯದಲ್ಲಿ ಹಲವು ಉತ್ಸವಗಳನ್ನು ಮಾಡಬಹುದು. ಇದರಿಂದ ಜನರಲ್ಲಿ ಕಲೆ, ಸಂಸ್ಕøತಿ, ಪುರಾತತ್ವ, ಪರಂ ಪರೆ ಬಗ್ಗೆ ಅರಿವು ಮೂಡಿಸಬಹುದಾಗಿದೆ. ಪ್ರವಾಸಿ ತಾಣಗಳಲ್ಲಿ ಅಗತ್ಯ ಮೂಲಭೂತ ಸೌಲಭ್ಯ ಒದಗಿಸಿ ದಲ್ಲಿ ಪ್ರವಾಸೋದ್ಯಮ ಅಭಿವೃದ್ಧಿಯಾಗಲಿದೆ ಎಂದರು.

ಭಾರತೀಯ ವಿದ್ಯಾಭವನದ ನಿರ್ದೇಶಕ ಹೆಚ್.ಎನ್. ಸುರೇಶ್, ಮುಖ್ಯಮಂತ್ರಿಗಳ ಸಲಹೆಗಾರ ಎಂ.ಲಕ್ಷ್ಮೀ ನಾರಾಯಣ, ಸಿಎಂ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ರವಿಕುಮಾರ್, ಪ್ರವಾಸೋದ್ಯಮ ಇಲಾಖೆ ಕಾರ್ಯ ದರ್ಶಿ ಟಿ.ಅನಿಲ್‍ಕುಮಾರ್, ವ್ಯವಸ್ಥಾಪಕ ನಿರ್ದೇಶಕ ಕುಮಾರ್ ಪುಷ್ಕರ್ ಸೇರಿದಂತೆ ಹಲವು ಹಿರಿಯ ಅಧಿಕಾರಿಗಳು ಸಭೆಯಲ್ಲಿ ಉಪಸ್ಥಿತರಿದ್ದರು.

ಭಾನುವಾರ ಸಿಎಂ ನಡೆಸಿದ ಸಭೆಯಲ್ಲಿ ಸುಧಾ ಮೂರ್ತಿ ನೇತೃತ್ವದ ರಾಜ್ಯ ಪ್ರವಾಸೋದ್ಯಮ ಕಾರ್ಯ ಪಡೆ ರಚಿಸುವ ಬಗ್ಗೆ ನಿರ್ಧರಿಸಲಾಯಿತು ಎಂಬುದನ್ನು ಸಭೆಯಲ್ಲಿ ಹಾಜರಿದ್ದ ಇಲಾಖೆ ಹಿರಿಯ ಅಧಿಕಾರಿ ಗಳು `ಮೈಸೂರು ಮಿತ್ರ’ನಿಗೆ ದೃಢಪಡಿಸಿದ್ದಾರೆ.

ಶಿಕ್ಷಣ, ಆರೋಗ್ಯ ಹಾಗೂ ಪ್ರವಾಸೋದ್ಯಮದಲ್ಲಿ ಆಸಕ್ತಿ ಹೊಂದಿರುವ ಸುಧಾಮೂರ್ತಿ ಅವರು, ಪಾಂಡವಪುರ ತಾಲೂಕಿನ ಮೇಲುಕೋಟೆಯ ಪುರಾತನ ಸ್ಮಾರಕಗಳನ್ನು ಸಂರಕ್ಷಿಸಲು ಯೋಜನೆ ರೂಪಿಸಿರುವುದಲ್ಲದೆ, ಮೈಸೂರಿನ ಹೆಬ್ಬಾಳು ಕೆರೆ ಅಭಿವೃದ್ಧಿ ಯೋಜನೆಯನ್ನೂ ರೂಪಿಸಿ ಅನು ಷ್ಠಾನಕ್ಕೆ ತಂದಿರುವುದನ್ನು ಇಲ್ಲಿ ಸ್ಮರಿಸಬಹುದಾಗಿದೆ.