ಕೋಮುವಾದಿ ದೂರವಿಡಲು ಮೈತ್ರಿ ಬೆಂಬಲಿಸಿ: ರೇವಣ್ಣ

ಬೇಲೂರು: ದೇಶದ ಅಧಿಕಾರ ಚುಕ್ಕಾಣಿ ಹಿಡಿದಿರುವ ಕೋಮುವಾದಿ ಶಕ್ತಿ ಯನ್ನು ದೂರವಿಡಲು ಮೈತ್ರಿ ಪಕ್ಷವನ್ನು ಬೆಂಬ ಲಿಸಬೇಕು ಎಂದು ಜಿಲ್ಲಾ ಉಸ್ತುವಾರಿ ಸಚಿವ ಹೆಚ್.ಡಿ.ರೇವಣ್ಣ ಕರೆ ನೀಡಿದರು.

ಬೇಲೂರು ತಾಲೂಕು ಮದಘಟ್ಟ ಗ್ರಾಮ ದಲ್ಲಿ ಏರ್ಪಡಿಸಿದ್ದ ಪ್ರಜಾಪ್ರಭುತ್ವದ ಉಳಿವಿಗಾಗಿ ದಲಿತರ ಸ್ವಾಭಿಮಾನಿ ಸಮಾ ವೇಶದಲ್ಲಿ ಮಾತನಾಡಿದ ಅವರು, ಸಂವಿ ಧಾನ ಮತ್ತು ಅದನ್ನು ಬರೆದವರ ವಿರುದ್ಧ ಆರೋಪ ಮಾಡುವುದೇ ಗುರಿಯಾಗಿಸಿ ಕೊಂಡಿರುವ ಕೋಮುವಾದಿ ಪಕ್ಷವನ್ನು ಕಿತ್ತೊಗೆಯಬೇಕಿದೆ ಎಂದರು.

ರಾಜ್ಯದಲ್ಲಿ ಕಾಂಗ್ರೆಸ್-ಜೆಡಿಎಸ್ ಮೈತ್ರಿ ಸರ್ಕಾರ ರಚನೆಯಾದ ಬಳಿಕ, ಸರ್ಕಾರ ಇಂದು ಅಥವಾ ನಾಳೆ ಬೀಳುತ್ತದೆ ಎಂದು ಯೋಚನೆ ಮಾಡುತ್ತಲೇ ಬಿಜೆಪಿ ಕಾಲ ಕಳೆಯುತ್ತಿದೆ ಎಂದು ಟೀಕಿಸಿದರು.

ರಾಜ್ಯದ ಮೈತ್ರಿ ಸರ್ಕಾರ ಇಂದು ಪರಿ ಶಿಷ್ಟ ಜಾತಿ ಮತ್ತು ಪಂಗಡದ ಅಭಿವೃದ್ಧಿ ಗಾಗಿ ನೂರಾರು ಕೋಟಿ ಅನುದಾನ ವನ್ನು ಮೀಸಲಿಟ್ಟಿದ್ದು, ರಾಷ್ಟ್ರ ಮತ್ತು ರಾಜ್ಯದ ಉಳಿವಿಗಾಗಿ ಎಲ್ಲರೂ ಮೈತ್ರಿ ಸರ್ಕಾರದ ಅಭ್ಯರ್ಥಿ ಪ್ರಜ್ವಲ್ ಅವರನ್ನು ಗೆಲ್ಲಿಸಬೇಕು ಎಂದು ಮನವಿ ಮಾಡಿದರು.

ಶಾಸಕ ಬಸವರಾಜ ಹೊರಟ್ಟಿ ಮಾತ ನಾಡಿ, ದೇಶದಲ್ಲಿ ಕೋಮುವಾದಿ ಪಕ್ಷ ವಾದ ಬಿಜೆಪಿಯನ್ನು ದೂರವಿಡಲು ಕಾಂಗ್ರೆಸ್-ಜೆಡಿಎಸ್ ಮೈತ್ರಿ ಅಭ್ಯರ್ಥಿ ಪ್ರಜ್ವಲ್ ರೇವಣ್ಣ ಅವರಿಗೆ ಮತ ನೀಡಿ ಎಂದು ಹೇಳಿದರು.

ಹಿಂದಿನಿಂದಲೂ ಕೋಮುವಾದಿ ಪಕ್ಷ ದಲಿತರ ಮೇಲೆ ದೌರ್ಜನ್ಯ ಎಸಗುತ್ತಿದೆ. ಅವರ ಸ್ವಾಭಿಮಾನಕ್ಕೆ ಧÀಕ್ಕೆ ಉಂಟು ಮಾಡುತ್ತಿದ್ದಾರೆ. ರಾಜ್ಯದಲ್ಲಿ ಕಾಂಗ್ರೆಸ್ ಹಾಗೂ ಜೆಡಿಎಸ್ ಮೈತ್ರಿಗೆ ಉತ್ತಮ ಬೆಂಬಲ ವ್ಯಕ್ತವಾಗುತ್ತಿರುವುದನ್ನು ನೋಡಿ ಸಹಿಸಲಾಗದೆ ಇಲ್ಲಸಲ್ಲದ ಆರೋಪ ಗಳನ್ನು ಪ್ರತಿಪಕ್ಷದವರು ಮಾಡುತ್ತಿದ್ದಾರೆ ಎಂದು ದೂರಿದರು.
ಕಾರ್ಯಕ್ರಮದಲ್ಲಿ ಶಾಸಕರಾದ ಕೆ. ಎಸ್.ಲಿಂಗೇಶ್, ಹೆಚ್.ಕೆ.ಕುಮಾರಸ್ವಾಮಿ, ಕೆಪಿಸಿಸಿ ಉಪಾಧ್ಯಕ್ಷ ಬಿ.ಶಿವರಾಂ, ಜಿಪಂ ಸ್ಥಾಯಿ ಸಮಿತಿ ಅಧ್ಯಕ್ಷೆ ಭವಾನಿ ರೇವಣ್ಣ, ಸದಸ್ಯರಾದ ಚಂಚಲ ಕುಮಾರಸ್ವಾಮಿ, ಲತಾ ಮಂಜೇಶ್ವರಿ, ತೌಫಿಕ್, ಇಂದಿರಾ ಧರ್ಮಪ್ಪ, ಎಂ.ಎ.ನಾಗರಾಜ್, ಬಿ.ಡಿ.ಚಂದ್ರೇಗೌಡ, ಛಲವಾದಿ ಮಹಾಸಭಾದ ರಾಜ್ಯಾಧ್ಯಕ್ಷ ಕುಮಾರ್, ತಾಲೂಕು ಜೆಡಿಎಸ್ ಅಧ್ಯಕ್ಷ ಅನಂತ ಸುಬ್ಬರಾಯ್, ಬ್ಲಾಕ್ ಕಾಂಗ್ರೆಸ್ ಅಧÀ್ಯಕ್ಷ ಪೂರ್ಣೇಶ್, ಮುಖಂಡರಾದ ಎಂ.ಆರ್.ವೆಂಕಟೇಶ್, ಜಮಾಲ್, ಈಶ್ವರ ಪ್ರಸಾದ್, ರಾಜು, ಹೊಸಳ್ಳಿರಾಜು, ಈರಪ್ಪ, ಮರಿಯಪ್ಪ ಸೇರಿದಂತೆ ಇತರರಿದ್ದರು.