ವಿದ್ಯಾರ್ಥಿ ಲವೀನ್‍ಲೋಫೇಸ್‍ಗೆ ಸ್ವಾಮಿ ವಿವೇಕಾನಂದ ಸದ್ಭಾವನಾ ಪ್ರಶಸ್ತಿ

ನಾಪೋಕ್ಲು: ಇಲ್ಲಿನ ಸರ್ಕಾರಿ ಪದವಿ ಕಾಲೇಜಿನಲ್ಲಿ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿ ಲವೀನ್‍ಲೋಫೇಸ್ ಅವರಿಗೆ ಸ್ವಾಮಿವಿವೇಕಾನಂದ ಸದ್ಭಾವನಾ ರಾಜ್ಯ ಪ್ರಶಸ್ತಿ ನೀಡಿ ಮುದ್ದೆಬಿಹಾಳ ರಾಜ್ಯ ಯುವಸಂಘಗಳ ಒಕ್ಕೂಟದ ತಾಲೂಕು ಘಟ ಕದ ವತಿಯಿಂದ ಈಚೆಗೆ ಸನ್ಮಾನಿಸಲಾಯಿತು.

ಕರ್ನಾಟಕ ರಾಜ್ಯ ಯುವಸಂಘಗಳ ಒಕ್ಕೂಟ ಹಾಗೂ ಮುದ್ದೆಬಿಹಾಳ ತಾಲೂಕು ಯುವಕಸಂಘಗಳ ಒಕ್ಕೂಟಗಳ ಸಂಯುಕ್ತ ಆಶ್ರಯದಲ್ಲಿ ವಿಜಯನಗರ ಜಿಲ್ಲೆಯ ಮುದ್ದೆ ಬಿಹಾಳ ನಗರದಲ್ಲಿ ನಡೆದ ಸ್ವಾಮಿವಿವೇಕಾನಂದ ಜಯಂತ್ಯೊತ್ಸವ ಹಾಗೂ ರಾಜ್ಯ ಯುವ ಸಮ್ಮೇಳನ ಮತ್ತು ಸ್ವಾಮಿವಿವೇಕಾನಂದ ಸದ್ಭಾವನಾ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಪ್ರಶಸ್ತಿ ವಿತರಿಸಲಾಯಿತು. ಸಾಮಾಜಿಕ ಕಾಳಜಿ ಹಾಗೂ ನಿಸ್ವಾರ್ಥ ಸೇವೆಯನ್ನು ಪರಿಗಣಿಸಿ ಲವಿನ್‍ಲೋಫೆಸ್ ಅವರಿಗೆ 2019ರ ಸಾಲಿನ ಸ್ವಾಮಿವಿವೇಕಾನಂದ ಸದ್ಭಾವನಾ ರಾಜ್ಯ ಪ್ರಶಸ್ತಿಯನ್ನು ನೀಡಿ ಗೌರವಿಸಲಾಗಿದೆ.