ಕಂದಾಯ, ಪಿಂಚಣಿ ಅದಾಲತ್‍ಗೆ ತಹಸೀಲ್ದಾರ್ ರಕ್ಷಿತ್ ಚಾಲನೆ

ಮೈಸೂರು,ಫೆ.13-ಮೈಸೂರು ಜಿಲ್ಲೆಯ ಜಯಪುರ ಹೋಬ ಳಿಯ ಎಲ್ಲಾ ಗ್ರಾಮಗಳ ರೈತರಿಗಾಗಿ ಗುರುವಾರ ಜಯಪುರ ಹೋಬಳಿ ಉಪ ತಹಸೀಲ್ದಾರ್ ಕಚೇರಿಯ ಆವರಣದಲ್ಲಿ ಆಯೋಜಿಸಿದ್ದ ಹೋಬಳಿ ಮಟ್ಟದ ಕಂದಾಯ ಮತ್ತು ಪಿಂಚಣಿ ಅದಾಲತ್ ಕಾರ್ಯಕ್ರಮಕ್ಕೆ ಮೈಸೂರು ತಾಲೂಕು ತಹಸೀಲ್ದಾರ್ ಕೆ.ಆರ್.ರಕ್ಷಿತ್ ಚಾಲನೆ ನೀಡಿದರು.

ರಾಜ್ಯ ಸರ್ಕಾರವು ಕಂದಾಯ ಇಲಾಖೆಯನ್ನು ರೈತರ ಮನೆ ಬಾಗಿಲಿಗೆ ತರುವ ಉದ್ದೇಶದಿಂದ ರೂಪಿಸಿರುವ ಕಂದಾಯ ಮತ್ತು ಪಿಂಚಣಿ ಅದಾಲತ್ ಕಾರ್ಯಕ್ರಮದಲ್ಲಿ ಪೌತಿ ಖಾತೆ, ಪಿಂಚಣಿ, ಆರ್‍ಟಿಸಿ ತಿದ್ದುಪಡಿ, ರೇಷನ್ ಕಾರ್ಡ್, ಹಳೇ ಕ್ರಯ ಪತ್ರದಂತೆ ಖಾತೆ ಬದಲಾವಣೆ ಹಾಗೂ ಇನ್ನಿತರೆ ಇಲಾಖೆಗೆ ಸಂಬಂಧಿಸಿದಂತೆ ಸಾರ್ವಜನಿಕರಿಂದ ಅರ್ಜಿಗಳನ್ನು ಸ್ವೀಕರಿಸ ಲಾಯಿತು. ತಹಶೀಲ್ದಾರ್ ಕೆ.ಆರ್.ರಕ್ಷಿತ್ ಜಯಪುರ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಬಿಸಿಯೂಟ ಯೋಜನೆಗೆ ಸಂಬಂಧಿಸಿದಂತೆ ಪರಿಶೀಲನೆ ನಡೆಸಿ, ಶಾಲೆಯಲ್ಲಿ ಮಕ್ಕಳ ಬಿಸಿಯೂಟ ಕೊಠಡಿಯಲ್ಲಿ ಊಟ ಸೇವಿಸಿದರು.

ಜಯಪುರದಲ್ಲಿ ಹೊಸದಾಗಿ ನಿರ್ಮಾಣ ಹಂತದಲ್ಲಿರುವ ಉಪ ತಹಶೀಲ್ದಾರ್ ಕಚೇರಿಯ ಕಟ್ಟಡ ನಿರ್ಮಾಣ ಕಾಮ ಗಾರಿಯನ್ನು ಪರಿಶೀಲಿಸಿದ ನಂತರ ಜಯಪುರ ಹೋಬಳಿ ಸಮು ದಾಯ ಆರೋಗ್ಯ ಕೇಂದ್ರಕ್ಕೆ ಭೇಟಿ ನೀಡಿ ಆರೋಗ್ಯ ಇಲಾಖೆಯ ಕಾರ್ಯಕ್ರಮಗಳನ್ನು ಹಾಗೂ ಅಲ್ಲಿನ ಎಲ್ಲಾ ವೈದ್ಯಕೀಯ ವಿಭಾಗಗಳನ್ನು ಹಾಗೂ ಮೆಟ್ರಿಕ್ ಪೂರ್ವ ಬಾಲಕರ ವಿದ್ಯಾರ್ಥಿ ನಿಲಯಕ್ಕೆ ಭೇಟಿ ನೀಡಿ ವಿಭಾಗಗಳನ್ನು ಪರಿಶೀಲಿಸಿದರು.

ಕಾರ್ಯಕ್ರಮದಲ್ಲಿ ತಾಪಂ ಅಧ್ಯಕ್ಷೆ ಕಾಳಮ್ಮ ಕೆಂಪರಾಮಯ್ಯ, ಉಪತಹಶೀಲ್ದಾರ್ ಕೆ.ಎಸ್.ಕುಬೇರ್, ಹಾರೋಹಳ್ಳಿ ಗ್ರಾಪಂ ಅಧ್ಯಕ್ಷೆ ಲಕ್ಷ್ಮಮ್ಮ, ಜಯಪುರ ಕೃಷಿ ಅಧಿಕಾರಿ ಗುರುಮೂರ್ತಿ, ಸರ್ವೇ ಸೂಪರ್‍ವೈಸರ್ ಪ್ರವೀಣ್, ಪ್ರಭಾಕರ್, ಹೋಬಳಿಯ ಗ್ರಾಪಂ ಸದಸ್ಯರು, ಮುಖಂಡರು, ಲೆಕ್ಕಾಧಿಕಾರಿಗಳು ಉಪಸ್ಥಿತರಿದ್ದರು.