ಜೆಕೆ ಟೈರ್ಸ್‍ನಿಂದ ತಾವರೆಕೆರೆ ಪುನಶ್ಚೇತನ

ಮೈಸೂರು: ಮೈಸೂರಿನ ಚಾಮುಂಡಿ ಬೆಟ್ಟದ ತಪ್ಪಲಿನಲ್ಲಿರುವ ತಾವರೆಕಟ್ಟೆ ಗ್ರಾಮದಲ್ಲಿರುವ ತಾವರೆಕೆರೆಯನ್ನು ಜೆಕೆ ಟೈರ್ಸ್ ವತಿಯಿಂದ ಪುನಶ್ಚೇತನಗೊಳಿಸಲಾಯಿತು.

ಕಂಪೆನಿಯು ತನ್ನ ಸಾಮಾಜಿಕ ಹೊಣೆಗಾರಿಕೆಯಡಿ ಈ ಕಾಮಗಾರಿಯನ್ನು 2018ರ ಸೆಪ್ಟೆಂಬರ್‍ನಲ್ಲಿ ಆರಂ ಭಿಸಿ, ಕೆರೆಯಲ್ಲಿ 16700 ಘನ ಮೀಟರ್‍ನಷ್ಟು ಹೂಳೆತ್ತಿ, ಕೆರೆಯ ದ್ವೀಪಗಳು ಮತ್ತು ಬದುಗಳನ್ನು ಬಲಗೊಳಿಸಿ ಇದೇ ಮೇ ತಿಂಗಳಲ್ಲಿ ಕಾಮಗಾರಿ ಪೂರ್ಣಗೊಳಿಸಿದೆ. ಈ ಕಾಮಗಾರಿಯನ್ನು ಅನುಷ್ಠಾನಗೊಳಿಸುವ ಹೊಣೆ ಗಾರಿಕೆಯನ್ನು ‘ಮೈರಾಡ’ ಸಂಸ್ಥೆ ವಹಿಸಿಕೊಂಡಿತ್ತು.

ಪುನಶ್ಚೇತನಗೊಂಡ ತಾವರೆಕೆರೆಯ ಉದ್ಘಾಟನೆ ಕಾರ್ಯ ಕ್ರಮ ಇತ್ತೀಚೆಗೆ ನಡೆದಿದ್ದು, ಈ ಕಾರ್ಯಕ್ರಮದಲ್ಲಿ ಮಾತ ನಾಡಿದ ಜೆಕೆ ಟೈರ್ಸ್ ಉಪಾಧ್ಯಕ್ಷ ಈಶ್ವರ್‍ರಾವ್ ಅವರು, ಇಂದಿನ ದಿನಗಳಲ್ಲಿ ನೀರಿನ ಬವಣೆ ಹೆಚ್ಚಾಗಿದೆ ಎಂಬು ದನ್ನು ಅರಿತ ತಮ್ಮ ಕಂಪೆನಿಯು ಮೈಸೂರು ಮಾತ್ರವಲ್ಲದೆ ಕಾರ್ಖಾನೆ ಇರುವ ಇತರ ರಾಜ್ಯಗಳಲ್ಲೂ ಜಲಾನಯನ ಅಭಿವೃದ್ಧಿ ಮತ್ತು ಕೆರೆಗಳ ಪುನಶ್ಚೇತನ ಕಾರ್ಯಕ್ರಮ ಹಮ್ಮಿಕೊಂಡು ಅಂತರ್ಜಲ ಅಭಿವೃದ್ಧಿಗೆ ಶ್ರಮಿಸುತ್ತಿದೆ ಎಂದರು.

ಜಿಲ್ಲಾ ಕೈಗಾರಿಕಾ ಕೇಂದ್ರದ ಸಹಾಯಕ ನಿರ್ದೇಶಕ ನಜೀರ್ ಅಹಮದ್ ಮಾತನಾಡುತ್ತಾ, ಜೆಕೆ ಟೈಯರ್ಸ್ ಕಂಪೆನಿಯು ಜಿಲ್ಲಾ ಕೈಗಾರಿಕಾ ಕೇಂದ್ರದ ಮೂಲಕ ಯೋಜನೆಗಳನ್ನು ರೂಪಿಸುತ್ತಿದ್ದು, ಅದಕ್ಕೆ ಸಂಬಂಧ ಪಟ್ಟಂತೆ ಜಿಲ್ಲಾಧಿಕಾರಿಗಳ ಅಧ್ಯಕ್ಷತೆಯಲ್ಲಿ ನಿಯಮಿತ ವಾಗಿ ಸಭೆಗಳನ್ನು ನಡೆಸಲಾಗುತ್ತಿದೆ ಎಂದರು.

ಜೆಕೆ ಟೈರ್ಸ್ ಜನರಲ್ ಮ್ಯಾನೇಜರ್ ವಿಕ್ರಮ್ ಹೆಬ್ಬಾರ್ ಮಾತನಾಡಿ, ತಮ್ಮ ಸಂಸ್ಥೆಯು ಹುಣಸೂರು ತಾಲೂಕಿ ನಲ್ಲಿ 10 ಗ್ರಾಮಗಳನ್ನು ದತ್ತು ಪಡೆದು ಜಲಾನಯನ ಅಭಿ ವೃದ್ಧಿ ಕಾರ್ಯವನ್ನು ನಬಾರ್ಡ್ ಸಹಯೋಗದೊಂದಿಗೆ ಅನುಷ್ಠಾನಗೊಳಿಸುತ್ತಿದೆ ಎಂದರು. ಜೆಕೆ ಟೈರ್ಸ್ ಮುಖ್ಯ ವ್ಯವಸ್ಥಾಪಕ ಅನುಪಮ್ ಬಾಜಪೇಯಿ, ಮೈಕ್ಯಾಪ್ಸ್ ಸಂಸ್ಥೆ ಕಾರ್ಯನಿರ್ವಾಹಕ ನಿರ್ದೇಶಕ ವಿಲಿಯಂ ಡಿಸೋಜ, ಜೆಕೆ ಟೈಯರ್ಸ್‍ನ ರಂಗಸ್ವಾಮಿ, ನಾಗರಾಜ್, ಮೈಕ್ಯಾಪ್ಸ್ ಸಂಸ್ಥೆಯ ಲೋಕೇಶ್, ಹೆಚ್.ಎಸ್.ಶಂಕರ್, ಮಹದೇವಯ್ಯ, ಚಾಮುಂಡಿ ಬೆಟ್ಟ ಪಿಡಿಓ ಕುಮಾರಿ ಪೂಣ ್ಮ ಉಪಸ್ಥಿತರಿದ್ದರು. ಈ ವೇಳೆ ಕೆರೆ ಏರಿ ಮೇಲೆ ಸಸಿಗಳನ್ನು ನೆಡಲಾಯಿತು.